ಮೊಣಕಾಲು ನೋವಿನಿಂದ ಗುಣಮುಖರಾಗಿರುವ ವೇಗಿ ಮೊಹಮ್ಮದ್ ಶಮಿ ರಣಜಿ ಬಳಿಕ ಇದೀಗ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯಾವಳಿಯಲ್ಲೂ ತಮ್ಮ ಉತ್ತಮ ಪ್ರದರ್ಶನ ಮುಂದುವರಿಸಿದ್ದಾರೆ. ಆದರೆ ಅವರೀಗ ಸುದ್ದಿಯಾಗಿರುವುದು ತಮ್ಮ ಸ್ಫೋಟಕ ಬ್ಯಾಟಿಂಗ್ ನಿಂದ!ಹೌದು ಬಂಗಾಳ ಮತ್ತು ಚಂಡೀಗಢಗಳ ನಡುವೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪ್ರಿಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅವರು ತ್ವರಿತ ಗತಿಯಲ್ಲಿ ರನ್ ಬಾರಿಸಿರುವುದು ಇದೀಗ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ.
10ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಬಂದ ಮೊಹಮ್ಮದ್ ಶಮಿ ಅವರು ಕೇವಲ 17 ಎಸೆತಗಳಲ್ಲಿ 32 ರನ್ ಬಾರಿಸಿರುವುದು ಇದೀಗ ಹೊಸ
ಇತಿಹಾಸ ಸೃಷ್ಟಿಗೆ ಕಾರಣವಾಗಿದೆ.ನಾಟೌಟ್ ಆಗಿರುವವರಲ್ಲಿ ಫಸ್ಟ್: ಈ ಹಿಂದೆ 2019ರಲ್ಲಿ ಒಡಿಶಾದ ರಾಜೇಶ್ ಮೊಹಾಂತಿ ಅವರು ಚತ್ತೀಸ್ ಗಢದ ವಿರುದ್ಧ 36 ರನ್ ಗಳಿಸಿ ಔಟಾಗಿದ್ದರು.
ಇದು ಹತ್ತನೇ ಕ್ರಮಾಂಕದಲ್ಲಿ ಬ್ಯಾಟರ್ ಒಬ್ಬ ಗಳಿಸಿರುವ ಅತ್ಯಧಿಕ ರನ್ ಗಳಾವೆ. ಆದರೆ ಅದರಲ್ಲಿ ಮೊಹಾಂತಿ ಅವರು ಔಟಾಗಿದ್ದರು. ಹೀಗೆ ಗಣನೆಗೆ ತೆಗೆದುಕೊಂಡರೆ ಶಮಿ ಅವರದ್ದು 10ನೇ ಕ್ರಮಾಂಕದ ಬ್ಯಾಟರ್ ಹೊಡೆದಿರುವ 2ನೇ ಅತ್ಯಧಿಕ ರನ್ ಆಗಿದೆ. ನಾಟೌಟ್ ಆಗಿ ಉಳಿದವರಲ್ಲಿ ಮಾತ್ರ ಶಮಿ ಅವರದ್ದೇ ಅತ್ಯಧಿಕ ರನ್. ಇನ್ನುಳಿದಂತೆ ಸೌರಾಷ್ಟ್ರದ ಶೌರ್ಯ ಸನಾದಿಯಾ (30), ಧರ್ಮೇಂದ್ರ ಸಿಂಗ್ ಅನಿರುದ್ಧ್ ಸಿಂಗ್ ಜಡೇಜಾ(29), ಕ್ಷೇಮಲ್ ಮಕರಂದ್(28) ಅವರು ನಂತರದ ಸ್ಥಾನಗಳಲ್ಲಿದ್ದಾರೆ.
ಟಿ20 ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಬಂಗಾಳ ತಂಡ 16ನೇ ಓವರ್ ನಲ್ಲಿ 114 ರನ್ ಗಳಿಗೆ 8 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿ ಸಿಲುಕಿತ್ತುಯ ಆಗ ಕ್ರೀಸಿಗೆ ಆಗಮಿಸಿದ ಶಮಿ ಅವರು ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು.ಕೇವಲ 17 ಎಸೆತಗಳನ್ನು ಎದುರಿಸಿದ ಅವರು 188.24 ಸ್ಚ್ರೈಕ್ ರೇಟ್ ನಲ್ಲಿ 32 ರನ್ ಗಳಿಸಿ ನಾಟೌಟ್ ಆಗಿ ಉಳಿದರು.