ಎಂ ಎನ್ ಕೋಟೆ: ಸಂಸ್ಕೃತ ಭಾಷೆಯ ಶ್ಲೋಕಗಳನ್ನು ವಿದ್ಯಾರ್ಥಿಗಳು ಅಭ್ಯಾಸ ಮಾಡುವುದರ ಮೂಲಕ ಸಮಾಜದಲ್ಲಿ ಉನ್ನತ ಸ್ಥಾನಗಳನ್ನು ಪಡೆದುಕೊಳಲು ಸಂಸ್ಕೃತ ಭಾಷೆ ಅನುಕೂಲವಾಗುತ್ತದೆ ಎಂದು ಬೆಟ್ಟದಹಳ್ಳಿ ಗವಿಮಠಧ್ಯಕ್ಷರಾದ ಶ್ರೀ ಚಂದ್ರಶೇಖರಸ್ವಾಮಿಗಳು ತಿಳಿಸಿದರು.
ಗುಬ್ಬಿ ತಾಲ್ಲೂಕಿನ ಶ್ರೀ ಶಿವಕುಮಾರಸ್ವಾಮಿ ಸಂಸ್ಕೃತ ಪಾಠಶಾಲೆ ಚೇಳೂರು ಇವರ ಸಂಯುಕ್ತ ಆಶ್ರಯದಲ್ಲಿ ಹೊಸಕೆರೆಯಲ್ಲಿ ಹಮ್ಮಿಕೊಂಡಿದ್ದ ಅಸ್ಮಾಕಮ್ ಸಂಸ್ಕೃತಮ್ ಸರಣಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಸಂಸ್ಕೃತ ಭಾಷೆಗೆ ಸುಮಾರು ಐದು ಸಾವಿರ ವರ್ಷಗಳಇತಿಹಾಸವಿದೆ.ಪ್ರತಿಯೊಬ್ಬ ವಿದ್ಯಾರ್ಥಿಗಳು ಸಂಸ್ಕೃತ ಭಾಷೆಯನ್ನು ಕಲಿಯಬೇಕು. ಸಂಸ್ಕೃತ ಭಾಷೆ ಕನ್ನಡ ಅನೇಕ ಭಾಷೆಗಳ ತಾಯಿ ಎಂದೇ ಕರೆಯಲಾಗಿದೆ.
ಸುಮಾರು ನೂರಾರು ಭಾಷೆಗಳು ಸಂಸ್ಕೃತ ಭಾಷೆಯ ಪದಗಳನ್ನು ಪಡೆದುಕೊಂಡಿದೆ.ನಾವೆಲ್ಲರೂ ಸಹ ಸಂಸ್ಕೃತ ಭಾಷೆಗೆ ಮಹತ್ವ ಕೊಡಬೇಕು.ಭಾಷೆಗಳು ಸಂಸ್ಕೃತ ಪದಗಳಲ್ಲಿ ವಿಲೀನವಾಗಿದೆ.ಸರ್ಕಾರ ಸಂಸ್ಕೃತ ಬಾಷೆಯನ್ನ ವಿಶ್ವವಿದ್ಯಾಲಯ ಸರ್ಕಾರಿ ಇಲಾಖೆಗಳು ಹಾಗೂ ಶಾಲೆಗಳಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳಾಗಿದೆ.
ವಿದ್ಯಾರ್ಥಿಗಳು ಸಂಸ್ಕೃತ ಭಾಷೆಯನ್ನು ಕಲಿಯವುದರ ಜತೆಗೆ ಉಳಿಸಿ ಬೆಳೆಸುವುವದು ನಮ್ಮೆಲ್ಲರ ಜವಬ್ದಾರಿಯಾಗಿದೆ.ವಿದ್ಯಾರ್ಥಿಗಳು ಸಂಸ್ಕೃತ ಭಾಷೆ ಕಲಿತರೆ ಗುಣ ಮಟ್ಟದ ಶಿಕ್ಷಣ ಪಡೆಯಲು ಸಾಧ್ಯವಾಗುತ್ತದೆ ಆದ್ದರಿಂದ ಸಂಸ್ಕತ ಭಾಷೆಗೆ ಹೆಚ್ಚು ಮಹತ್ವ ನೀಡಬೇಕು ಎಂದು ತಿಳಿಸಿದರು.ಇದೇ ಸಂಧರ್ಭದಲ್ಲಿ ಸಂಸ್ಕೃತ ಪಾಠಶಾಲೆಯ ಮುಖ್ಯ ಶಿಕ್ಷಕರಾದ ಶಿವರುದ್ರಪ್ಪ, ಸುಧಾ ಕೆ.ಎಸ್. ಚಿನ್ಮಾಯಿ, ಅನಸೂಯ, ವಿದ್ವಾನ್ ಸಿದ್ದರಾಮಣ್ಣ ಹಾಗೂ ಶಿಕ್ಷಕರು ಭಾಗವಹಿಸಿದ್ದರು.