ದೇವನಹಳ್ಳಿ: ಹೊಸ ಕ್ಯಾಲೆಂಡರ್ ವರ್ಷ 2025 ನ್ನು ದೇವನಹಳ್ಳಿಯಲ್ಲಿ ಎಲ್ಲರೂ ಕುಣಿದು ಕುಪ್ಪಳಿಸಿ ಸಂಬ್ರಮದಿಂದ ಸ್ವಾಗತಿಸಿದರು. ಮದ್ಯಪ್ರಿಯರಿಗಾಗಿ ಬಾರ್ ಮತ್ತು ರಸ್ಟೋರೆಂಟ್ ಗಳು ವಿದ್ಯುತ್ ದೀಪಗಳಿಂದ ಸಿಂಗಾರಗೊಳಿಸಿ ಆಕರ್ಷಿಸಿದವು. ಎಲ್ಲರ ಮನೆಗಳ ಮುಂದೆ 2025 ಕ್ಕೆ ಸ್ವಾಗತ ಎಂಬ ರಂಗೋಲಿ ವರ್ಣಗಳಲ್ಲಿ ಹಾಕಲಾಗಿತ್ತು.
ಹೊಸ ವರ್ಷದ ಹಿನ್ನೆಯಲ್ಲಿ ಬಿಗಿ ಪೋಲಿಸ್ ಬಂದೋಬಸ್ತು ಮಾಡಲಾಗಿತ್ತು. 24 ಘಂಟೆಯ ಅವಧಿಯಲ್ಲಿ 19 ಡ್ರಿಂಕ್ ಆಂಡ್ ಡ್ರೈವ್ ಕೇಸ್ ಹಾಕಾಲಿಗೆ ಎಂದು ತಿಳಿಸಿದ ಸಂಚಾ ವಿಭಾಗದ ಪೋಲಿಸರು ಚಿಕ್ಕಸಣ್ಣೆ ಗೇಟ್ ಬಳಿ ಕಾರುಗಳು ಹಾಘು ಲಾರಿ ನಡುವೆ ಸರಣಿ ಅಪಘಾತ ಬುಧವಾರ ಸಂಭವಿಸಿದ್ದು ಕಾರಿನ ಚಾಲಕನೋರ್ವನಿಗೆ ಗಂಭೀರಗಾಯವಾಗಿರುವುದು ಹೊರತು ಪಡಿಸಿ ಯಾವುದೆ ಅಪಘಾತ ಸಂಭವಿಸಿಲ್ಲ, 2024 ರ ಜನವರಿಯಿಂದ ಡಿಸಂಬರ್ 31 ರ ವರೆಗೂ 62 ರಸ್ತೆ ಅಪಘಾತಗಳಾಗಿದ್ದು 64 ಜನ ಮೃತಪಟ್ಟಿರುತ್ತಾರೆ. ಇನ್ನೂ 29 ವೀಲಿಂಗ್ ಕೇಸ್ ದಾಖಲಾಗಿದೆ ಎಂದು ತಿಳಿಸಿದರು.
ಕಾನೂನು ಸುವ್ಯವಸ್ಥೆ ವಿಭಾಗದ ಇನ್ಸ್ಪೆಕ್ಟರ್ ಧರ್ಮೆಗೌಡ ಮಾತನಾಡಿ ಕಳೆದ ಒಂದು ವರ್ಷದ ಅವಧಿಯಲ್ಲಿ ನಮ್ಮ ಠಾಣಾ ವ್ಯಾಪ್ತಿಯಲ್ಲಿ ಯಾವುದೆ ಕೊಲೆ ಪ್ರಕರಣ ದಾಖಲಾಗಿಲ್ಲ ಬದಲಿಗೆ ಪ್ರಮುಖ ವಾಗಿ 210 ವಿವಿಧ ಪ್ರಕರಣಗಳ ಎಫ್.ಐ.ಆರ್ ಆಗಿದೆ, ಪೋಸ್ಕೋ ಕೇಸ್ನಲ್ಲಿ ಜೈಲಿನಲ್ಲಿದ್ದು ರೋಲ್ ಮೇಲೆ ಹೊರ ಬಂದಿದ್ದ ಯುವನೊರ್ವ ತನ್ನ ಸ್ನೇಹಿತನ ಜೊತೆಗೂಡಿ ಅತೀ ಮದ್ಯಪಾನ ಮಾಡಿ ಗಾಂಜಾ ಸೇವಿಸಿ ಡಿ.31 ರ ಮಂಗಳವಾರ ಸಂಜೆ 4 ರ ಸಮಯದಲ್ಲಿ ದೇವನಹಳ್ಳಿ ಪ್ರವಾಸಿ ಮಂದಿರದ ಮುಂದೆ ಕ್ಷುಲ್ಲಕ ಕಾರಣಕ್ಕೆ ಅಪರ ಜಿಲ್ಲಾಧಿಕಾರಿ ವಾಹನ ಚಾಲಕನ ಮೇಲೆ ಹಿಗ್ಗಾಮುಗ್ಗ ಹಲ್ಲೆ ಮಾಡಿ ಜಿಲ್ಲಾಧಿಕಾರಿಗಳ ಕಾರನ್ನು ಹೆಲ್ಮೆಟ್ನಿಂದ ಹೊಡೆದು ಕಾರಿನ ಗ್ಲಾಸ್ಗಳನ್ನು ಜಖಂ ಮಾಡಿದ್ದು ಅವರಿಬ್ಬರನ್ನು ಬಂದಿಸಿ ನ್ಯಾಯಾದೀಶರ ಮುಂದೆ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಇದನ್ನು ಹೊರತುಪಡಿಸಿ ನಮ್ಮ ವ್ಯಾಪ್ತಿಯಲ್ಲಿ ಹೊಸ ವರ್ಷ ಸ್ವಾಗತ ಸಂಭ್ರಮ ಶಾಂತಿಯುತವಾಗಿ ನಡೆದಿದೆ ಎಂದರು.
ದೇವಾಲಯಗಳಲ್ಲಿ ವಿಶೇಷ ಪೂಜೆ: ಹೊಸವರ್ಷ ಆರಂಭದ ಅಂಗವಾಗಿ ದೇವನಹಳ್ಳಿಯ ಪ್ರಧಾನ ಧೈವ ಶ್ರೀ ರುಕ್ಮೀಣಿ ಸತ್ಯಭಾಮ ಸಮೇತ ವೇಣುಗೋಪಾಲಸ್ವಾಮಿಗೆ ಪುರಸಭಾ ಸದಸ್ಯ ಆರ್. ರಘು, ಡಾಲಿ ರವಿ ವಿಶೇಷ ವೆಂಕಟರಮಣಸ್ವಾಮಿ ಅಲಂಕಾರ ಮಾಡಿಸಿದ್ದು ಭಕ್ತರನ್ನು ಆಕರ್ಷಿಸಿತು. ಅದೇ ರೀತಿ ಅತ್ತಿಬೆಲೆಯ ಸಾಯಿಬಾಬಾ ದೇವಸ್ಥಾನ ಸೇರಿದಂತೆ ಎಲ್ಲಾ ದೇವಾಲಯಗಳಲ್ಲಿ ಭಕ್ತರ ದಂಡು ಕಂಡು ಬಂದಿತು. ದೇವಾಲಯಗಳಲ್ಲಿ ಅನ್ನದಾನ ವ್ಯವಸ್ಥೆ ಮಾಡಲಾಗಿತ್ತು.
ಸಚಿವ ಕೆಎಚ್. ಮುನಿಯಪ್ಪನವರು ವೇಣೂಗೋಪಾ¯ಸ್ವಾಮಿ ದೇವಾಲಯಕ್ಕೆ ಬೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಅವರು ಮಾತನಾಡಿ ನಾಡಿನಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸಲಿ ಉತ್ತಮ ಮಳೆ ಬೆಳೆಯಾಗಲಿಎಂದು ದೇವರನ್ನು ಪ್ರಾರ್ಥಿಸಲಾಗಿದೆ ಎಂದರು. ಮುಂದುವರಿದು ಮಾತನಾಡಿ ಇನ್ಪೋಸಿಸ್ ಟ್ರಸ್ಟ ವತಿಯಿಂದ ದೇವನಹಳ್ಳಿ ತಾಲೂಕಿನ 33 ಶಾಲೆಗಳು ಸೇರಿದಂತೆ ಜಿಲ್ಲೆ 101 ಸರ್ಕಾರಿ ಶಾಲೆಗಳನ್ನು ಅತ್ಯಂತ ಸುಸಜ್ಕಿತವಾಗಿ ಅಭಿವೃದ್ದಿಪಡಿಸಲಾಗುವುದು ಈ ಕುರಿತು ಇಂದೇ ಸಭೆ ನಡೆಸಿದ್ದೆನೆ ಎಂದರು.
ಸಚಿವರ ದೇವಾಲಯಕ್ಕೆ ಬೆಟಿ ನೀಡಿದ ಸಂದರ್ಭದಲ್ಲಿ ತಹಶೀಲ್ದಾರ್ ಎಚ್.ಬಾಲಕೃಷ್ಣ, ಪುರಸಭಾ ಮುಖ್ಯಾಧಿಕಾರಿ ಸಿ.ದೊಡ್ಡಮಲವಯ್ಯ, ತಾಲೂಕು ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಸಿ.ಜಗನ್ನಾಥ್, ಅಣ್ಣೇಶ್ವರ ಗ್ರಾ.ಪಂ. ಮಾಜಿ ಅದ್ಯಕ್ಷ ಎ.ಚಂದ್ರಶೇಖರ್, ಪುರಸಭಾ ಸದಸ್ಯರಾದ ಗೀತ ಶ್ರೀಧರಮೂರ್ತಿ, ಸುಮಿತ್ರ , ಡಾಲಿ ರವಿ, ಮಂಜುನಾಥ್, ಕರವೇ ರಾಜ್ಯ ಗೌರವಾಧ್ಯಕ್ಷ ಎನ್.ಚಂದ್ರಶೇಖರ್ . ಪೌರಕಾರ್ಮಿಕರ ಸಂಘದ ಅಧ್ಯಕ್ಷ ಮಂಜಪ್ಪ ಮುಂತಾದವರಿದ್ದರು.