ನಟ ಅರವಿಂದರಾವ್ ಪ್ರಧಾನ ಪಾತ್ರದಲ್ಲಿ ಮಿಂಚಲಿದ್ದಾರೆ. ಸುಮಾರು 75 ಹೆಚ್ಚು ಧಾರವಾಹಿಗಳು. 50ರ ಹತ್ತಿರ ಹತ್ತಿರ ಸಿನಿಮಾ ಮಾಡಿರುವ ಯಶವಂತ್ 25ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಇದೀಗ ಯಶವಂತ್ ಬಿಜೂರು ಚಿತ್ರ ನಿರ್ಮಾಣ ಮತ್ತು ನಿರ್ದೇಶನಕ್ಕೆ ಕೈ ಹಾಕಿದ್ದಾರೆ.
ಬಂಡಿ ಮಹಾ ಕಾಳಮ್ಮ ದೇವಾಲಯದಲ್ಲಿ ಚಿತ್ರದ ಮುಹೂರ್ತ ಸಮಾರಂಭ ನಡೆಯಿತು. ರವಿ ಸಾಲಿಯಾನ್ ನಾಯಕನಾಗಿ ಅಮೃತ ಉಪ್ಪಾರ್ ನಾಯಕಿಯಾಗಿ ನಟಿಸುತ್ತಿರುವ ಚಿತ್ರ ಮೊದಲ ಹಂತದ ಚಿತ್ರೀಕರಣ ಪೂರೈಸಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ಚಿತ್ರೀಕರಣ ಮುಂದುವರೆಯಲಿದೆ ಎನ್ನುತ್ತಾರೆ ಯಶವಂತ್ ಬಿಜೂರು.