ತಿ.ನರಸೀಪುರ: ಹನುಮ ಜಯಂತಿ ಕಾರ್ಯಕ್ರಮ ಈ ಬಾರಿ ಹೋಮ ಹವನ ಹಾಗೂ ಪ್ರಸಾದ ವಿನಿಯೋಗಕ್ಕೆ ಮಾತ್ರ ಸೀಮಿತವಾಯಿತು.ಪಟ್ಟಣದ ಶ್ರೀವೀರಾಂಜನೇಯ ಧರ್ಮ ಜಾಗೃತಿ ಬಳಗದ ವತಿಯಿಂದ ಜರುಗಿದ 6 ನೇ ವರ್ಷದ ಹನುಮ ಜಯಂತಿ ಕಾರ್ಯಕ್ರಮ ಈ ಬಾರಿ ಯಾವುದೇ ವಿಜೃಂಭಣೆ ಕಾಣಲಿಲ್ಲ ಗುಂಜಾ ನರಸಿಂಹ ಸ್ವಾಮಿ ದೇವಾಲಯದ ಆವರಣದಲ್ಲಿ ಹನುಮನ ವಿಗ್ರಹವಿಟ್ಟು ಪೂಜೆ ಮಾಡಿ ಪ್ರಸಾದ ವಿತರಣೆ ಮಾಡಲಾಯಿತು.
ಈ ವೇಳೆ ಸುದ್ದಿಗಾರರ ಜೊತೆ ಶ್ರೀವೀರಾಂಜನೇಯ ಧರ್ಮ ಜಾಗೃತಿ ಬಳಗದ ಮುಖ್ಯಸ್ಥ ರಾಮನುಜಮ್ ರಾಜ್ ಗೋಪಲ್ ಮಾತನಾಡಿ ಕಳೆದ ಐದು ವರ್ಷಗಳಿಂದ ಪಟ್ಟಣದಲ್ಲಿ ಹನುಮ ಜಯಂತಿ ವೈವಿಧ್ಯಮಯ ಕಲಾತಂಡಗಳ ಉಪಸ್ಥಿಯಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆಯುತಿತ್ತು ಆದರೆ ಈ ಬಾರಿ ತಾಲ್ಲೂಕು ಆಡಳಿತ ಕಾನೂನು ಸುವ್ಯವಸ್ಥೆ ಮುಂದಿಟ್ಟು ಹನುಮ ಜಯಂತಿಗೆ ಅವಕಾಶ ಕೂಡಲಿಲ್ಲ ಜಿಲ್ಲಾಡಳಿತ ಸಹ ಅನುಮತಿ ನೀಡಲಿಲ್ಲ ಕೊನೆಗೆ ಹೈಕೋರ್ಟ್ ಪೂಜೆ ಮತ್ತು ಪ್ರಸಾದ ವಿನಿಯೋಗಕ್ಕೆ ಅವಕಾಶ ಮಾಡಿಕೊಟ್ಟಿತು ಎಂದರು.
ಮುಂದುವರಿದು ಮಾತನಾಡಿದ ರಾಮನುಜಮ್ ರಾಜ್ ಗೋಪಾಲ್ ಈ ನೆಲದ ಕಾನೂನಿಗೆ ಎಲ್ಲರೂ ಗೌರವ ಕೂಡಬೇಕು ಆದರಂತೆ ನ್ಯಾಯಾಲಯದ ತೀರ್ಪನ್ನು ಗೌರವಿಸಿ ಹನುಮ ಜಯಂತಿ ಆಚರಣೆ ಮಾಡಿದ್ದೇವೆ. ಲೋಕಕಲ್ಯಾಣಾರ್ಥವಾಗಿ ಬೆಳ್ಳಿಗ್ಗೆ ತಾರಕ ಹೋಮ ಮಾಡಿಸಿದ್ದೇವೆ ನಂತರ ಪ್ರಸಾದ ವಿನಿಯೋಗ ಮಾಡಿದ್ದೇವೆ ಮುಂದಿನ ವರ್ಷ ನರಸೀಪುರ ಜನತೆಯ ವಿಶ್ವಾಸ ಮತ್ತು ಸಹಕಾರದೊಂದಿಗೆ ವಿಜೃಂಭಣೆಯಿಂದ ಹನುಮ ಜಯಂತಿ ಆಚರಣೆ ಮಾಡುತ್ತೇವೆ ಎಂದು ಆಶಾ ಭಾವನೆ ವ್ಯಕ್ತ ಪಡಿಸಿದರು.
ಹನುಮ ಜಯಂತಿ ಕಾರ್ಯಕ್ರಮದಲ್ಲಿ ಸಾಹಸ್ರಾರು ಸಂಖ್ಯೆಯಲ್ಲಿ ಹನುಮಭಕ್ತರು ಭಾಗವಹಿಸಿದ್ದರು ಶ್ರೀ ವೀರಾಂಜುನೇಯ ಧರ್ಮ ಜಾಗೃತಿ ಬಳಗ ಬಹಳ ಅಚ್ಚುಕಟ್ಟಾಗಿ ಶ್ರದ್ದಪೂರ್ವಕವಾಗಿ ಕಾರ್ಯಕ್ರಮ ನೆರವೇರಿಸಿದರು.