ಅAಡರ್ ೧೯ ಟಿ೨೦ ವಿಶ್ವಕಪ್ ವಿಜೇತ ಆಸ್ಟ್ರೇಲಿಯಾ ತಂಡದ ಬ್ಯಾಟರ್ ಹರ್ಜನ್ ಸಿಂಗ್ ಅವರು ಸಿಡ್ನಿ ಗ್ರೇಡ್ ಕ್ರಿಕೆಟ್ನಲ್ಲಿ ಮಾಡಿರುವ ಅತ್ಯಪೂರ್ವ ಸಾಧನೆ. ವೆಸ್ಟರ್ನ್ ಸಬರ್ಬ್್ಸತಂಡದ ಪರ ಆಡಿದ ಅವರು ಸಿಡ್ನಿ ಕ್ರಿಕೆಟ್ ಕ್ಲಬ್ ವಿರುದ್ಧ ೧೪೧ ಎಸೆತಗಳಲ್ಲಿ ೩೧೪ ರನ್ ಗಳಿಸಿದರು. ಈ ಇನ್ನಿಂಗ್ಸ್ನಲ್ಲಿ ಅವರು ೩೫
ಸಿಕ್ಸರ್ಗಳನ್ನು ಬಾರಿಸಿದ್ದು ವಿಶೇಷವಾಗಿತ್ತು. ಈ ಭರ್ಜರಿ ಪ್ರದರ್ಶನದಿಂದ ಅವರ ತಂಡ ೪೮೩/೫ ರ ದೊಡ್ಡ ಮೊತ್ತವನ್ನು ಗಳಿಸಿತು.
ಭಾರತೀಯ ಮೂಲದ ಹರ್ಜಸ್ ಸಿಂಗ್ ಅವರು ೨೦೨೪ ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಅಂಡರ್-೧೯ ಟಿ೨೦ ವಿಶ್ವಕಪ್ ಗೆದ್ದ ಆಸ್ಟೆçÃಲಿಯಾ ತಂಡದ ಭಾಗವಾಗಿದ್ದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದ ಅವರು ೩೫ನೇ ಓವರ್ನಲ್ಲಿ ೭೪ ಎಸೆತಗಳಲ್ಲಿ ತಮ್ಮ ಶತಕವನ್ನು ಪೂರೈಸಿದರು. ನಂತರದ
ಇನ್ನಿAಗ್ಸ್ನಲ್ಲಿ ಅವರು ಅಸಾಧಾರಣ ಬ್ಯಾಟಿಂಗ್ ಪ್ರದರ್ಶಿಸಿದರು. ಅವರು ಮುಂದಿನ ೬೭ ಎಸೆತಗಳಲ್ಲಿ ೨೧೪ ರನ್ ಗಳಿಸಿದರು.
ಅವರತಂಡದ ಇತರ ಯಾವುದೇ ಬ್ಯಾಟರ್ ಅರ್ಧಶತಕ ಗಳಿಸಲಿಲ್ಲ. ಆರಂಭಿಕ ಆಟಗಾರರು ೩೦ ರ ಆಸುಪಾಸಿನಲ್ಲಿ ರನ್ ಗಳಿಸಿದ್ದರು. ಇದೀಗ ಭಾರತ ತಂಡ ಆಸ್ಟೆçÃಲಿಯಾ ಪ್ರವಾಸ ಮಾಡಲಿದ್ದು ವೈಟ್ ಬಾಲ್ ಸರಣಿ ಆಡಲಿದೆ. ಹೀಗಾಗಿ ಹರ್ಜಸ್ ಸಿಂಗ್ ಅವರು ಆಸ್ಟೆçÃಲಿಯಾ ತಂಡದಲ್ಲಿ ಸ್ಥಾನ ಪಡೆಯುತ್ತಾರಾ
ಎಂಬುದೇ ಕುತೂಹಲದ ಸಂಗತಿಯಾಗಿದೆ.
ಪರಿಶ್ರಮಕ್ಕೆ ಸಿಕ್ಕ ಫಲ ಪಂದ್ಯದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಖಂಡಿತವಾಗಿಯೂ, ಇದು ನಾನು ನನ್ನಿಂದಲೇ ಕಂಡ ಅತ್ಯಂತ
ಕ್ಲೀನ್ ಬಾಲ್-ಸ್ಟೆçöÊಕಿಂಗ್ ಆಗಿದೆ. ಇದು ನನಗೆ ತುಂಬಾ ಹೆಮ್ಮೆಯ ವಿಷಯ. ಏಕೆಂದರೆ ನಾನು ಆಫ್-ಸೀಸನ್ನಲ್ಲಿ ನನ್ನ ಪವರ್-ಹಿಟ್ಟಿಂಗ್ ಮೇಲೆ ಸಾಕಷ್ಟು ಕೆಲಸ ಮಾಡಿದ್ದೇನೆ. ಮತ್ತು ಇಂದು ಅದು ಫಲ ನೀಡಿರುವುದು ನಿಜಕ್ಕೂ ವಿಶೇಷವಾಗಿದೆ” ಎಂದು ಹೇಳಿದರು.
ಅಂಡರ್ ೧೯ ಟಿ೨೦ ವಿಶ್ವಕಪ್ ೨೦೨೪ ರ ಫೈನಲ್ನಲ್ಲಿ ಹರ್ಜಸ್ ಸಿಂಗ್ ಭಾರತದ ಉದಯ್ ಸಹಾರನ್ ನೇತೃತ್ವದ ತಂಡದ ವಿರುದ್ಧ ಅರ್ಧಶತಕ ಗಳಿಸಿದ್ದರು. ಆ ಪಂದ್ಯದಲ್ಲಿ ೭೯ ರನ್ ಜಯ ಗಳಿಸಿದ ಆಸ್ಟೆçÃಲಿಯಾ ತಂಡ ಚಾAಪಿಯನ್ ಆಗಿತ್ತು. ಅವರ ಕೆಲವು ಅಂಡರ್-೧೯ ತಂಡದ ಸಹ ಆಟಗಾರರು ಫಸ್ಟ್-ಕ್ಲಾಸ್ ಕ್ರಿಕೆಟ್ ಆಡಲು ಹೋದರು. ಆದರೆ ಹರ್ಜಸ್ ಸಿಂಗ್ಗೆ ನ್ಯೂ ಸೌತ್ ವೇಲ್ಸ್ ರೂಕಿ ಕಾಂಟ್ರಾಕ್ಟ್ ಸಿಗಲಿಲ್ಲ.