ಹುಬ್ಬಳ್ಳಿ: ಕೃಷಿ ವಿಶ್ವವಿದ್ಯಾಲಯ, ಧಾರವಾಡದ ೩೯ನೇ ಸಂಸ್ಥಾಪನಾ ದಿನಾಚರಣೆ ಸಮಾರಂಭವು ಅಕ್ಟೋಬರ್ ೧೦ ರಂದು ಮುಂಜಾನೆ ೧೧.೦೦ ಘಂಟೆಗೆ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ನೆರವೇರಿತು. ಕೃವಿವಿಯ ಸಹ ಕುಲಾಧಿಪತಿಗಳು ಹಾಗೂ ಕರ್ನಾಟಕ ಸರ್ಕಾರದ ಕೃಷಿ ಸಚಿವರಾದ ಎನ್. ಚಲುವರಾಯಸ್ವಾಮಿ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ೩೯ ವಸಂತಗಳನ್ನು ಯಶಸ್ವಿಯಾಗಿ ಪೂರೈಸಿದ ವಿಶ್ವವಿದ್ಯಾಲಯವನ್ನು ಅಭಿನಂದಿಸುತ್ತಾ, ರಾಷ್ಟç ಮಟ್ಟದ ಶ್ರೇಣಿಯಲ್ಲಿ ವಿಶ್ವವಿದ್ಯಾಲಯವು ಇನ್ನೂ ಹೆಚ್ಚಿನ ಮಟ್ಟದಲ್ಲಿ ಸಾಧನೆ ಮಾಡಲಿ ಎಂದು ಆಶಿಸಿದರು. ಜೊತೆಗೆ ಎಲ್ಲ ಆಧುನಿಕ ತಂತ್ರಜ್ಞಾನಗಳು ರೈತರನ್ನು ತಲುಪಲಿ ವಿಶ್ವವಿದ್ಯಾಲಯಗಳು ಶ್ರಮಿಸಬೇಕೆಂದು ಕರೆ ಕೊಟ್ಟರು. ಕೃಷಿ ಪದವಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಇದೇ ಪ್ರಥಮ ಬಾರಿಗೆ ಕರ್ನಾಟಕ ರಾಜ್ಯದಲ್ಲಿ ಮೂರು ಖಾಸಗಿ ಕೃಷಿ ವಿಜ್ಞಾನ ಮಹಾವಿದ್ಯಾಲಯಗಳ ಆರಂಭಕ್ಕೆ ಕರ್ನಾಟಕ ಸರ್ಕಾರ ಒಪ್ಪಿಗೆ ನೀಡಿದ್ದನ್ನು ಸ್ಮರಿಸಿ, ವಿಶ್ವವಿದ್ಯಾಲಯದ ಭೋಧನೆ, ಸಂಶೋಧನೆ ಹಾಗೂ ವಿಸ್ತರಣಾ ಚಟುವಟಿಕೆಗಳಲ್ಲಿ ಸಾಧಿಸಿದ ಸಾಧನೆಗಳು ಹಾಗೂ ರೈತರ ಆರ್ಥಿಕ ಬಲವರ್ಧನೆಗಾಗಿ ವಿಶ್ವವಿದ್ಯಾಲಯವು ಅಭಿವೃದ್ಧಿ ಪಡಿಸಿದ ತಳಿಗಳು ಹಾಗೂ ತಂತ್ರಜ್ಞಾನಗಳನ್ನು ಸ್ಮರಿಸಿದರು.
ಧಾರವಾಡ ವಿಶ್ವವಿದ್ಯಾಲಯದಿಂದ ಒಣ ಭೂಮಿ ಅಭಿವೃದ್ಧಿ ಯೋಜನೆಯಡಿ ಬಿಡುಗಡೆಗೊಂಡ ತಾಂತ್ರಿಕತೆಗಳು ರಾಷ್ಟಿçÃಯ ಮತ್ತು ಅಂತರಾಷ್ಟಿçÃಯ ಮಟ್ಟದಲ್ಲಿ ಗುರುತಿಸಲ್ಪಟ್ಟು ರಾಜ್ಯ ಸರ್ಕಾರದ ಪ್ರತಿಷ್ಠಿತ ಕೃಷಿ ಭಾಗ್ಯ ಯೋಜನೆಯಲ್ಲಿ ಅಳವಡಿಸಿಕೊಳ್ಳಲಾಗಿದೆ. ಕರ್ನಾಟಕ ಸರ್ಕಾರದಿಂದ ರೈತರಿಗೆ ಸಿಗುವ ಸೌಲಭ್ಯಗಳ ಕುರಿತು ವಿವರಣೆ ನೀಡಿ ಈ ಸೌಲಭ್ಯಗಳ ಸದುಪಯೋಗ ಮಾಡಿಕೊಳ್ಳಲು ಕರೆ ನೀಡಿದರು. ಇದೇ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಪ್ರಕಟಣೆಗಳನ್ನು ಬಿಡುಗಡೆ ಮಾಡಿದರು. ನಂತರ ಶಿಕ್ಷಣ, ಸಂಶೋಧನೆ ಹಾಗೂ ವಿಸ್ತರಣೆಯಲ್ಲಿ ಸಾಧನೆಗೈದ ವಿಜ್ಞಾನಿಗಳಿಗೆ, ಅತ್ಯುತ್ತಮ ಸೇವಾ ಸಿಬ್ಬಂದಿಗಳಿಗೆ, ಅಡ್ಹಾಕ್ (ಂಜ-hoಛಿ) ಯೋಜನೆಗಳನ್ನು ವಿಶ್ವವಿದ್ಯಾಲಯಕ್ಕೆ ದೊರಕಿಸಿಕೊಟ್ಟಿರುವ ವಿಜ್ಞಾನಿಗಳಿಗೆ ಹಾಗೂ ಉತ್ತಮವಾಗಿ ನಿರ್ವಹಣೆ ಮಾಡಿದ ಸಂಶೋಧನಾ ಕೇಂದ್ರಕ್ಕೆ, ಪ್ರತಿ ಮಹಾವಿದ್ಯಾಲಯದ ಒಬ್ಬ ವಿದ್ಯಾರ್ಥಿ /ವಿದ್ಯಾರ್ಥಿನಿಗೆ ಅತ್ಯುತ್ತಮ ಹೊರ ಹೋಗುತ್ತಿರುವ ವಿದ್ಯಾರ್ಥಿ ಪ್ರಶಸ್ತಿಗಳನ್ನು ಈ ಸಂದರ್ಭದಲ್ಲಿ ಗಣ್ಯರು ವಿತರಿಸಿದರು.
ಕೃವಿವಿ.,ಧಾರವಾಡದ ಸಂಶೋಧನಾ ನಿರ್ದೇಶಕರಾದ ಡಾ. ಬಿ.ಡಿ.ಬಿರಾದಾರ ಸರ್ವರನ್ನೂ ಸಂಸ್ಥಾಪನಾ ದಿನಾಚರಣೆಗೆ ಸ್ವಾಗತಿಸುತ್ತಾ ಅತಿಥಿಗಳ ಪರಿಚಯ ಮಾಡಿಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೃವಿವಿ, ಧಾರವಾಡದ ಕುಲಪತಿಗಳಾದ ಡಾ. ಪಿ. ಎಲ್. ಪಾಟೀಲರವರು ವಿಶ್ವವಿದ್ಯಾಲಯದ ಸ್ಥಾಪನೆಗೆ ಶ್ರಮಿಸಿ, ರಾಷ್ಟçಮಟ್ಟದಲ್ಲಿ ಹೆಸರುಗಳಿಸಲು ಕಾರಣೀಕರ್ತರಾದ ಪ್ರಥಮ ಐದು ಕುಲಪತಿಗಳ ಕೊಡುಗೆಯನ್ನು ಸ್ಮರಿಸಿ, ವಿಶ್ವವಿದ್ಯಾಲಯವನ್ನು ಇನ್ನೂ ಹೆಚ್ಚಿನ ಶ್ರೇಣಿಗೆ ಕೊಂಡೊಯ್ಯಲು ಮಾನವ ಸಂಪನ್ಮೂಲಗಳ ಕೊರತೆ ಇದ್ಯಾಗ್ಯೂ ಸಹಿತ ಶ್ರಮಿಸಲಾಗುವುದು ಎಂದರು. ಜೊತೆಗೆ ಮಂತ್ರಿಗಳ ಪರವಾಗಿ ಶಿಕ್ಷಕರಿಗೆ ರೈತರ ಆದಾಯ ವೃದ್ಧಿಸಲು ಕರೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಕೃಷಿ ವಿಶ್ವವಿದ್ಯಾಲಯ, ಧಾರವಾಡದ ಮಾನ್ಯ ವ್ಯವಸ್ಥಾಪನಾ ಮಂಡಳಿಯ ಸದಸ್ಯರುಗಳಾದ ಶ್ರೀಮತಿ ಪಾರ್ವತಿ ಎಸ್.ಕುರ್ಲೆ, ಶ್ರೀ ವೀರನಗೌಡ ಪಿ. ಪೋಲಿಸಗೌಡರ್, ಶ್ರೀ ಬಸವರಾಜ ಕುಂದಗೋಳಮಠ, ಶ್ರೀ ರವಿಕುಮಾರ ಮಾಳಿಗೇರ, ಶ್ರೀ ಮಾಲತೇಶ ಶ್ಯಾಗೋಟಿ ಹಾಗೂ ಕುಲಸಚಿವರಾದ ಶ್ರೀಮತಿ ಜಯಶ್ರೀ ಶಿಂತ್ರಿ, (ಕೆ.ಎ.ಎಸ್.) ಹಾಗೂ ವಿಶ್ವವಿದ್ಯಾಲಯದ ನಿಕಟಪೂರ್ವ ಕುಲಪತಿಗಳು, ವಿಶ್ವವಿದ್ಯಾಲಯದ ಅಧಿಕಾರಿಗಳು, ಎಲ್ಲಾ ಮಹಾವಿದ್ಯಾಲಯಗಳ ವಿದ್ಯಾಧಿಕಾರಿಗಳು, ನಿವೃತ್ತ ಹಿರಿಯ ಅಧಿಕಾರಿಗಳು ಮತ್ತು ಸಮಸ್ತ ಕೃಷಿ ವಿಶ್ವವಿದ್ಯಾಲಯದ ಅಧಿಕಾರಿ ವೃಂದ, ಶಿಕ್ಷಕ ಮತ್ತು ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲೊಂಡಿದ್ದರು. ಕೃವಿವಿ, ಧಾರವಾಡದ ವಿಸ್ತರಣಾ ನಿರ್ದೇಶಕರಾದ ಡಾ. ಎಮ್.ವಿ.ಮಂಜುನಾಥ ಇವರು ವಂದಿಸಿದರು. ಕಾರ್ಯಕ್ರಮವನ್ನು ಡಾ. ಬಿ.ಎನ್.ಅರವಿಂದಕುಮಾರ ನಿರೂಪಿಸಿದರು