ಲಂಕೇಶ್ ಅವರ ಸಿನೆಮಾ ಒಂದಕ್ಕೆ ತೆರಿಗೆ ವಿನಾಯಿತಿ ಕೇಳಲು ಆ ಕಾಲದಲ್ಲಿ ಪ್ರಬಲ ಮುಖ್ಯಮಂತ್ರಿಯಾಗಿದ್ದ ದೇವರಾಜ್ ಅರಸ್ ಬಳಿ ಹೋದಾಗ ನಕಾರಾತ್ಮಕ ಅಭಿಪ್ರಾಯ ಬಂದಾಗ ಪಿ. ಲಂಕೇಶ್ ಅವರು ನೀವು ಈ ರಾಜ್ಯದ ಮುಖ್ಯಮಂತ್ರಿಯಾಗಿರಬಹುದು ಆದರೆ ನಾನು ಈ ರಾಜ್ಯದ ಸಾಂಸ್ಕöÈತಿಕ ಪ್ರತಿನಿಧಿ ಎಂದು ಅರಸ್ ಅವರಿಗೆ ನೇರವಾಗಿ ಹೇಳಿದ ಧೀಮಂತ ಲಂಕೇಶ್ ಎಂದು ಟಿ. ಎನ್. ಸೀತಾರಾಮ್ ಇಂದು ಇಲ್ಲಿ ಹೇಳಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿಯು ಮಲ್ಲತ್ಹಳ್ಳಿ ಕಲಾಗ್ರಾಮದಲ್ಲಿ ಹಮ್ಮಿಕೊಂಡಿದ್ದ ಮೂರು ದಿನಗಳ ಅಧ್ಯಯನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ಆದರೆ ಕೇವಲ ಇಪ್ಪತ್ತುನಾಲ್ಕು ಗಂಟೆ ಒಳಗೆ ಲಂಕೇಶ್ ಮನೆಗೆ ಸರ್ಕಾರದಿಂದ ಆ ಸಿನೆಮಾದ ತೆರಿಗೆ ವಿನಾಯಿತಿ ಪತ್ರ ತಲುಪಿತ್ತು. ಅಂತಹ ದೀಮಂತ ಶಕ್ತಿ ಪಿ. ಲಂಕೇಶ್ ಎಂದು ಟಿ.ಸೀತಾರಾಮ್ ವಿಶ್ಲೇಷಣೆ ಮಾಡಿದರು.
ಹಿರಿಯ ಲೇಖಕಿ ಬಾನು ಮುಸ್ತಾಕ್ ಅಂದು ಪಿ. ಲಂಕೇಶ್ ಹುಟ್ಟುಹಾಕಿದ ಪ್ರಗತಿ ರಂಗದ ಭಿನ್ನಾಭಿಪ್ರಾಯವನ್ನು ಹಂಚಿಕೊAಡರು. ವೇದಿಕೆಯಲ್ಲಿ ಇಂದಿರಾ ಲಂಕೇಶ್ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎಲ್. ಎನ್. ಮುಕುಂದರಾಜ್ ಈಡಿieಟಿಜಟಥಿ ಸದಸ್ಯರಾದ ಡಾ. ಕಾ. ವೆಂ. ಶ್ರೀನಿವಾಸ್ ಮೂರ್ತಿ ಸುಮಾ ಸತೀಶ್ ಸುಜಾತ ಅಕಾಡೆಮಿಯ ರಿಜಿಸ್ಟಾçರ್ ಕರಿಯಪ್ಪ ಉಪಸ್ಥಿತರಿದ್ದರು.