ಬೆಂಗಳೂರು: ಮಾದನಾಯಕನಹಳ್ಳಿ ಪೊಲೀಸರು ಬಳ್ಳಾರಿ ಮೂಲದ ಇಬ್ಬರು ವ್ಯಕ್ತಿಗಳನ್ನು ಬಂಧಿಸಿ ಒಂದು ಕೋಟಿ ರೂಪಾಯಿ ಮೌಲ್ಯದ ಕಳುವಾಗಿದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿರುತ್ತಾರೆ.
ಮದನಾಯಕನಹಳ್ಳಿ ವ್ಯಾಪ್ತಿಯ ಕಡಬಗೆರೆಯಲ್ಲಿರುವ ಸಂಧ್ಯಾ ಹೋಲ್ಡ್ ಏಜ್ ಮತ್ತು ರಿಹ್ಯಾಬಿಲೇಶನ್ ಸೆಂಟರ್ನ ಕಮಲಮ್ಮನವರ ಮನೆಯಲ್ಲಿ ಕಳ್ಳತನವಾಗಿರುತ್ತದೆ.ಕಮಲಮ್ಮನವರು ಇತ್ತೀಚೆಗೆ ಯುಗಾದಿ ಹಬ್ಬದ ಪ್ರಯುಕ್ತ ಬೆಂಗಳೂರಿನ ಮಗನ ಮನೆಗೆ ಹೋಗಿದ್ದ ಸಮಯದಲ್ಲಿ ಕಳವಾಗಿರುತ್ತದೆ .
ಈ ಸಂಬಂಧ ಕಮಲಮ್ಮ ನವರು ಮಾದನಾಯಕನಹಳ್ಳಿ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು.
ಬಳ್ಳಾರಿ ಜಿಲ್ಲೆಯ ಆರೋಪಿಗಳಾದ ಸೈಯದ್ ಬಿರ್ಜಾ ಮತ್ತು ಮಿರ್ಜಾ ಖಾದರ್ ಎಂಬ ಆರೋಪಿಗಳು ಕಳವು ಮಾಡಿದ್ದರು ಎನ್ನಲಾದ ಒಂದು ಕೆಜಿ ಚಿನ್ನಾಭರಣ ಮತ್ತು ಅರ್ಧ ಕೆಜಿ ಬೆಳ್ಳಿ ಆಭರಣ ಮತ್ತು ನಗದು 21 ಲಕ್ಷ ರೂಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಎಸ್ ಪಿ ಮಲ್ಲಿಕಾರ್ಜುನ್ ಬಾಲದಂಡೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.