ನವದೆಹಲಿ: ಇರಾನಿನ ಹೊಸ ಸರ್ವೋಚ್ಚ ನಾಯಕ ಮೊಜ್ತಾಬಾ ಖಮೇನಿಯಬಗ್ಗೆ ಸುಳಿವು ನೀಡಿದವರಿಗೆ ೧೦ ಮಿಲಿಯನ್ ಡಾಲರ್ ಬಹುಮಾನ ನೀಡುವುದಾಗಿ ಅಮೆರಿಕ ಘೋಷಿಸಿದೆ.
ಮೊಜ್ತಾಬಾ ಖಮೇನಿ ಸೇರಿದಂತೆ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ಗೆ (Iಖಉಅ) ಸಂಬಂಧಿಸಿದ ಹಲವಾರು ಹಿರಿಯ ಅಧಿಕಾರಿಗಳ ಫೋಟೋವನ್ನು ಅಮೆರಿಕದ ಡಿಪಾರ್ಟ್ಮೆಂಟ್ನ ಡಿಪ್ಲೊಮ್ಯಾಟಿಕ್ ಸೆಕ್ಯುರಿಟಿ ಸರ್ವಿಸ್ ನಡೆಸುವ ರಿವಾರ್ಡ್ಸ್ ಫಾರ್ ಜಸ್ಟೀಸ್ ಅಪ್ಲೋಡ್ ಮಾಡಿ ನಗದು ಬಹುಮಾನ ಪ್ರಕಟಿಸಿದೆ
ಈ ವ್ಯಕ್ತಿಗಳು ಪ್ರಪಂಚದಾದ್ಯAತ ಭಯೋತ್ಪಾದನೆಯನ್ನು ಯೋಜಿಸುವ, ಸಂಘಟಿಸುವ ಮತ್ತು ಕಾರ್ಯಗತಗೊಳಿಸುವ ಐಆರ್ಜಿಸಿಯ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರ ಬಗ್ಗೆ ಯಾವುದೇ ಮಾಹಿತಿ ಇದ್ದರೆ ಅದನ್ನು ಟಾರ್ ಆಧಾರಿತ ಟಿಪ್ಲೈನ್ ಅಥವಾ ಸಿಗ್ನಲ್ ಮೂಲಕ ನಮಗೆ ಕಳುಹಿಸಿ ಎಂದು ಕೇಳಿಕೊಂಡಿದೆ.
ಮೊಜ್ತಾಬಾ ಖಮೇನಿ ಸುಳಿವು ನೀಡಿದರೆ,೧೦ ಮಿಲಿಯನ್ ಡಾಲರ್ ಬಹುಮಾನ ಘೋಷಣೆ



