![]() |
![]() |
![]() |
![]() |
![]() |
ಬೆಂಗಳೂರು: ಬೆಂಗಳೂರಿನ ಸೆಂಟರ್ ಫಾರ್ ಹ್ಯೂಮನ್ ಜೆನೆಟಿಕ್ಸ್ (ಸಿಎಚ್‍ಜಿ) ಮತ್ತುಇಂದಿರಾ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಚೈಲ್ಡ್ ಹೆಲ್ತ್ (ಐಜಿಐಸಿಎಚ್),ಇವೆರಡು ಪ್ರತಿಷ್ಠಿತ ಆರೋಗ್ಯ ಸಂಸ್ಥೆಗಳು ಅಪರೂಪದ ಕಾಯಿಲೆಗಳ ಶ್ರೇಷ್ಠತಾ ಕೇಂದ್ರ (ಸಿಒಇಆರ್‍ಡಿ) ಗಳಾಗಿ, ಭಾರತ ಸರ್ಕಾರದಿಂದ ಗುರುತಿಸಲಾಗಿದೆ.
ಈ ಸಂಸ್ಥೆಗಳು 2023 ಆಗಸ್ಟ್ ವರೆಗೆ ಅಪರೂಪದ ಖಾಯಿಲೆ ಹೊಂದಿರುವ 100 ರೋಗಿಗಳ ಯಶಸ್ವಿ ಯಾಗಿ ರಾಷ್ಟ್ರೀಯ ಅತಿವಿರಳ ಖಾಯಿಲೆ ನೀತಿಯ ಅಡಿಯಲ್ಲಿ ನೋಂದಣಿ ಮಾಡಿಕೊಂಡು ಚಿಕಿತ್ಸೆಯನ್ನು ನೀಡುತ್ತಿದೆ. ಎನ್ ಪಿ ಆರ್ ಡಿ 21 ಘೋಷಣೆಯ ನಂತರ ಈ 2 ಸಂಸ್ಥೆಗಳು ದೇಶದಲ್ಲೇ ಈ ಮಹತ್ವದ ಮೈಲಿಗಲ್ಲನ್ನು ಸಾಧಿಸಿದ ಮೊದಲ `ಅಪರೂಪದ ರೋಗಗಳ ಶ್ರೇಷ್ಠತಾ ಕೇಂದ್ರ’ಗಳಾಗಿವೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಹೆಚ್ಚುವರಿ ಉಪ ಮಹಾನಿರ್ದೇಶಕ ಮತ್ತು ತುರ್ತು ವೈದ್ಯಕೀಯ ಪರಿಹಾರ(ಇಎಂಆರ್) ವಿಭಾಗದ ನಿರ್ದೇಶಕ ಡಾ. ಸ್ವಸ್ತಿಚರಣ್, ಅಪರೂಪದ ಗಂಭೀರ ರೋಗಗಳ ನಿವಾರಣೆಗೆ ಪರಿಣಾಮಕಾರಿಯಾಗಿ ಕೆಲಸ ಮಾಡಲು ಮತ್ತು ಅರ್ಹ ರೋಗಿಗಳ ನೋಂದಣಿ ಹಾಗೂ ಚಿಕಿತ್ಸೆ ಮಾಡಲು ರಾಷ್ಟ್ರೀಯ ಅಪರೂಪದ ರೋಗಗಳ ನೀತಿ, ದೇಶಾದ್ಯಂತ ಇರುವ ಶ್ರೇಷ್ಠತಾ ಕೇಂದ್ರಗಳು ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಅಭಿವೃದ್ಧಿಪಡಿಸಿರುವ ಕ್ರೌಡ್ ಫಂಡಿಂಗ್ ಪೋರ್ಟಲ್ಗೆ ಸಾಕಷ್ಟು ಅವಕಾಶಗಳಿವೆ ಮತ್ತು ವ್ಯಾಪ್ತಿಯೂ ಇದೆ ಎಂದರು.
ಹ್ಯೂಮನ್ ಜೆನೆಟಿಕ್ಸ್ ಕೇಂದ್ರ(ಸಿಎಚ್ಜಿ)ದ ಸಹಾಯಕ ನಿರ್ದೇ ಶಕಿ ಡಾ. ಮೀನಾಕ್ಷಿ ಭಟ್, ಐಜಿಐಸಿಎಚ್ ಸಂಸ್ಥೆಯ ನಿರ್ದೇಶಕ ಪ್ರೊ . ಕೆ.ಎಸ್. ಸಂಜಯ್,ಬೆಂಗಳೂರಿನ ಸಿಒಇಆರ್‍ಡಿ ಪೀಡಿಯಾಟ್ರಿಕ್ಸ್ ವಿಭಾಗದ ಪ್ರಾಧ್ಯಾಪಕ ಮತ್ತು ನೋಡಲ್ ಅಧಿಕಾರಿ ಡಾ. ಜಿ.ಎನ್. ಸಂಜೀವ, ಅಪರೂಪದ ಕಾಯಿಲೆಗಳ ಭಾರತ ಸಂಘಟನೆ(ಒಆರ್ ಡಿಐ)ಯ ಸಹ-ಸಂಸ್ಥಾಪಕ ಮತ್ತು ಕಾರ್ಯ ನಿರ್ವಾಹಕ ನಿರ್ದೇಶಕ ಪ್ರಸನ್ನ ಶಿರೋಲ್ ಉಪಸ್ಥಿತರಿದ್ದರು.
![]() |
![]() |
![]() |
![]() |
![]() |
Leave a Review