ಬೆಂಗಳೂರು: ರವಿಕಿರಣ ಸಾಹಿತ್ಯ ಪ್ರತಿಷ್ಠಾನ ನೂರನೇ(100) ಕಾರ್ಯಕ್ರಮ ಹಾಗೂ ಭಾವಯಾನ ಪ್ರತಿಷ್ಠಾನದ ಆರನೇ ವಾರ್ಷಿಕೋತ್ಸವದ ಪ್ರಯುಕ್ತ ಶೇಷಾದ್ರಿಪುರಂ ಕಾಲೇಜಿನಲ್ಲಿ ಆ ಯೋಜನೆಗೊಂಡಿದ್ದ ಈ ಕಾರ್ಯಕ್ರಮದಲ್ಲಿ ಶ್ರೀಮತಿ ಭಾರ್ಗವಿ.ಪಿ ಅವರ `ಹೊಂಗಿರಣ ಕೃತಿ ಲೋಕಾರ್ಪಣೆ ಹಾಗೂ ವಿವಿಧ ಕ್ಷೇತ್ರದ ಸಾಧಕರಿಗ ಕರುನಾಡ ರತ್ನ ಪ್ರಶಸ್ತಿ ಹಾಗೂ ಭಾವಯಾನ ಪ್ರತಿಷ್ಠಾನದ ಪುಸ್ತಕ ಬಹುಮಾನಗಳನ್ನು ಕೊಡಲಾಯಿತು.
ಮುಖ್ಯ ಅತಿಥಿಗಳಾಗಿ ಪ್ರೊಫೆಸರ್ ಎಲ್.ಗಿರಿಜಾ ರಾವ್ ರವರು ರವಿಕಿರಣ ಸಾಹಿತ್ಯ ಪ್ರತಿಷ್ಠಾನ ಬೆಳೆದುಬಂದ ಹಾದಿ ಅದರ ಉದ್ದೇಶಗಳನ್ನು ಸಮಗ್ರವಾಗಿ ತಿಳಿಸಿಕೊಟ್ಟರು. ಉಮೇಶ್ ತನ್ನ ಶಿಷ್ಯನಾಗಿರುವುದು ಹಾಗೂ ಕನ್ನಡ ಕೆಲಸಗಳನ್ನು ಮಾಡುತ್ತಿರುವುದು ಸಂತಸದ ವಿಷಯ ಎಂದು ತಿಳಿಸಿದರು.ಎಲೆ ಮರೆಯ ಪ್ರತಿಭೆಗಳನ್ನು ಪರಿಚಯಿಸಿ ಪ್ರೋತ್ಸಾಹಿಸುತ್ತಿರುವುದು ಸ್ಪೂರ್ತಿದಾಯಕ ಎಂದು ತಿಳಿಸಿ ಅಯೋಧ್ಯ ಶ್ರೀ ರಾಮನ ಕುರಿತಾದ ಕವನ ವಾಚಿಸಿದರು.
ಕರ್ನಾಟಕ ಬ್ಯಾಂಕ್ ಉಪ ಮಹಾಪ್ರಬಂಧಕರಾದ ಬಿ.ನಾಗರಾಜ ಉಪಾಧ್ಯಾಯರವರು ಮಾತನಾಡಿ ಕನ್ನಡ ಪರ ಕಾರ್ಯಕ್ರಮಗಳು ನಡೆಯಿತ್ತಿರುವುದು ಶ್ಲಾಘನೀಯ ಹಾಗೂ ಕರ್ನಾಟಕ ಬ್ಯಾಂಕ್ ನೂರು ವರ್ಷ ಪೂರೈಸಿರುವ ಈ ಸಂದರ್ಭದಲ್ಲಿ ತಮ್ಮ ಶಾಖೆಯ ಸಹುದ್ಯೋಗಿ ಭಾರ್ಗವಿ ಮೇಡಂ ಕೃತಿ ಲೋಕಾರ್ಪಣೆ ಮಾಡಿರುವುದು ಹೆಮ್ಮೆಯ ವಿಷಯ.ಹಾಗೂ ಈ ಬ್ಯಾಂಕಿನ ತ್ರೈ ಮಾಸಿಕ ಅಭ್ಯುದಯ ದಲ್ಲೂ ಭಾರ್ಗವಿ ರವರ ಕವನಗಳು ನಿರಂತರವಾಗಿ ಪ್ರಕಟವಾಗುತ್ತಿರುವುದಾಗಿ ತಿಳಿಸಿದರು.
ಕೃತಿ ಕುರಿತು ಶ್ರೀಜರಗನಹಳ್ಳಿ ಸದಾಶಿವಯ್ಯ ನವರು ಮಾತನಾಡಿ ಭಾರ್ಗವಿಯವರ ಮನದಾಳದ ವಿಚಾರಗಳನ್ನು ಚುಟುಕುಗಳ ಮೂಲಕ ತಿಳಿಸಿದ್ದಾರೆ. ಇವರ ಪ್ರಥಮ ಕೃತಿಗೆ ಮುನ್ನುಡಿ ಬರೆದದ್ದು ಅತೀವ ಸಂತಸವಾಗಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಮೈಸೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎ.ಸಿ. ಮಂಜುನಾಥ್ ರವರು ಅಧ್ಯಕ್ಷೀಯ ಮಾತುಗಳನ್ನಾಡಿ ಎಲ್ಲರಿಗೂ ವಂದಿಸಿದರು. ಕೃತಿ ಕಾರರಾದ ಭಾರ್ಗವಿ .ಪಿ ರವರು ತಮ್ಮ ಸಾಹಿತ್ಯ ಕ್ಷೇತ್ರಕ್ಕೆ ನೆರವಾದವರನ್ನು ಭಾವನಾತ್ಮಕವಾಗಿ ಸ್ಮರಿಸಿದರು. ಈ ಸಂದರ್ಭದಲ್ಲಿ ಭಾರ್ಗವಿ ರವರ ಅಜ್ಜಿ 94 ವರ್ಷದ ಶ್ರೀಮತಿ ರುಕ್ಮಣಮ್ಮ ರವರನ್ನು ಸನ್ಮಾನಿಸಿದರು.
ಶ್ರೀಮತಿ ರುಕ್ಮಣಮ್ಮ ತನ್ನ ಮೊಮ್ಮಗಳು ಈ ಮಟ್ಟಕ್ಕೆ ಬೆಳೆದಿರುವುದು ಸಂತೋಷವಾಗಿದೆ ಎಂದು ತಿಳಿಸಿದರು.ಶ್ರೀ. ಮಂಡ್ಯ ಎಚ್ಎಸ್ ಬಾಲಸುಬ್ರಮಣ್ಯಂ, ಶೈಲಜಾ ರಾವ್, ಶ್ರೀ.ಬಿ.ಎಲ್.ಶ್ರೀನಿವಾಸ್ ರಲ್ಲರೂ ಶ್ರೀ.ಉಮೇಶ್ ರವರಿಗೆ ಸನ್ಮಾನಿಸಿದರು,ಶ್ರೀ ಮಾಲತಿ ಆರಾಧ್ಯ ಕುಟುಂಬ ವರ್ಗ ಹಾಗೂ ಅಲ್ಲಮ ಪ್ರಕಾಶನ ದಿಂದ ಉಮೇಶ್ ರವರನ್ನು ಸನ್ಮಾನಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಬಸವಲಿಂಗ ಎಲ್ ಮಾಡಿದರು ರವಿಕಿರಣ ಸಾಹಿತ್ಯ ಪ್ರತಿಷ್ಠಾನದ ಅಧ್ಯಕ್ಷರು ಶ್ರೀ ಉಮೇಶ್ ಸಿ ಎನ್ ಸ್ವಾಗತಿಸಿದರು.
ಭಾವಯಾನ ಪ್ರತಿಷ್ಠಾನದ ಶ್ರೀಮತಿ ಮಾಲತಿ ಆರಾಧ್ಯ ಪ್ರಾಸ್ತಾವನ ನುಡಿಗಳನ್ನು ಆಡಿದರು ಭಾವಯಾನ ಪ್ರತಿಷ್ಠಾನದ ಪುಸ್ತಕ ಪ್ರಶಸ್ತಿಯ ಕೃತಿಕಾರರ ಹೆಸರು ಶ್ರೀ ಚಲಪತಿ ವಿ, ನದಿಮ ಸನದಿ, ಮಧುಸೂದನ್ ಬಿ ಎಂ, ಸೋಮಶೇಖರ್ ಗುರುಮಠ, ವಿಜಯ ಪದ್ಮಶಾಲಿ, ಚೇತನ್ ನಗರಾಳ, ಶಂಕರ್ ಶೆಟ್ಟಿ ಕೊತ್ತಾಡಿ ,ಸಿ ಎನ್ ಮಹೇಶ್ ,ರಾಜಶೇಖರ್ ಕೆ,
ನಿರಂಜನ ಮೂರ್ತಿ, ಶ್ರೀಮತಿ ಸರಸ್ವತಿ, ವಿನೋದ್ ಕುಮಾರ್ ಆರ್, ವಿ.ಮಾಯಣ್ಣ ಸ್ವಾಮಿ ಕಿರಂಗೂರು ,ಎಸ್ ಶ್ರೀಮತಿ ಶೀಲಾ ಸುರೇಶ್, ಕುಮಾರಿ ಕೆಎನ್ ಅನುಪಮ, ಶ್ರೀಮತಿ ಸ್ವಪ್ನ ,ಎ ಎನ್ ರಮೇಶ್ ಗುಬ್ಬಿ ಕೊತ್ತತ್ತಿರಾಜು ಪ್ರಥಮ ದ್ವಿತೀಯ ತೃತೀಯ ಹಾಗೂ ಮೆಚ್ಚುಗೆ ಪಡೆದಂತಹ ಕೃತಿಕಾರರು ಎಲ್ಲರಿಗೂ ಅಭಿನಂದನೆಗಳು ಸನ್ಮಾನವನ್ನು ಸ್ವೀಕರಿಸಿದ ಕಾಳಿಹುಂಡಿ ಶಿವಕುಮಾರ್ ವಿನೋದಿನಿ ಲಕ್ಷ್ಮಿ ಭಟ್ ಶೈಲಜಾ ರಾಮಕೃಷ್ಣ ಅನುಪಮಾ ಶಂಕರ್ ರೇಣುಕಾ ರಾಮಲಿಂಗಪ್ಪ ಭವಾನಿ ಪ್ರಸಾದ್ ಲಕ್ಷ್ಮೀ ಮಹೇಶ್ ರವರುಗಳಿಗೆ ಸನ್ಮಾನಿಸಲಾಯಿತು. ವಿವಿಧ ಕ್ಷೇತ್ರದ ಸಾಧಕರಿಗೆ ಕರುನಾಡ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. 100 ನೆ ಕಾರ್ಯಕ್ರಮದಲ್ಲಿ 100 ಜನರಿಗೆ ಸನ್ಮಾನಿಸಲಾಯಿತು.