ಚಿಂತಾಮಣಿ ಬೆಂಗಳೂರು ಹೂರವಲಯ ದಲ್ಲಿರುವ ಪ್ರತಿಷ್ಠಿತ ಆರ್.ಕೆ. ವಿಷನ್ ಪದವಿ ಪೂರ್ವ ಕಾಲೇಜಿಗೆ ಕರ್ನಾಟಕ ಶಾಲಾ ಶಿಕ್ಷಣ ಹಾಗೂ ಮೌಲ್ಯನಿರ್ಣಯ ಮಂಡಳಿ ಪ್ರಕಟಿಸಿದ 2024 ಮಾರ್ಚ್ ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ಶೇ 100ರಷ್ಟು ಫಲಿತಾಂಶ ಪಡೆದುಕೊಂಡಿದೆ.
ಪರೀಕ್ಷೆಗೆ ಹಾಜರಾಗಿದ್ದ 303 ವಿದ್ಯಾರ್ಥಿಗಳಲ್ಲಿ 303 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ (1) ನಿಷಿತಾ ಬಿ.ಎಸ್ 592/600 ಪ್ರಥಮ ಸ್ಥಾನ (98.66) (2) ಮಧನ್ ಗೌಡ 591/600, (3) ನಿಖಿತಾ ರೆಡ್ಡಿ 591/600 (98.50) ದ್ವಿತೀಯ ಸ್ಥಾನ (4) ಅಖಿಲ್ ರೆಡ್ಡಿ 589/600 (98.1) ತೃತೀಯ ಸ್ಥಾನ ಹಾಗೂ ಮಧುಶ್ರೀ ಬಿ.ವಿ. 588/600 (98.00) ನಾಲ್ಕನೇ ಸ್ಥಾನ (5) ರಮ್ಯ ಪಿ. 586/600 (97.67) (6) ಸುರೇಶ ಟಿ.ಎಸ್. 586/600 (97.67) 5ನೇ ಸ್ಥಾನ ಪಡೆದುಕೊಂಡಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ (1) ವೇದಿಕಾ ಎಸ್. ರೆಡ್ಡಿ 589/600 (98.1) (2) ವರ್ಷಾರೆಡ್ಡಿ ಟಿ.ಎನ್584/600 (97.33) (3) ಹರಿಣಿ ಎಂ.ಪಿ 578/600 (96.33) ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.ವಿಷಯವಾರು ವಿಶ್ಲೆಷಣೆಯಲ್ಲಿ 100ಕ್ಕೆ 100 ಭೌತಶಾಸ್ತ್ರದಲ್ಲಿ 2 ವಿದ್ಯಾರ್ಥಿಗಳು, ರಸಾಯ
ನಶಾಸ್ತ್ರ 8 ವಿದ್ಯಾರ್ಥಿಗಳು ಗಣಿತಶಾಸ್ತ್ರದಲ್ಲಿ 33 ವಿದ್ಯಾರ್ಥಿಗಳು, ಜೀವಶಾಸ್ತ್ರದಲ್ಲಿ 21 ವಿದ್ಯಾರ್ಥಿಗಳು, ಅರ್ಥಶಾಸ್ತ್ರದಲ್ಲಿ 1 ವಿದ್ಯಾರ್ಥಿ ಲೆಕ್ಕಶಾಸ್ತ್ರದಲ್ಲಿ 1 ವಿದ್ಯಾರ್ಥಿ, ಸಂಖ್ಯಾಶಾಸ್ತ್ರದಲ್ಲಿ 1 ವಿದ್ಯಾರ್ಥಿ ಪಡೆದುಕೊಂಡಿದ್ದಾರೆ. ಶೇ 90ಕಿಂತಲೂ ಹೆಚ್ಚು 126 ವಿದ್ಯಾರ್ಥಿಗಳು, ಶೇ 85ಕಿಂತಲೂ ಹೆಚ್ಚು 181 ವಿದ್ಯಾರ್ಥಿಗಳು ಉತೀರ್ಣರಾಗಿ ಉತ್ಕøಷ್ಟ ಫಲಿತಾಂಶ ನೀಡಿ ಕಾಲೇಜಿನ ಕೀರ್ತಿಯನ್ನು ಎತ್ತಿ ಹಿಡಿದ್ದಾರೆ.
ಮೇಲ್ಕಂಡ ಅದ್ವಿತೀಯ ಫಲಿತಾಂಶವನ್ನು ನೀಡಿದ ವಿದ್ಯಾರ್ಥಿಗಳನ್ನು, ಸಹಕರಿಸಿದ ಪೋಷಕರನ್ನು ತರಬೇತಿಗೊಳಿಸಿದ ಉಪನ್ಯಾಸಕರನ್ನು ಸಂಸ್ಥೆಯ ಅಧ್ಯಕ್ಷರಾದ ರಾಮಕೃಷ್ಣ ಕೆ, ಕಾರ್ಯದರ್ಶಿ ಶ್ರೀಮತಿ ಪ್ರೇಮಲತಕೆ.ಆರ್. ನಿರ್ದೇಶಕರಾದ ಡಾ|| ಜಿ.ವಿ.ಕೆ. ರೆಡ್ಡಿ, ಕಾರ್ಯನಿರ್ವಾಹಕ ನಿರ್ದೇಶಕರುಗಳಾದ ವರುಣ್ ಕೆ.ವಿ. ತನುಶ್ರೀರಾಮ್, ಪ್ರಾಂಶುಪಾಲರಾದ ಕೆ.ಪಿ. ನಾಗಾರ್ಜುನರೆಡ್ಡಿ, ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದ ಮುಖ್ಯಸ್ಥರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.