ಫೋರ್ಟ್ ಮೊರೆಸ್ಬಿ: ಪಪುವಾ ನ್ಯೂಗಿನಿಯಾದ ಪ್ರವಾಹ ಪೀಡಿತ ಉತ್ತರ ಭಾಗದಲ್ಲಿ ಸಂಭವಿಸಿದ 6.9 ತೀವ್ರತೆಯ ಭೂಕಂಪದಿಂದಾಗಿ ಸುಮಾರು 1,000 ಮನೆಗಳು ನಾಶವಾಗಿವೆ ಎಂದು ಅಧಿಕಾರಿಗಳು ಇಂದು ತಿಳಿಸಿದ್ದಾರೆ.
ಭಾನುವಾರ ಸಂಭವಿಸಿದ ಭೂಕಂಪವು ಈ ಪ್ರದೇಶದ ಬಹುಭಾಗದಲ್ಲಿ ಹಾನಿಯುಂಟುಮಾಡಿದೆ.ಈವರೆಗೆ ಅಂದಾಜು 1,000 ಮನೆಗಳು ನಾಶವಾಗಿವೆ. ತುರ್ತು ಕಾರ್ಯಾಚರಣೆ ಸಿಬ್ಬಂದಿ, ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ ಎಂದು ಈಸ್ಟ್ ಸೆಪಿಕ್ ಗವರ್ನರ್ ಅಲನ್ ಬರ್ಡ್ ತಿಳಿಸಿದ್ದಾರೆ.
ಮೂವರು ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.ಅಂಬುಂಟಿ ಪಟ್ಟಣದ ಈಶಾನ್ಯಕ್ಕೆ ಸುಮಾರು 32 ಕಿ.ಮೀ ದೂರದಲ್ಲಿ ಹಾಗೂ 35 ಆಳದಲ್ಲಿ ಭೂಕಂಪವಾಗಿದೆ ಎಂದು ಅಂದಾಜಿಸಲಾಗಿದೆ.