ಪೀಣ್ಯ ದಾಸರಹಳ್ಳಿ: ಕ್ಷೇತ್ರದಾದ್ಯಂತ ಡಾ. ನಾಗಲಕ್ಷ್ಮಿ ಫೌಂಡೇಶನ್ ವತಿಯಿಂದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಅವರು ಉಚಿತ ಆರೋಗ್ಯ ಶಿಬಿರಗಳನ್ನು ಏರ್ಪಡಿಸಿ ಬಡ ಜನರಿಗೆ ಕಣ್ಣಿನ ತಪಾಸಣೆ ಮಾಡಿಸಿ ಅವಶ್ಯಕತೆ ಉಳ್ಳವರಿಗೆ ಕನ್ನಡಕಗಳನ್ನು ಹಾಗೂ ಶಸ್ತ್ರಚಿಕಿತ್ಸೆಯನ್ನು ತನ್ನ ಸ್ವಂತ ಖರ್ಚಿನಲ್ಲಿ ಮಾಡಿಸಿದರು.
ಡಾ. ನಾಗಲಕ್ಷ್ಮಿ ಮಾತನಾಡಿ’ ರಾಜಕಾರಣದಿಂದಲೇ ಸೇವೆ ಮಾಡಬೇಕು ಎಂಬುದಲ್ಲ, ಸೇವೆ ಮಾಡುವ ಮನೋಭಾವ ಇದ್ದರೆ ಸಾಕು. ಈ ಕ್ಷೇತ್ರದಲ್ಲಿ ಕಣ್ಣಿನ ತಪಾಸಣೆ ನಡೆಸಿ 10,000ಕ್ಕೂ ಹೆಚ್ಚು ಜನರಿಗೆ ಕನ್ನಡಕ ವಿತರಿಸಿದ್ದೇವೆ. ಸಾವಿರಾರು ಚಿಕಿತ್ಸೆ ಮಾಡಿಸಿ ಇಂದು ಕೂಡ 25ಕ್ಕೂ ಹೆಚ್ಚು ಬಡ ಜನರಿಗೆ ಹೆಸರಾಂತ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಸಿ ಇಲ್ಲಿಗೆ ಕರೆತಂದಿದ್ದೇನೆ, ನಮ್ಮ ಕ್ಷೇತ್ರ ಜನರಿಗೆ ಸಹಾಯ ಮಾಡಬೇಕೆನ್ನುವ ಉದ್ದೇಶದಿಂದ ಈ ಕಾರ್ಯ ಮಾಡುತ್ತಿದ್ದೇನೆ’ ಎಂದು ತಿಳಿಸಿದರು.
ಚಿಕಿತ್ಸೆ ಮಾಡಿಸಿಕೊಂಡ ಬಸಪ್ಪನಕಟ್ಟೆಯ ಅನುಸೂಯಮ್ಮ ಮಾತನಾಡಿ’ ಯಾರೋ ಒಬ್ಬರು ಇವರ ನಂಬರ್ ನೀಡಿದರು. ಆಗ ಇಲ್ಲಿಗೆ ಬಂದು ಕಣ್ಣಿನ ಪೊರೆ ಚಿಕಿತ್ಸೆ ಕೇಳಿಕೊಂಡಾಗ ಇವತ್ತು ಆಪರೇಷನ್ ಮಾಡಿಸಿ ನನಗೆ ದೃಷ್ಟಿ ಬರಲು ಕಾರಣರಾಗಿದ್ದಾರೆ. ದೇವರು ಅವರಿಗೆ ಸದಾ ಒಳ್ಳೇದು ಮಾಡಲಿ’ ಎಂದು ಶುಭ ಕೋರಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಗೋವಿಂದರಾಜು, ರವಿಕುಮಾರ್, ಅಬ್ಜಲ್ ಬಾಬು ಮುಂತಾದವರಿದ್ದರು.
Leave a Review