ನವದೆಹಲಿ: ಭಾರತದ ಉದಯೋನ್ಮುಖ ಈಜುಗಾರ್ತಿ ಧಿನಿಧಿ ದೇಸಿಂಗು, ಫಿಲಿಪೀನ್ಸ್ನ ಕೆಪಾಸ್ನಲ್ಲಿ ನಡೆಯುತ್ತಿರುವ 11ನೇ ಏಷ್ಯನ್ ಗ್ರೂಪ್ ಈಜು ಚಾಂಪಿಯನ್ಷಿಪ್ನ 100 ಮೀ. ಫ್ರೀಸ್ಟೈಲ್ ಸ್ಪರ್ಧೆಯನ್ನು ‘ಭಾರತದ ಶ್ರೇಷ್ಠ ಅವಧಿ’ಯಲ್ಲಿ ಪೂರೈಸಿ ಗಮನ ಸೆಳೆದಳು.
14 ವರ್ಷದ ಬೆಂಗಳೂರಿನ ಈಜುಗಾರ್ತಿ ಬುಧವಾರ 57.33 ಸೆಕೆಂಡುಗಳಲ್ಲಿ ಸ್ಪರ್ಧೆಯನ್ನು ಪೂರೈಸಿ, ಕೆನಿಷಾ ಗುಪ್ತಾ ಹೆಸರಿನಲ್ಲಿದ್ದ ಹಳೆಯ ದಾಖಲೆ (57.35 ಸೆ.) ಮುಳುಗಿಸಿದರು.ಜಪಾನ್ನ ಮಿನಾಮಿ ಯು (56.45 ಸೆ.) ಚಿನ್ನದ ಪದಕ ಗಳಿಸಿದರೆ, ಕೊರಿಯಾದ ಸುಮ್ ಯಿ ಲಿ (56.57 ಸೆ.) ಬೆಳ್ಳಿ ಹಾಗೂ ವಿಯೆಟ್ನಾಮಿನ ಹೀನ್ ಗುಯೆನ್ (56.69ಸೆ.) ಕಂಚಿನ ಪದಕ ಪಡೆದರು.
ಭಾರತದಲ್ಲಿ, ರಾಷ್ಟ್ರೀಯ ಈಜು ಚಾಂಪಿಯನ್ಷಿಪ್ನ ಶ್ರೇಷ್ಠ ಅವಧಿಯನ್ನು ರಾಷ್ಟ್ರೀಯ ದಾಖಲೆ ಎಂದು ಪರಿಗಣಿಸಲಾಗುತ್ತದೆ. ಇತರ ಈಜು ಕೂಟಗಳಲ್ಲಿ ರಾಷ್ಟ್ರೀಯ ದಾಖಲೆ ಮುರಿದರೆ ಅದನ್ನು ‘ಭಾರತದ ಶ್ರೇಷ್ಠ ಅವಧಿ’ ಎನ್ನಲಾಗುತ್ತದೆ.