This is the title of the web page
This is the title of the web page

ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಚುನಾವಣಾ ಕಣದಲ್ಲಿ 11 ಅಭ್ಯರ್ಥಿಗಳು

ದೇವನಹಳ್ಳಿ: ಅಭ್ಯರ್ಥಿಗಳ ನಾಮಪತ್ರ ವಾಪಸ್ ಪಡೆಯಲು ವಿವಿಧ ಪಕ್ಷಗಳಿಂದ ಕಸರತ್ತು: ಇಬ್ಬರು ನಾಮಪತ್ರ ವಾಪಸ್ ಪಡೆದರು.: ಬಂಡಾಯ ಬಿಜೆಪಿಯ ಅಭ್ಯರ್ಥಿ ಒಬದೇನಹಳ್ಳಿ ಮುನಿಯಪ್ಪ ನಾಮಪತ್ರ ವಾಪಸ್ದೇವನಹಳ್ಳಿ, ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಮೇ 10 ರಂದು ನಡೆಯುವ ವಿಧಾನಸಭಾ ಚುನಾವಣೆಗೆ 11ಮಂದಿ ಕಣದಲ್ಲಿದ್ದಾರೆ. ಎಂದು ಚುನಾವಣಾಧಿಕಾರಿ ಪ್ರತಿಭಾ ತಿಳಿಸಿದರು.
ನಾಮಪತ್ರಗಳು ಹಿಂಪಡೆಯಲು ಕಡೇದಿನವಾಗಿದ್ದರಿಂದ 15ನಾಮಪತ್ರಗಳು ಸಲ್ಲಿಕೆಯಾಗಿದ್ದವು.

ಅದರಲ್ಲಿಎರಡು ನಾಮಪತ್ರಗಳು ತಿರಸ್ಕøತಗೊಂಡಿದ್ದವು. ಅದರಲ್ಲಿ 13 ನಾಮಪತ್ರಗಳು ಪುರಸ್ಕøತ ಗೊಂಡಿದ್ದವು ಅದರಲ್ಲಿ ಎರಡು ನಾಮಪತ್ರಗಳು ವಾಪಸ್ ತೆಗೆದಿದ್ದರಿಂದ ಇನ್ನು ಉಳಿದ 11 ಅಭ್ಯರ್ಥಿಗಳು ಅಭ್ಯರ್ಥಿಗಳು ಮಾತ್ರ ಉಳಿದಿದ್ದು ನಾಮಪತ್ರ
ವಾಪಸ್ ತೆಗೆದವರಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿ ಓಬದೆನಹಳ್ಳಿ ಮುನಿಯಪ್ಪ ಮತ್ತು ಆರ್‍ಪಿಐ ಪಕ್ಷದ ಡಾ.ವೆಂಕಟಸ್ವಾಮಿ ನಾಮಪತ್ರಗಳನ್ನು ಹಿಂಪಡೆದರು.

ಕಣದಲ್ಲಿ ಇರುವ ಅಭ್ಯರ್ಥಿಗಳು: ಜೆಡಿಎಸ್ ಪಕ್ಷದ ನಿಸರ್ಗ ನಾರಾಯಣಸ್ವಾಮಿ ಬಿಜೆಪಿ ಪಕ್ಷದ ಪಿಳ್ಳ ಮುನಿ ಶಾಮಪ್ಪ. ಕಾಂಗ್ರೆಸ್ ಪಕ್ಷದಿಂದ ಕೆಎಚ್ ಮುನಿಯಪ್ಪ ಅಮ್‍ಆದ್ಮಿ ಪಕ್ಷದಿಂದ ಬಿ ಕೆ ಶಿವಪ್ಪ ಕೆ ಆರ್ ಎಸ್ ಪಕ್ಷದಿಂದ ನಿಖಿಲ್ ಪಕ್ಷೇತರ ಅಭ್ಯರ್ಥಿಗಳಾದ ದೇವರಾಜ್ ನಾರಾಯಣಸ್ವಾಮಿ ನಿಸರ್ಗ ವೆಂಕಟೇಶ್, ಪೂಜಪ್ಪ, ವೆಲ್ ಫೇರ್ ಮಂಜುನಾಥ್ ವಿ ರಾಮಚಂದ್ರ ಪ್ರೆಸ್ ಚುನಾವಣಾ ಕಣದಲ್ಲಿದ್ದಾರೆ. ಎಂದು ಚುನಾವಣಾಧಿಕಾರಿ ಪ್ರತಿಭಾ ತಿಳಿಸಿದರು.

ಎಲ್ಲಾ ಅಭ್ಯರ್ಥಿಗಳಿಗೆ ಕ್ರಮ ಸಂಖ್ಯೆ ಮತ್ತು ಚಿಹ್ನೆಗಳ ನೀಡ ಲಾಗಿದೆ. ಚುನಾವಣಾ ನಾಮಪತ್ರ ಸಲ್ಲಿಕೆ ಮತ್ತು ಹಿಂಪಡೆಯುವ ಕಾರ್ಯ ಮುಗಿದಿದೆ ಎಂದರು.