ಬೆಂಗಳೂರು: ಅಲೆನ್ ಬೆಂಗಳೂರು ನಗರದ ಕ್ರೈಸ್ಟ್ ಯೂನಿವರ್ಸಿಟಿಯ ಸಭಾಂಗಣದಲ್ಲಿ ಭಾನುವಾರ (ಡಿಸೆಂಬರ್ 22) “ಸೋಪಾನ್: ಶ್ರೇಷ್ಠತೆಯ ಸಂಭ್ರಮಾಚರಣೆ” ಕಾರ್ಯಕ್ರಮ ಆಯೋಜಿಸಿತ್ತು.ಈ ವಾರ್ಷಿಕ ಸನ್ಮಾನ ಕಾರ್ಯಕ್ರಮದಲ್ಲಿ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಒಲಂಪಿಯಾಡ್ಸ್ನಲ್ಲಿ ಭಾಗವಹಿಸಿದ್ದ 65 ವಿದ್ಯಾರ್ಥಿಗಳು ಸೇರಿದಂತೆ ಐಐಟಿ-ಜೆಇಇ, ಎನ್ಇಇಟಿ (ಯುಜಿ) ಮತ್ತು ಒಲಂಪಿಯಾಡ್ನಲ್ಲಿ ಸಾಧನೆ ಮಾಡಿದ 1,200 ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ ಇತರ 558 ವಿಜೇತ ವಿದ್ಯಾರ್ಥಿಗಳೊಂದಿಗೆ ಅಲೆನ್-ನ ಆಂತರಿಕ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ
ಮಾಡಿದವರಿಗೆ 650ಕ್ಕೂ ಹೆಚ್ಚು ಪದಕಗಳನ್ನು ವಿತರಿಸಲಾಯಿತು. ತಮ್ಮ ಬುದ್ಧಿಮತ್ತೆ ಸಾಬೀತುಪಡಿಸಿದ 558 ವಿಜಯಶಾಲಿ ವಿದ್ಯಾರ್ಥಿಗಳ ಸಾಧನೆಯನ್ನು
ಗೌರವಿಸಲಾಯಿತು.
ಸೋಪಾನ್ನ ಎರಡು ಸಭೆಗಳಲ್ಲಿ 5,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಪೋಷಕರು ಭಾಗವಹಿಸಿದ್ದರು. 2024ರ ಜೆಇಇ ಮತ್ತು ಎನ್ಇಇಟಿ-ನಲ್ಲಿ ಉತ್ತಮ ಸಾಧನೆ ಮಾಡಿದ ಅಲೆನ್ ವಿದ್ಯಾರ್ಥಿಗಳಿಗೆ ರೂ. 45 ಲಕ್ಷ ಮೌಲ್ಯದ ನಗದು ಬಹುಮಾನಗಳನ್ನು ವಿತರಿಸಲಾಯಿತು.ಮುಖ್ಯ ಅತಿಥಿಗಳಾದ ಲೋಕಾಯುಕ್ತ ನ್ಯಾಯಮೂರ್ತಿ ಬಿ. ಎಸ್. ಪಾಟೀಲ, ಬಿರ್ಲಾ ಓಪನ್ ಮೈಂಡ್ಸ್ ಇಂಟರ್ನ್ಯಾಷನಲ್ ಸ್ಕೂಲ್ಸ್ ಮತ್ತು ಪಾಥ್ಫೈಂಡರ್ ಗ್ರೂಪ್ ಆಫ್ ಸ್ಕೂಲ್ಸ್ನ ಸ್ಥಾಪಕ ನಡಿಪೆಲ್ಲಿ ವೆಂಕಟೇಶ್ವರ ರಾವ್, ವೃಕ್ಷ ವಿಜ್ಞಾನ್ ಪ್ರೈವೇಟ್ ಲಿಮಿಟೆಡ್ನ ನಿರ್ದೇಶಕ ಮತ್ತು ಸಿಇಒ ಡಾ. ವಿಜಯ್ ದಾನಪುರ ಅವರ ಸಮ್ಮುಖದಲ್ಲಿ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಅಲೆನ್ ನಿರ್ದೇಶಕ ರಾಜೇಶ್ ಮಹೇಶ್ವರಿ ಮತ್ತು ಅಲೆನ್ ಸಿಇಒ ನಿತಿನ್ ಕುಕ್ರೆಜಾ ಅವರು ಈ ಯುವ ಸಾಧಕರನ್ನು ಸನ್ಮಾನಿಸಿದರು.
ಅಲೆನ್ ನಿರ್ದೇಶಕ ರಾಜೇಶ್ ಮಹೇಶ್ವರಿ ಅವರು ಬೆಂಗಳೂರಿನ ಯುವ ಪ್ರತಿಭೆಗಳು ದೇಶದಾದ್ಯಂತ ಐಐಟಿಗಳು ಮತ್ತು ಪ್ರತಿಷ್ಠಿತ ವೈದ್ಯಕೀಯ ಕಾಲೇಜುಗಳಲ್ಲಿ ಅಧ್ಯಯನ ಮಾಡುತ್ತಿರುವುದಕ್ಕೆ ನನಗೆ ಅಪಾರ ಹೆಮ್ಮೆ ಎನಿಸುತ್ತಿದೆ. ಎಲ್ಲಾ ಯಶಸ್ವಿ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಿರಲಿ ಎಂದು ನಾನು ಶುಭ ಹಾರೈಸುತ್ತೇನೆ ಎಂದು ಹೇಳಿದ್ದಾರೆ.