ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಪಾಕಿಸ್ತಾನ್ ತಂಡ ಮುಗ್ಗರಿಸಿದೆ. ಈ ಹ್ಯಾಟ್ರಿಕ್ ಸೋಲುಗಳೊಂದಿಗೆ ಈ ವರ್ಷ ಅತ್ಯಧಿಕ ಟಿ20 ಪಂದ್ಯಗಳನ್ನು ಸೋತ ಪೂರ್ಣ ಸದಸ್ಯ ತಂಡ ಎನಿಸಿಕೊಂಡಿದೆ.
ಪಾಕಿಸ್ತಾನ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯನ್ನು ಆಸ್ಟ್ರೇಲಿಯಾ 3-0 ಅಂತರದಿಂದ ಗೆದ್ದುಕೊಂಡಿದೆ. ಈ ಹ್ಯಾಟ್ರಿಕ್ ಸೋಲಿನೊಂದಿಗೆ 2024 ರಲ್ಲಿ ಅತ್ಯಧಿಕ ಟಿ20 ಪಂದ್ಯಗಳನ್ನು ಸೋತ ತಂಡಗಳ ಪಟ್ಟಿಯಲ್ಲಿ ಪಾಕಿಸ್ತಾನ್ ಅಗ್ರಸ್ಥಾನಕ್ಕೇರಿದೆ.ಈ ವರ್ಷ ಪಾಕಿಸ್ತಾನ್ ತಂಡವು ಒಟ್ಟು 22 ಟಿ20 ಪಂದ್ಯಗಳನ್ನಾಡಿದ್ದು, ಈ ವೇಳೆ ಗೆದ್ದಿರುವುದು ಕೇವಲ 7 ಮ್ಯಾಚ್?ಗಳಲ್ಲಿ ಮಾತ್ರ. ಇನ್ನು 2 ಪಂದ್ಯಗಳು ಕಾರಣಾಂತರಗಳಿಂದ ರದ್ದಾಗಿವೆ.
ಇನ್ನುಳಿದ 13 ಪಂದ್ಯಗಳಲ್ಲಿ ಮುಗ್ಗರಿಸುವ ಮೂಲಕ ಪಾಕ್ ಪಡೆ ಈ ವರ್ಷ ಅತ್ಯಧಿಕ ಟಿ20 ಪಂದ್ಯಗಳನ್ನು ಸೋತ ಪೂರ್ಣ ಸದಸ್ಯ ತಂಡ ಎನಿಸಿಕೊಂಡಿದೆ.
ಮತ್ತೊಂದೆಡೆ ಈ ವರ್ಷ ಆಡಿದ 26 ಪಂದ್ಯಗಳಲ್ಲಿ ಟೀಮ್ ಇಂಡಿಯಾ 24 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಇನ್ನು ಭಾರತ ತಂಡ ಸೋತಿರುವುದು ಝಿಂಬಾಬ್ವೆ ಮತ್ತು ಸೌತ್ ಆಫ್ರಿಕಾ ವಿರುದ್ಧ ಮಾತ್ರ. ಅದರಲ್ಲೂ ಟಿ20 ವಿಶ್ವಕಪ್?ನಲ್ಲಿ ಸೋಲಿಲ್ಲದ ಸರದಾರನಾಗಿ ಚಾಂಪಿಯನ್ ಪಟ್ಟ ಮುಡಿಗೇರಿಸಿ ಕೊಂಡು ಇತಿಹಾಸ ನಿರ್ಮಿಸಿದೆ.