ನವದೆಹಲಿ; ಕ್ರೊವೇಷ್ಯಾದಲ್ಲಿ ನಡೆಯಲಿರುವ ಜಗ್ರೆಬ್ ಓಪನ್ ಕುಸ್ತಿಗೆ ಭಾರತದ 13 ಪೈಲ್ವಾನರ ತಂಡವನ್ನು ಭಾರತ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್ಐ) ಅಡ್ಹಾಕ್ ಸಮಿತಿ ಮಂಗಳವಾರ ಪ್ರಕಟಿಸಿದೆ.
ವೀಸಾಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಶೀಲಿಸಿದ ಬಳಿಕ ತಂಡವನ್ನು ಘೋಷಿಸಲಾಗಿದೆ. ಕ್ರೊವೇಷ್ಯಾ ರಾಜಧಾನಿಯಲ್ಲಿ ಮೊದಲ ವಿಶ್ವ ರ್ಯಾಂಕಿಂಗ್ ಟೂರ್ನಿಯು ಜನವರಿಗೆ 10 ರಿಂದ 14ರ ವರೆಗೆ ನಡೆಯಲಿದೆ.
‘ವೀಸಾ ಪಡೆಯಲು ಇದ್ದ ಅಡೆತಡೆಯನ್ನು ವಿದೇಶಾಂಗ ಸಚಿವಾಲಯವು ಬಗೆಹರಿಸಿದೆ. ಸಚಿವಾಲಯದ ಸಮಯೋಚಿತ ಮಧ್ಯಪ್ರವೇಶಕ್ಕೆ ಧನ್ಯವಾದಗಳು. ಜಗ್ರೆಬ್ಗೆ ಪ್ರಯಾಣಿಸಲಿರುವ ಕುಸ್ತಿಪಟುಗಳು ಮತ್ತು ನೆರವು ಸಿಬ್ಬಂದಿ ಸೇರಿ 25 ಮಂದಿ ಇರುವ ತಂಡವು ಬುಧವಾರ ವೀಸಾಗೆ ಸಂಬಂಧಿಸಿದ ಔಪಚಾರಿಕತೆ ಪೂರ್ಣಗೊಳಿಸಲಿದ್ದಾರೆ’ ಎಂದು ಅಡ್ಹಾಕ್ ಸಮಿತಿ ಅಧ್ಯಕ್ಷ ಭೂಪೇಂದರ್ ಸಿಂಗ್ ಬಾಜ್ವಾ ಮಂಗಳವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ಕ್ರೊವೇಷ್ಯಾ ಕುಸ್ತಿ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಟಿನ್ ಬ್ರೆಗೊವಿಚ್ ಅವರು 13 ಕುಸ್ತಿಪಟುಗಳು, ಒಂಬತ್ತು ತರಬೇತುದಾರರು, ಸಹಾಯಕ ಸಿಬ್ಬಂದಿ ಮತ್ತು ಮೂವರು ರೆಫರಿಗಳಿಗೆ ಆಹ್ವಾನ ಪತ್ರ ಕಳುಹಿಸಿದ್ದಾರೆ.