ಬೆಂಗಳೂರು: ಫೆಡೆಕ್ಸ್ ಹೆಸರಿನಿಂದ ಕೊರಿಯರ್ ಬಂದಿದೆ ಎಂದು ನಂಬಿಸಿ ಸಾರ್ವಜನಿಕರಿಗೆ ವಂಚನೆ ಮಾಡುತ್ತಿದ್ದ 14 ಜನ ಆರೋಪಿಗಳನ್ನು ಬಂಧಿಸಿದ್ದಾರೆ.
ಪೂರ್ವ ವಿಭಾಗದ ಸೈಬರ್ ಕ್ರೈಂ ಪೋಲಿಸ್ ಠಾಣೆಗಳಲ್ಲಿ ವಂಚನೆ ಪ್ರಕರಣಗಳು ದಾಖಲೆಯಾಗಿದ್ದವು.ಆರೋಪಿಗಳಾದ ಮೊಹಮ್ಮದ್ ರಜಿ, ಮೊಹಮ್ಮದ್ ನಿಮಿಷಾದ್ ಹಾಗೂ ಇನ್ನೂ 12 ಜನ ಆರೋಪಿಗಳಿಂದ 25.30 ಲಕ್ಷ ನಗದು ಹಣ ಹಾಗೂ 60 ಮೊಬೈಲ್ಗಳು ಇತರೆ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ಭಟ್ಕಳ, ಅಹಮದಾಬಾದ್ ರಾಜಕೋಟ್ ಗುಜರಾತ್ ಕೊಜಿಕೊಡ್ ಮತ್ತು ಕೇರಳ ರಾಜ್ಯದ ಮಲ್ಲಾಪುರಂ ಜಿಲ್ಲೆಯವರಾಗಿರುತ್ತಾರೆ.ಈ ತಂಡವು ಭಾರತ ಸರ್ಕಾರದ ಎನ್ಸಿಆರ್ಪಿ ತುರ್ತು ಸೇವೆಯ 193 ಪೋರ್ಟಲ್ ರಿಜಿಸ್ಟರ್ ನಲ್ಲಿ ದೇಶಾದ್ಯಂತ ದಾಖಲಾಗಿರುವ ಒಟ್ಟು 546 ಪ್ರಕರಣಗಳನ್ನು ಭೇದಿಸುವಲ್ಲಿ ಯಶಸ್ವಿಯಾಗಿರುತ್ತಾರೆಂದು ನಗರ ಪೊಲೀಸ್ ಆಯುಕ್ತ ದಯಾನಂದ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.



