ದೊಡ್ಡಬಳ್ಳಾಪುರ: 15-16ನೇ ಶತಮಾನ ದಲ್ಲೇ ಜಾತಿ ವ್ಯವಸ್ಥೆ ಬಗ್ಗೆ ಸಮರ ಸಾರಿದ ಕೀರ್ತಿ ಭಕ್ತ ಕನಕ ದಾಸರದ್ದು ಎಂದು ಕನ್ನಡ ಶಿಕ್ಷಕ ವೆಂಕಟೇಶ್ ರೆಡ್ಡಿ ತಿಳಿಸಿದರು.ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಆವರಣದಲ್ಲಿ ಆಯೋಜಿಸಲಾಗಿದ್ದ ದಾಸಶ್ರೇಷ್ಠ ಕನಕದಾಸರ ಜಯಂತಿಯನ್ನ ಕನಕದಾಸರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಪ್ರಾರಂಭಿಸಲಾಯಿತು.
ಈ ಕಾರ್ಯಕ್ರಮ ಕುರಿತು ಮಾತನಾಡಿದಅವರು, ಭಕ್ತಿಗೆ ಹಾಗೂ ದಾಸ ಶ್ರೇಷ್ಠ ಎಂದರೆ ನೆನಪಾಗುವುದು ಕನಕ ದಾಸರು ಎಂದೆ ಹೇಳಬೇಕು, ಕೀರ್ತನೆಗಳ ಮೂಲಕ ಜನರಲ್ಲಿ ಮೌಢ್ಯಗಳನ್ನ ದೂರ ಮಾಡುವ ಮೂಲಕ ಸಮಾನತೆಯನ್ನ ಸಾರಿದವರು, ಕನಕದಾಸರು ತಮ್ಮ ಸರಳ 316 ಕೀರ್ತನೆಗಳು ಹಾಗೂ 5 ಕಾವ್ಯಗಳನ್ನು ರಚನೆ ಮಾಡಿದ್ದಾರೆ ಇವುಗಳಲ್ಲಿ ಮೋಹನ ತರಂಗಿಣಿ ಅಥವಾ ಕೃಷ್ಣ ಚರಿತೆ ಎಂಬ ಕಾವ್ಯದಲ್ಲಿ ಇವರ ಸಮಕಾಲೀನ ಜೀವನ ಚರಿತ್ರೆ ಬಹಳ ವಿಶೇಷ ಅಚ್ಚಕನ್ನಡದಲ್ಲಿ ರಚಿಸಲಾಗಿದೆ, ಇದೇ ರೀತಿ ನಳಚರಿತ್ರೆ, ರಾಮದ್ಯಾನ ಚರಿತೆ ಹಾಗೂ ಹರಿಭಕ್ತಸಾರ ಪ್ರಮುಖವಾದ ಕೃತಿಗಳು.
ಹುಟ್ಟಿನಿಂದ ಜೀವನದುದ್ದಕ್ಕೂ ತಿಮ್ಮಪ್ಪನಿಂದ ಕನಕ ದಾಸರವರೆಗೆ ಪರಿಪೂರ್ಣವಾದ ಬದುಕು ಹಾಗೂ ಸಮಾಜದ ಸುಧಾರಕರಾಗಿದ್ದ ಅವರು, ಅವರ ಆಶಯಗಳು ಮೂಲಕ ಇಂದಿಗೂ ಜೀವಂವಾಗಿದ್ದಾರೆ ಎಂದರೆ ತಪ್ಪಲ್ಲ, ಕನಕದಾಸರ ಜಯಂತಿ ಆಚರಣೆ ನಮ್ಮ ಆದ್ಯಕರ್ತವ್ಯ ಎಂಬದರು.
ನಂತರ ತಮ್ಮ ಅಧ್ಯಕ್ಷೀಯ ಭಾಷಣ ಮಾಡಿದ ಉಪ ಪ್ರಾಂಶುಪಾಲರಾಗಿ ಶಿವಕುಮಾರ್ ಕನಕದಾಸ ಹಾಗೂ ಪುರಂದರದಾಸರು 15ನೇ ಹಾಗೂ 16ನೇ ಶತಮಾನದದಾಸ ಶ್ರೇಷ್ಠ ಅಥವಾ ದಾಸ ಸುವರ್ಣಯುಗ ಎಂದು ಕರೆಯಲ್ಪಡುತ್ತದೆ. ಇಂದಿಗೂ ಕನಕನ ಕಿಂಡಿ ಹಾಗೂ ಕನಕನ ತೂಬು ಜೀವಂತ ಸಾಕ್ಷಿಯಾಗಿದೆ. ಹರಿಕೀರ್ತೆಗಳನ್ನ ಹಾಡುತ್ತಾ ಸಮಾಜದ ಪರಿವರ್ತನೆ ಹಾಗೂ ಸಮಾಜ ಸುಧಾರಣೆ ಮಾಡಿದ ಶ್ರೇಯ ಅವರಿಗೆ ಸಲ್ಲಬೇಕು.ಬೆಂ.ಗ್ರಾ ಗಣಿತ ವಿಷಯ ಪರಿವಿಕ್ಷಕ ಶ್ರೀಕಂಠಯ್ಯ, ಶಿಕ್ಷಕರಾದ ಎ.ಗೋವಿಂದರಾಜು, ಅನಂದಮ್ಮ, ಮಹಮದ್ ಜಬಿವುಲ್ಲಾಖಾನ್ ಸೇರಿದಂತೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.