ಬೊಗೋಟಾ: ಮಹಾರಾಷ್ಟ ವಿಮಾನ ಪತನದಲ್ಲಿ ದುರ್ಮರಣ ಹೊಂದಿದ ಡಿಸಿಎಂ ಅಜಿತ್ ಪವಾರ್ ಸಾವಿನ ಬೆನ್ನಲ್ಲೇ ಮತ್ತೊಂದು ಅವಘಡ ಕೊಲಂಬಿಯಾದಲ್ಲಿ ಸಂಭವಿಸಿದೆ. ಅಲ್ಲಿ ಲಘು ವಿಮಾನ ಪತನವಾಗಿದ್ದು ಸಂಸದ ಸೇರಿ ೧೫ ಮಂದಿ ಅಸುನೀಗಿದ್ದಾರೆ.ಸರ್ಕಾರಿ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಈ ಓಕಾನಾಗೆ ತೆರಳುತ್ತಿದ್ದ ವೇಳೆ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಅಪಘಾತಕ್ಕೀಡಾಗಿದೆ. ವಿಮಾನದಲ್ಲಿ ಇಬ್ಬರು ಸಿಬ್ಬಂದಿ ಮತ್ತು ೧೩ ಪ್ರಯಾಣಿಕರು ತೆರಳುತ್ತಿದ್ದರು. ಇದರಲ್ಲಿ ಸಂಸದ ಡಯೋಜೆನೆಸ್ ಕ್ವಿಂಟೆರೊ ಕೂಡ ಇದ್ದರು. ದುರಾದೃಷ್ಟವಶಾತ್ ೧೫ ಮಂದಿಯೂ ಸಾವನ್ನಪ್ಪಿದ್ದು ಯಾರೊಬ್ಬರು ಬದುಕುಳಿದಿಲ್ಲ.



