ಚೆನ್ನೈ: ಮಿಚಾಂಗ್ ಚಂಡಮಾರುತದ ಅಬ್ಬರಕ್ಕೆ ತಮಿಳುನಾಡು ಬಹುತೇಕ ತತ್ತರಿಸಿದ್ದು, ಈವರೆಗೆ ಸುಮಾರು 17 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅಲ್ಲದೆ, ಭಾರೀ ಮಳೆಯಿಂದಾಗಿ ತಮಿಳುನಾಡಿನ ಬಹುತೇಕ ಎಲ್ಲ ಪ್ರದೇಶಗಳು ಜಲಾವೃತವಾಗಿವೆ.
ಪಲ್ಲಿಕರಣೈ ಪ್ರದೇಶ ಸಂಪೂರ್ಣವಾಗಿ ಜಲಾವೃತವಾಗಿದ್ದು, ರಸ್ತೆಯೇ ಕೆರೆಯಂ ತಾಗಿದೆ.
ಸರಕು ತುಂಬಿದ್ದ ವಾಹಲಗಳು ರಸ್ತೆ ಮೇಲೆಯೆ ನಿಂತಿವೆ. ವಾಹನ ಸವಾರರು ಓಡಾಡಲು ಪರದಾಡುತ್ತಿದ್ದಾರೆ. ಇಲ್ಲಿನ ಪೆಟ್ರೋಲ್ ಪಂಪ್ಗಳಲ್ಲೂ ಸಹ ನೀರು ತುಂಬಿಕೊಂಡಿದೆ. ಅಲ್ಲದೆ, ಚೆನ್ನೈನಲ್ಲಿರುವ ಜೆರುಸಲೆಮ್ ಇಂಜಿನಿಯರಿಂಗ್ ಕಾಲೇಜ್ನಲ್ಲಿ ಸಂಪೂರ್ಣವಾಗಿ ನೀರು ತುಂಬಿದೆ.
ಮಿಚಾಂಗ್ ಚಂಡಮಾರುತದ ಪರಿಣಾಮ ತಮಿಳುನಾಡಿನಾದ್ಯಂತ ಸುರಿದ ಭಾರೀ ಮಳೆಗೆ ಜನ ಪರದಾಡುತ್ತಿದ್ದಾರೆ. ಪಾರ್ಕ್ ಆಗಿದ್ದ ಕಾರು, ಬೈಕುಗಳು ಕೊಚ್ಚಿಹೋಗಿವೆ. ಇದೀಗ ತಮಿಳುನಾಡು ಪ್ರವಾಹ ಪರಿಸ್ಥಿತಿ ಎದುರಿಸುತ್ತಿದ್ದು, ಸುರಿದ ಭಾರೀ ಮಳೆಯಿಂದಾಗಿ ದಿಂಡುಗಲ್ ಜಿಲ್ಲೆಯ ಕೊಡೈಕೆನಾಲ್ ಬೆಟ್ಟಗಳಲ್ಲಿರುವ ಜಲಪಾತಗಳು ತುಂಬಿ ಹರಿಯುತ್ತಿವೆ. ತುಂಬಿ ಹರಿಯುತ್ತಿರುವ ಜಲಪಾತದ ಮನಮೋಹಕವಾದ ದೃಶ್ಯ ಮೈಮರೆಸುವಂತಿದೆ.
ಮುಂದುವರಿದ ರಕ್ಷಣಾ ಕಾರ್ಯಾಚರಣೆ:
ಪ್ರವಾಹದ ನೀರಿನಲ್ಲಿ ಸಿಲುಕಿರುವ ಅನೇಕ ಕುಟುಂಬಗಳು ಇನ್ನೂ ಪರದಾಡುತ್ತಿವೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಸೈನಿಕರು ಹಗಲು ರಾತ್ರಿ ನಗರದ ಮೂಲೆ ಮೂಲಕೆಯಲ್ಲಿ ಮೂಲಭೂತ ಸೌಕರ್ಯಗಳ ನೀರು, ಆಹಾರವನ್ನು ಒದಗಿಸುತ್ತಿದ್ದಾರೆ. ಭಾರತೀಯ ಕೋಸ್ಟ್ ಗಾರ್ಡ್ (Iಅಉ) ವಿಪತ್ತಿಗೆ ಪ್ರತಿಕ್ರಿಯೆಯಾಗಿ ಸಮಯೋಚಿತ ಪೂರ್ವಭಾವಿ ಕ್ರಮಗಳನ್ನು ಕೈಗೊಂಡಿದ್ದು, ಸಮುದ್ರದಲ್ಲಿ ಯಾವುದೇ ಜೀವಹಾನಿಯಾಗದಂತೆ ಜಾಗೃತಿ ವಹಿಸಿದೆ.