ಉಡುಪಿ: ಜಿಲ್ಲಾಡಳಿತ, ಜಿ.ಪಂ., ಶಾಲಾ ಶಿಕ್ಷಣ ಇಲಾಖೆ ಹಾಗೂ ಸೈಂಟ್ ಸಿಸಿಲೀಸ್ ಪ್ರೌಢಶಾಲೆಯ ಆಶ್ರಯದಲ್ಲಿ 14ರ ವಯೋಮಾನದ ಶಾಲಾ ಬಾಲಕ-ಬಾಲಕಿಯರ ರಾಜ್ಯಮಟ್ಟದ ಕ್ರೀಡಾಕೂಟವನ್ನು ಉಡುಪಿಯ ಅಜ್ಜರಕಾಡು ಜಿಲ್ಲಾ ಮೈದಾನದಲ್ಲಿ ನ.1 ರಿಂದ ನ. 3 ರವರೆಗೆ ಆಯೋಜಿಸಲಾಗಿದೆ ಎಂದು ಶಾಸಕ ಯಶ್ಪಾಲ್ ಸುವರ್ಣ ಹೇಳಿದರು.
ಅಂದು ಸಂಜೆ 4.30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಟಾಳ್ಕರ್ ಅವರು ಕ್ರೀಡಾಕೂಟವನ್ನು ಉದ್ಘಾಟಿ ಸಲಿದ್ದು, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಂದನಾ ಸ್ವೀಕಾರ ಮಾಡ ಲಿದ್ದಾರೆ. ಉದ್ಘಾಟನೆಗೂ ಪೂರ್ವದಲ್ಲಿ ಮಧ್ಯಾಹ್ನ 3ಕ್ಕೆ ಉಡುಪಿಯ ಶೋಕಮಾತ ಇಗರ್ಜಿಯಿಂದ ಕೋರ್ಟ್ ರಸ್ತೆ, ಜೋಡುಕಟ್ಟೆ ಮಾರ್ಗವಾಗಿ ಮೆರವಣಿಗೆಯಲ್ಲಿ ಕ್ರೀಡಾಪಟುಗಳು ಮೈದಾನಕ್ಕೆ ಆಗಮಿಸಲಿದ್ದಾರೆ.
ಅಂತಾರಾಷ್ಟ್ರೀಯ ಕ್ರೀಡಾಪಟು ಮಿಜೋ ಚಾಕೋ ಆಗಮಿಸಲಿದ್ದಾರೆ. ಉದ್ಘಾಟನೆಯ ಅನಂತರ ಭಾರ್ಗವಿ ತಂಡ ಹಾಗೂ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಇರಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಕ್ರೀಡಾಪಟುಗಳಿಗೆ 17 ಸ್ಥಳಗಳಲ್ಲಿ ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಬಾಲಕ ಮತ್ತು ಬಾಲಕಿಯರಿಗೆ ಭದ್ರತೆಗೆ ಆದ್ಯತೆ ನೀಡಿದ್ದೇವೆ.
ಅಗತ್ಯ ಮೂಲಸೌಕರ್ಯದ ವ್ಯವಸ್ಥೆಯನ್ನು ಮಾಡಲಾಗಿದೆ. ಉಪಹಾರ, ಮಧ್ಯಾಹ್ನ ಊಟ, ರಾತ್ರಿ ಊಟವನ್ನು ಗೋವಿಂದ ಕಲ್ಯಾಣ ಮಂಟಪದಲ್ಲಿ ಇದರಲಿದೆ ಎಂದರು.ಡಿಡಿಪಿಐ ಗಣಪತಿ, ಶಾಲೆಯ ಮುಖ್ಯಶಿಕ್ಷಕಿ ಪ್ರೀತಿ ಜೆ. ಕ್ರಾಸ್ತಾ, ಶಿಕ್ಷಣ ಸಂಸ್ಥೆಯ ಜಂಟಿ ಕಾರ್ಯದರ್ಶಿ ತೆರೇಸಾ ಜ್ಯೋತಿ, ಪಿಟಿಎ ಉಪಾಧ್ಯಕ್ಷ ಸೋಹೆಲ್ ಅಮೀನ್, ವಸತಿ ಸಮಿತಿ ಕಾರ್ಯದರ್ಶಿ ಪ್ರಶಾಂತ್ ಜತ್ತನ್ನ, ಪ್ರಮುಖರಾದ ನಿರ್ಮಲಾ ಬಂಗೇರ, ರೀಟಾ ಲೋಬೋ ಸುದ್ದಿಗೋಷ್ಠಿಯಲ್ಲಿದ್ದರು.
1,800 ವಿದ್ಯಾರ್ಥಿಗಳು: ಕ್ರೀಡಾಕೂಟದಲ್ಲಿ 35 ಶೈಕ್ಷ ಣಿಕ ಜಿಲ್ಲೆಗಳು ಹಾಗೂ 2 ಕ್ರೀಡಾ ವಸತಿ ಶಾಲೆಗಳಿಂದ 1,800 ವಿದ್ಯಾರ್ಥಿ ಗಳು, 250 ತಂಡದ ವ್ಯವಸ್ಥಾಪಕರು, 250 ಕ್ರೀಡಾಧಿಕಾರಿಗಳು, 200 ಸ್ವಯಂಸೇವಕರು, ಕ್ರೀಡಾ ಆಯೋ ಜಕರು ಒಳಗೊಂಡಂತೆ 2,500 ಮಂದಿ ಭಾಗವಹಿಸಲಿದ್ದಾರೆ.