ಭಾರತದ ವೇಗಿ ಮೊಹಮ್ಮದ್ ಸಿರಾಜ್ ‘ವಿಶ್ವದಾಖಲೆ’ಯೊಂದನ್ನು ನಿರ್ಮಿಸಿದ್ದಾರೆ. ಈ ದಾಖಲೆ ಕಂಡು ಜಗತ್ತಿನ ವೇಗದ ಬೌಲರ್ಗಳೆಲ್ಲ ಕಕ್ಕಾಬಿಕ್ಕಿಯಾಗಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ಜಗತ್ತಿನ ಅತಿ ವೇಗದ ಎಸೆತ ಎಸೆದಿದ್ದಾರೆ! ಅದೂ ಬರೋಬ್ಬರಿ ಗಂಟೆಗೆ 181.6 ಕಿಮೀ ವೇಗದಲ್ಲಿ. ಇದು ನಿಜವೇ ಎಂದು ಬೆರಗಾಗಬೇಡಿ.
ತಾಂತ್ರಿಕ ದೋಷವು ಸಿರಾಜ್ ಎಸೆತವನ್ನು ಈ ನಂಬಲಸಾಧ್ಯ ವೇಗದಲ್ಲಿ ತೋರಿಸಿದೆ. ಇದು ತರಹೇವಾರಿ ಮೀಮ್ಗಳಿಗೆ ಆಹಾರವಾಗಿದೆ.
ಅಡಿಲೇಡ್ನಲ್ಲಿ ನಡೆಯುತ್ತಿರುವ ಬಾರ್ಡರ್- ಗವಾಸ್ಕರ್ ಟ್ರೋಫಿಯ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನವಾದ ಶುಕ್ರವಾರ ಈ ‘ವಿಸ್ಮಯ’ ಸಂಭವಿಸಿದೆ.