ದೇವನಹಳ್ಳಿ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ನೂತನ ಸಂಸದ ಡಾ.ಕೆ.ಸುಧಾಕರ್ ಅವರಿಗೆ ಅಭಿನಂದನಾ ಸಮಾರಂಭವನ್ನು ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತೀಯ ಕ್ಷತ್ರಿಯ ಮಹಾಸಭಾ ಅಧ್ಯಕ್ಷ ಮತ್ತು ಬಿಜೆಪಿ ಮುಖಂಡ ಎಸ್ ಆರ್ ಎಸ್ ಅಧ್ಯಕ್ಷ ಡಾ.ವಿ.ದೇವರಾಜ್ ಹೇಳಿದರು.
ದೇವನಹಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತಿಗಳ(ವಹ್ನಿಕುಲ ಕ್ಷತ್ರೀಯ ) ಸಮುದಾಯದ ವತಿಯಿಂದ “ ನೂತನ ಸಂಸದ ಡಾ.ಕೆ.ಸುಧಾಕರ್ ಅವರಿಗೆ ಅಭಿನಂದನಾ ಸಮಾರಂಭ ಹಿನ್ನಲೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಬುಳ್ಳಳ್ಳಿಯ ಆಧಿಪರಾಶಕ್ತಿ ಮಹಾಸಂಸ್ಥಾನ ಪೀಠದ ಶ್ರೀ ಬಾಲ ಯೋಗಿ ಸಾಯಿ ಮಂಜುನಾಥ್ ಮಹಾಸ್ವಾಮೀಜಿಗಳು ದಿವ್ಯ ಸಾನಿಧ್ಯವನ್ನು ವಹಿಸಲಿದ್ದಾರೆ,
ವಿಧಾನ ಪರಿಷತ್ ಸದಸ್ಯರಾದ ಎಂಟಿಬಿ ನಾಗರಾಜ್, ಯಲಂಕ ಶಾಸಕ ವಿಶ್ವನಾಥ್ ,ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜು, ಮಾಜಿ ಶಾಸಕರುಗಳಾದ ನಿಸರ್ಗ ನಾರಾಯಣಸ್ವಾಮಿ, ಜಿ. ಚಂದ್ರಣ್ಣ ಮತ್ತು ಪಿಳ್ಳಮುನಿಶಾಮಪ್ಪ, ಚಿಕ್ಕಬಳ್ಳಾಪುರ ಜಿಲ್ಲೆಯ ಬಿಜೆಪಿ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ,ಜೆಡಿಎಸ್ ಜಿಲ್ಲಾಧ್ಯಕ್ಷ ಮುನೇಗೌಡ ಸೇರಿದಂತೆ ಸಾವಿರಕ್ಕೂ ಹೆಚ್ಚಿನ ಬಿಜೆಪಿ, ಜೆಡಿಎಸ್ ಪಕ್ಷದ ಕಾರ್ಯಕರ್ತರು ಹಾಗೂ ಮುಂಚೂಣಿ ನಾಯಕರು,ಎನ್ ಡಿ ಎ ಪಕ್ಷದ ನಗರಸಭಾ ಸದಸ್ಯರು ,ಪುರಸಭಾ ಸದಸ್ಯರು ,ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ದೇವಾಲಯದ ಅಧ್ಯಕ್ಷರುಗಳು, ಗೌಡರು, ಯಜಮಾನರು, ಗಣಚಾರಿಗಳು ಹಾಗೂ ಕುಲಬಾಂಧವರು ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.
ತಾಲೂಕು ತಿಗಳರ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ಮಾತನಾಡಿ ತಿಗಳ ಸಮುದಾಯದ ಅಭಿವೃದ್ಧಿಗಾಗಿ ಸಂಸದರ ಅಭಿನಂದನಾ ಸಮಾರಂಭದಲ್ಲಿ ಎಲ್ಲಾ ಕುಲಬಾಂಧವರು ಒಂದೆಡೆ ಸೇರುವ ಹಾಗೂ ನಮ್ಮ ಸಮುದಾಯದ ಬೇಡಿಕೆಗಳನ್ನು ಮುಂದಿಡುವ ಒಂದು ಅವಕಾಶ ಲಭಿಸಿದೆ ಹಾಗಾಗಿ ಜಿಲ್ಲೆಯ ಎಲ್ಲಾ ತಾಲೂಕಿನಿಂದ ಕುಲಬಾಂಧವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ,ಮುಂದಿನ ದಿನಗಳಲ್ಲಿ ಸಂಸದರ ಸಹಕಾರ ನಮ್ಮ ಸಮುದಾಯದ ಮೇಲಿರಲಿದೆ ಎಂದರು.
ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ತಿಗಳ ಕ್ಷತ್ರಿಯ ಸಂಘ ಉಪಾಧ್ಯಕ್ಷ ವೈ.ಎನ್ ಶಾಮಣ್ಣ, ಸಂಘಟನಾ ಕಾರ್ಯದರ್ಶಿ ಮುನಿವೀರಣ್ಣ, ರಾಜ್ಯ ನಿರ್ದೇಶಕರುಗಳಾದ ಕನಕರಾಜ್ ಮುನಿ ವೀರಣ್ಣ, ಕೆ.ಎಂ.ಮಂಜುನಾಥ್, ಮೌಕ್ತಿಕಾಂಭ ದೇವಸ್ಥಾನ ಅಧ್ಯಕ್ಷ ಎಸ್.ಆರ್.ವಿಜಯಕುಮಾರ್, ತಾಲೂಕು ಸೊಸೈಟಿ ಮಾಜಿ ಅಧ್ಯಕ್ಷ ಸಿ.ಎಂ.ನಾರಾಯಣಸ್ವಾಮಿ, ಮುಖಂಡರುಗಳಾದ ಸುರೇಶ್, ಮಂಜುನಾಥ್ ಸ್ವಾಮಿ, ರಾಜ್ಯ ನಿರ್ದೇಶಕ ಕನಕರಾಜು, ಜೆಡಿಎಸ್ ತಾಲ್ಲೂಕಿನ ಉಪಾಧ್ಯಕ್ಷ ಸಿ.ಎಂ.ನಾರಾಯಣಸ್ವಾಮಿ, ಕೊನಘಟ್ಟ ಮಂಜುನಾಥ್ ಸ್ವಾಮಿ, ವಿಜಯಪುರದ, ಮಧು ಸೇರಿದಂತೆ ಮತ್ತಿತರರು ಇದ್ದರು.