ಬೆಂಗಳೂರು: ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ 19 ಆರೋಪಿಗಳನ್ನು 12ಪೊಲೀಸ್ ಠಾಣಾ ಅಧಿಕಾರಿ ಮತ್ತು ಸಿಬ್ಬಂದಿಗಳು ಬಂಧಿಸಿ ಒಂದು ಕೋಟಿ ಅಧಿಕ ಮೌಲ್ಯದ ಮೋಟರ್ ಸೈಕಲ್ ಗಳನ್ನು ವಶಪಡಿಸಿಕೊಂಡಿರುತ್ತಾರೆ.
ರಾಜಗೋಪಾಲ್ ನಗರ, ಗಿರಿನಗರ, ಬಾನಸ್ವಾಡಿ, ಎಚ್ಎಎಲ್, ನಂದಿನಿ ಲೇಔಟ್, ಬೆಳ್ಳಂದೂರ್, ಮಡಿವಾಳ, ಜೆಪಿ ನಗರ, ತಲಘಟ್ಟಪುರ, ಬಸವನಗುಡಿ ಮತ್ತು ಕೆಆರ್ಪುರಂ ಪೊಲೀಸರು ಆರೋಪಿ ಗಳನ್ನು ಬಂಧಿಸುವಲ್ಲಿ ಯಶಸ್ವಿ ಯಾಗಿರುತ್ತಾರೆ ಎಂದು ನಗರ ಪೊಲೀಸ್ ಆಯುಕ್ತ ದಯನಂದ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಈ ಆರೋಪಿಗಳು ಮನೆಯ ಮುಂದೆ ನಿಲ್ಲಿಸಿದ್ದ ಟು ವೀಲರ್ ವಾಹನಗಳನ್ನು ಹ್ಯಾಂಡಲ್ ವಾಕ್ ಮುರಿದು ಕಳವು ಮಾಡುತ್ತಿದ್ದರು.
ಇವುಗಳನ್ನು ತಮಿಳುನಾಡು ಮತ್ತು ಆಂಧ್ರಪ್ರದೇಶಗಳಲ್ಲಿ ಮಾರಾಟ ಮಾಡುತ್ತಿದ್ದರು ಎಂದು ತಿಳಿಸಿರುತ್ತಾರೆ.ಇವರುಗಳಿಂದ ಅಂದಾಜು 150 ವಾಹನಗಳನ್ನು ವಶಪಡಿಸಿಕೊಂಡಿರುತ್ತಾರೆ.
ಆರೋಪಿಗಳಾದ ಚಿತ್ತಾಪುರ ಗಾರಿ, ಅಭಿಷೇಕ್, ಭರತ್, ಸಯದ್ ಅಕ್ಬರ್, ಮೊಹಮ್ಮದ್ ಫರೀದಾ, ಮೌಸಿನ್, ಕಮಲ್ ಹಾಸನ್, ಮೊಹಮದ್ ನಿಸಾರ್ ಸೇರಿದಂತೆ ಆರೋಪಿಗಳನ್ನು ಬಂಧಿಸಿರುತ್ತಾರೆ.