ಬೆಂಗಳೂರು: ನಗರದ ವಿಕಾಸ ಸೌಧದ ಮೂರನೇ ಮಹಡಿಯಲ್ಲಿ ಕರ್ನಾಟಕ ರಾಜ್ಯದೊಂದಿಗೆ “ಕರಾವಳಿ ಪ್ರದೇಶ ನಿರ್ವಹಣೆ” ಕುರಿತು 1 ನೇ ತ್ರೈಮಾಸಿಕ ಸಭೆ ನಡೆಯಿತು.ಸಭೆಯಲ್ಲಿ ಮೂಲಸೌಲಭ್ಯ ಅಭಿವೃದ್ಧಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಕಾರ್ಯದರ್ಶಿ ಡಾ. ಎನ್. ಮಂಜುಳಾ ಅವರು, ಕರ್ನಾಟಕದ ಕರಾವಳಿ ನಿರ್ವಹಣೆ ಹಿನ್ನೆಲೆ ಕುರಿತು ಮಾಹಿತಿ ನೀಡಿದರು.
ಮತ್ತೊರ್ವ ಕರ್ನಾಟಕ ಜಲಸಾರಿಗೆ ಮಂಡಳಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜಯರಾಮ ರಾಯಪುರ ಅವರು, ಕರಾವಳಿ ಪ್ರದೇಶಗಳ ನಿರ್ವಹಣೆಯ ಸ್ಥಿತಿ, ಸಮಸ್ಯೆಗಳು ಮತ್ತು ಯೋಜನೆಗಳ ಬಗ್ಗೆ ಪಿಪಿಟಿ ಮೂಲಕ ಮಾಹಿತಿ ನೀಡಿದರು. ನವದೆಹಲಿಯ ಕೇಂದ್ರ ಜಲ ಆಯೋಗ, ಕರಾವಳಿ ನಿರ್ವಹಣಾ ನಿರ್ದೇಶನಾಲಯ ನಿರ್ದೇಶಕರಾದ ದೀಪಕ್ ಕುಮಾರ ಅವರು, ಕರಾವಳಿ ಪ್ರದೇಶ ನಿರ್ವಹಣೆಯಲ್ಲಿ ಭಾರತ ಸರ್ಕಾರದ ಉಪಕ್ರಮಗಳು ಕುರಿತು ಸವಿವರವಾಗಿ ಮಾಹಿತಿ ನೀಡಿದರು.
ಸಿಜಿಡಬ್ಲ್ಯೂಬಿ ಪ್ರಾದೇಶಿಕ ನಿರ್ದೇಶಕರಾದ ಎನ್. ಜ್ಯೋತಿ ಕುಮಾರ್ ಅವರು, ಕರಾವಳಿ ಕರ್ನಾಟಕದ ಸಮಸ್ಯೆಗಳ ಕುರಿತು ಮಾಹಿತಿ ನೀಡಿದರು.
ಪುಣೆಯ ವಿಜ್ಞಾನಿ -ಕೇಂದ್ರೀಯ ನೀರು ಮತ್ತು ವಿದ್ಯುತ್ ಸಂಶೋಧನಾ ಕೇಂದ್ರ (ಸಿಡಬ್ಲ್ಯೂಪಿಆರ್ ಎಸ್),ದ ಎ.ವಿ ಮಹಾಲಿಂಗಯ್ಯ ಅವರು, ಕೇಂದ್ರ ನೀರು ಮತ್ತು ವಿದ್ಯುತ್ ಸಂಶೋಧನಾ ಬಗ್ಗೆ ಮಾಹಿತಿ ನೀಡಿದರು.
ಚೆನ್ನೈ ವಿಜ್ಞಾನಿ-ಇನೇಷನಲ್ ಇನ್ಸ್ಟಿಟ್ಯೂಟ್ ಆಫ್ ಓಷನ್ ಟೆಕ್ನಾಲಜಿ (ಎನ್ಐಒಟಿ) ಶ್ಯಾಮಲಾ ಅವರು ಎನ್ ಐಓಟಿ ಬಗ್ಗೆ ಮತ್ತು ಗೋವಾದ ರಾಷ್ಟ್ರೀಯ ಸಮುದ್ರಶಾಸ್ತ್ರ ಸಂಸ್ಥೆ (ಎನ್ಐಒ) ಮುಖ್ಯ ವಿಜ್ಞಾನ ಡಾ.ಎ.ಎಸ್. ಸನಿಲ್ ಕುಮಾರ್ ವಿ. ಅವರು ಎನ್ ಐಓ ಬಗ್ಗೆ ಮಾಹಿತಿ ನೀಡಿದರು.
ಇನ್ನು ಇದೇ ವೇಳೆ ಜಲಸಂಪನ್ಮೂಲ ಇಲಾಖೆಯ ಕಾರ್ಯದರ್ಶಿ ಕೃಷ್ಣಮೂರ್ತಿ ಬಿ ಕುಲಕರ್ಣಿ, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಜೆ.ಇ.ಯತೀಶ್ ಚಂದ್ರನ್, ಎಂಎಸ್ಓ, ಸಿಡಬ್ಲ್ಯೂಸಿನ ಚೀಫ್ ಇಂಜಿನಿಯರ್ ವಿರೇಂದ್ರ ಶರ್ಮಾ, ಬಂದರು ನಿರ್ದೇಶಕರು ಮತ್ತು ಸದಸ್ಯರು, ಕರ್ನಾಟಕ ಜಲಸಾರಿಗೆ ಮಂಡಳಿಯ ಕ್ಯಾಪ್ಟನ್ ಸಿ. ಸ್ವಾಮಿ, ಕರ್ನಾಟಕ ಜಲಸಾರಿಗೆ ಮಂಡಳಿ ಚೀಫ್ ಇಂಜಿನಿಯರ್ ಪ್ರಮಿತ್, ಎಂಎಸ್ ಓ, ಸಿಡಬ್ಯೂಸಿ ನಿರ್ದೇಶಕರಾದ ಡಾ.ಜೆ. ಹರ್ಷ ಸೇರಿದಂತೆ ಹಲವರು ಇದ್ದರು.