ಬೆಂಗಳೂರು: ಅಮೃತಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ಹಾಡು ಹಗಲಲ್ಲೇ ಬೆಳಗ್ಗೆ ಸುಮಾರು 11 ಗಂಟೆ ಆಸುಪಾಸಿನಲ್ಲಿ 2,00,000ಲಕ್ಷ ಹಣವನ್ನು ದೋಚಿರುವ ಘಟನೆ ವರದಿಯಾಗಿದೆ.
ಶೃತಿ ಎಂಬ ಮಹಿಳೆಯು ಕೆನರಾ ಬ್ಯಾಂಕ್ ನಿಂದ ಎರಡು ಲಕ್ಷ ರೂ ಹಣವನ್ನು ಡ್ರಾ ಮಾಡಿಕೊಂಡು ಬ್ಯಾಗ್ನಲ್ಲಿ ಮನೆಗೆ ತೆಗೆದುಕೊಂಡು ಹೋಗುವ ಸಮಯದಲ್ಲಿ ಅಪರಿಚಿತ…ವ್ಯಕ್ತಿಗಳು ದ್ವಿಚಕ್ರ ವಾಹನದಲ್ಲಿ ಬಂದು ಬ್ಯಾಂಕ್ ಕಿತ್ತುಕೊಂಡು/ ಕತ್ತರಿಯಿಂದ ಕತ್ತರಿಸಿ ಪರಾರಿಯಾಗಿರುತ್ತಾರೆ.
ಭುವನೇಶ್ವರಿ ನಗರದ ಐದನೇ ಅಡ್ಡರಸ್ತೆಯಲ್ಲಿ ಈ ದುರ್ಘಟನೆ ಸಂಭವಿಸಿರುತ್ತದೆ.ಅಮೃತಳ್ಳಿ ಪೊಲೀಸರು ಆರೋಪಿಗಳ ಪತ್ತೆಗಾಗಿ ರಸ್ತೆಯಲ್ಲಿ ಹಾಗೂ ಬ್ಯಾಂಕ್ ಹತ್ತಿರ ಅಳವಡಿಸಿರುವ ಸಿಸಿ ಕ್ಯಾಮೆರಾ ಹಾಗೂ ಇತರೆ ಸಾರ್ವಜನಿಕರನ್ನು ವಿಚಾರಿಸಿ, ದೂರನ್ನು ದಾಖಲಿಸಿಕೊಂಡು ಆರೋಪಿಗಳ ಪತ್ತೆಗಾಗಿ ತಂಡವನ್ನು ರಚಿಸಿರುತ್ತಾರೆ.