ಬೆಂಗಳೂರು: ಕನಿಷ್ಠ ಬೆಂಬಲ ಬೆಲೆ (ಎಂಎಸ್ ಪಿ) ನಿಗದಿ ಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಮೂಲಕ ರಾಜ್ಯ ಸರಕಾರ ಮತ್ತು ರೈತರ ನಡುವೆ ಸಂಚಾಲಕರಾಗಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ಕೃಷಿ ಬೆಲೆ ಆಯೋಗ (ಕೆಎಪಿಸಿ) ಕಳೆದ ಎರಡೂವರೆ ವರ್ಷಗಳಿಂದ ಅಧ್ಯಕ್ಷರಿಲ್ಲದೆ ಕಾರ್ಯ ನಿರ್ವಹಿಸುತ್ತಿದೆ.
ಆಯೋಗವು ಎಲ್ಲಾ ನಾಲ್ಕು ಕೃಷಿ ವಿಶ್ವವಿದ್ಯಾನಿಲಯಗಳು ಮತ್ತು ತೋಟಗಾರಿಕಾ ವಿಶ್ವವಿದ್ಯಾನಿಲಯಗಳೊಂದಿಗೆ ಕನಿಷ್ಟ ಬೆಂಬಲ ಬೆಲೆ ನಿಗದಿಪಡಿಸುವಲ್ಲಿ ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡುವ ಕೆಲಸ ನಿರ್ವಹಿಸುತ್ತದೆ. ವಿಶ್ವವಿದ್ಯಾನಿಲಯಗಳು ರೈತರ ಆಯ್ದ ಜಮೀನಿನಲ್ಲಿ ಸಾಗುವಳಿ ವೆಚ್ಚದ ಕುರಿತು ಅಧ್ಯಯನ ನಡೆಸಿ ಸರ್ಕಾರಕ್ಕೆ ಕನಿಷ್ಟ ಬೆಂಬಲ ಬೆಲೆಗಾಗಿ ಶಿಫಾರಸು ಮಾಡುತ್ತವೆ. ಆಯೋಗವು ತನ್ನ ಶಿಫಾರಸುಗಳನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸುತ್ತದೆ ಮತ್ತು ಅದು ಕೇಂದ್ರ ಸರ್ಕಾರಕ್ಕೆ ಸಲ್ಲಿಸುತ್ತದೆ. ಎಂಎಸ್ ಸ್ವಾಮಿನಾಥನ್ ಫಾರ್ಮುಲಾವನ್ನು ಆಧರಿಸಿ ಕನಿಷ್ಠ ಬೆಂಬಲ ಬೆಲೆ ನಿರ್ಧರಿಸಲಾಗುತ್ತದೆ.
ಪ್ರಸ್ತುತ ಈ ಆಯೋಗದ ನೇತೃತ್ವವನ್ನು ಕರ್ನಾಟಕ ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ವಹಿಸಿದ್ದಾರೆ. ಮಂತ್ರಿ ಸ್ಥಾನದ ಒತ್ತಡದ ನಡುವೆ ಕೆಲಸ ನಿರ್ವಹಿಸುವುದು ದುಸ್ತರವಾಗುತ್ತಿದೆ. ಹೀಗಾಗಿ ರೆ ಈ ಎಲ್ಲಾ ಕರ್ತವ್ಯವನ್ನು ಪೂರ್ಣ ಸಮಯದಲ್ಲಿ ನಿರ್ವಹಿಸುವುದು ಅಧ್ಯಕ್ಷರ ಜವಾಬ್ದಾರಿ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕೆಲವು ಕಾಲ ಕೃಷಿ ಆಯುಕ್ತರಿಗೆ ಜವಾಬ್ದಾರಿ ನೀಡಲಾಗಿತ್ತು. ಈಗ ಸಚಿವರೇ ಇದರ ನೇತೃತ್ವ ವಹಿಸಿದ್ದಾರೆ. ಇವರಿಬ್ಬರ ಜವಾಬ್ದಾರಿಯನ್ನು ಗಮನಿಸಿದರೆ ಆಯೋಗದ ಕಾರ್ಯಗಳನ್ನು ಗಂಭೀರವಾಗಿ ಪರಿಗಣಿಸಲು ಸಾಧ್ಯವಾಗದೇ ಇರಬಹುದು. ಅಧಿಕಾರಿಗಳು ಎಂಎಸ್ಪಿ ಕುರಿತು ಸಭೆ ನಡೆಸಿ ಸರಿಪಡಿಸುತ್ತಿದ್ದಾರೆ. ಆದರೆ ಕೆಎಪಿಸಿ ಪ್ರಾತಿನಿಧ್ಯವಿಲ್ಲದೆ ಈ ಪ್ರಕ್ರಿಯೆಯಲ್ಲಿ ರೈತರ ಧ್ವನಿಯೇ ಇರುವುದಿಲ್ಲ ಎಂದು ಕೃಷಿ ಇಲಾಖೆಯ ಮೂಲಗಳು ತಿಳಿಸಿವೆ.
ನಮಗೆ ಈ ಆಯೋಗದ ಮುಖ್ಯಸ್ಥರಾಗಲು ಪೂರ್ಣ ಪ್ರಮಾಣದ ವ್ಯಕ್ತಿ ಬೇಕು. ಕೃಷಿ ವಿಶ್ವವಿದ್ಯಾನಿಲಯಗಳು ಕೃಷಿಗಾಗಿ ವೆಚ್ಚವನ್ನು ಮಾಡುತ್ತವೆ, ಸಮೀಕ್ಷೆ ನಡೆಸುತ್ತಾರೆ. ರೈತರು ಬೀಜಗಳು, ಗೊಬ್ಬರಗಳಿಗೆ ಎಷ್ಟು ಖರ್ಚು ಮಾಡಿದ್ದಾರೆ ಮತ್ತು ಅದರ ಆಧಾರದ ಮೇಲೆ ಬೆಲೆಯನ್ನು ಶಿಫಾರಸು ಮಾಡಲಾಗುತ್ತದೆ. ಅದು ಸಿದ್ಧವಾದ ನಂತರ, ಅದನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ ಮತ್ತು ಅದನ್ನು ಕೇಂದ್ರಕ್ಕೆ ಸಲ್ಲಿಸುತ್ತದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ನೊಂದಿಗೆ ಮಾತನಾಡಿದ ಆಯೋಗದ ಮಾಜಿ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ತಿಳಿಸಿದ್ದಾರೆ.
ಕರ್ನಾಟಕ ಕೃಷಿ ಬೆಲೆ ಆಯೋಗವನ್ನು 2014 ರಲ್ಲಿ ಸ್ಥಾಪಿಸಲಾಯಿತು. ಇದು ಬೆಳೆ ಉತ್ಪಾದನೆ, ಸಾಗುವಳಿ ವೆಚ್ಚ, ಸಾಗಣೆ ಮತ್ತು ಬೆಳೆ ವಿಮೆಯ ಕುರಿತು ರಾಜ್ಯ ಸರ್ಕಾರಕ್ಕೆ ಶಿಫಾರಸುಗಳನ್ನು ನೀಡುತ್ತದೆ. ಪ್ರಕಾಶ್ ಕಮ್ಮರಡಿ ಅವರು 2014 ರಿಂದ 2019 ರ ನಡುವೆ ಅಧ್ಯಕ್ಷರಾಗಿದ್ದು, 2019 ರಿಂದ 2022 ರವರೆಗೆ ಹನುಮನಗೌಡ ಅವರು ಅಧ್ಯಕ್ಷರಾಗಿದ್ದರು.
ಕೆಎಪಿಸಿಗೆ ಕೇವಲ ಅಧ್ಯಕ್ಷರೂ ಮಾತ್ರವಲ್ಲ ಸಾಕಷ್ಟು ತಾಂತ್ರಿಕ ಸಿಬ್ಬಂದಿಯನ್ನು ಹೊಂದಿಲ್ಲ ಎಂದು ಹೇಳಲಾಗಿದೆ. “ಒಂದು ಕಡೆ, ಸರ್ಕಾರವು ರೈತರ ಆದಾಯವನ್ನು ದ್ವಿಗುಣಗೊಳಿಸಲು ಬಯಸುತ್ತದೆ, ಮತ್ತು ಇನ್ನೊಂದು ಕಡೆ, ಪೂರ್ಣ ಪ್ರಮಾಣದ ಅಧ್ಯಕ್ಷರು ಮತ್ತು ಸಿಬ್ಬಂದಿಗಳಿಲ್ಲದೆ, KAPC ಕೇವಲ ಹೆಸರಿನ ಆಯೋಗವಾಗಿ ಮಾತ್ರ ಉಳಿದಿದೆ ಎಂದು ಅಧಿಕಾರಿಯೊಬ್ಬರು ಹೇಳಿದರು.