ಹೊಸ ವರ್ಷದ ಸ್ವಾಗತಕ್ಕೆ ದಿನಗಣನೆ ಶುರುವಾಗಿದೆ. ಆದರೆ ಈ ವರ್ಷವನ್ನು ಒಮ್ಮೆ ತಿರುಗಿ ನೋಡಿದರೆ ಕನ್ನಡ ಸಿನಿಮಾಗಳು ಕೊಂಚಮಟ್ಟಿಗೆ ನಿರಾಸೆ ಮೂಡಿಸಿವೆ. ಮುಂದಿನ ವರ್ಷ ಮತ್ತೆ ಕನ್ನಡ ಸಿನಿಮಾಗಳು ಸದ್ದು ಮಾಡುವ ಸುಳಿವು ಸಿಗುತ್ತಿದೆ. ಇನ್ನು ಈ ವರ್ಷ ಕನ್ನಡದಲ್ಲಿ ಹೆಚ್ಚು ಸದ್ದು ಹಾಡುಗಳ ಲಿಸ್ಟ್ ಇಲ್ಲಿದೆ.
ಈ ವರ್ಷ ಕನ್ನಡದಲ್ಲಿ 200ಕ್ಕೂ ಅಧಿಕ ಸಿನಿಮಾಗಳು ರಿಲೀಸ್ ಆಗಿವೆ. 600ಕ್ಕೂ ಹೆಚ್ಚು ಕನ್ನಡ ಹಾಡುಗಳು ಹೊರಬಂದಿವೆ. ಹಾಡುಗಳೇ ಇಲ್ಲದ ಸಿನಿಮಾಗಳು ಈ ಲಿಸ್ಟ್ನಲ್ಲಿವೆ. ಕಳೆದ ವರ್ಷವೇ ಹಾಡುಗಳು ಆಗಿದ್ದರೂ ಕೆಲ ಸಿನಿಮಾಗಳು ಈ ವರ್ಷ ತೆರೆಕಂಡಿದ್ದಿದೆ. ಅದೇ ರೀತಿ ಮುಂದಿನ ವರ್ಷ ತೆರೆಕಾಣುವ ಸಿನಿಮಾ ಹಾಡುಗಳು ಈ ವರ್ಷವೇ ರಿಲೀಸ್ ಆಗಿ ಸಿನಿರಸಿಕರ ಮನಗೆದ್ದಿದೆ.
ಒಂದ್ಕಾಲದಲ್ಲಿ ಸಿನಿಮಾ ಆಡಿಯೋ ಲಾಂಚ್ ಎನ್ನುವ ಕಾನ್ಸೆಪ್ಟ್ ಇತ್ತು. ಆದರೆ ಈಗ ಲಿರಿಕಲ್ ಸಾಂಗ್ಗಳನ್ನು ಸೋಷಿಯಲ್ ಮೀಡಿಯಾ ಫ್ಲಾಟ್ಫಾರ್ಮ್ಗಳಲ್ಲಿ ರಿಲೀಸ್ ಮಾಡುವ ಟ್ರೆಂಡ್ ನಡೀತಿದೆ. ಸಿನಿಮಾ ರಿಲೀಸ್ ಬಳಿಕ ವಿಡಿಯೋ ಸಾಂಗ್ಗಳು ಬರುತ್ತವೆ. ಈ ವರ್ಷ ಪದೇ ಪದೆ ಗುನುಗಿದ, ಇನ್ಸ್ಟಾ ರೀಲ್ಸ್, ಯೂಟ್ಯೂಬ್ ವೀವ್ಸ್, ಲೈಕ್ಸ್ನಲ್ಲಿ ಸದ್ದು ಮಾಡಿದ ಟಾಪ್ 5 ಸಾಂಗ್ಸ್ ಲಿಸ್ಟ್ ಮುಂದೆ ಇದೆ ನೋಡಿ.
ಇತ್ತೀಚೆಗೆ ಚಿತ್ರದ ಕನ್ನಡ ವರ್ಷನ್ ‘ಆಕಾಶದ ಗಡಿಯೇ’ ಸಾಂಗ್ ರಿಲೀಸ್ ಆಗಿತ್ತು. ಇಬ್ಬರು ಸ್ನೇಹಿತರ ಸ್ನೇಹದ ಕುರಿತಾದ ಹಾಡು ಸಿನಿರಸಿಕರ ಮನಗೆದ್ದಿದೆ. ರವಿ ಬಸ್ರೂರು ಸಂಗೀತದ ಈ ಹಾಡಿಗೆ ಕಿನ್ನಲ್ ರಾಜ್ ಸಾಹಿತ್ಯವಿದೆ. ವಿಜಯಲಕ್ಷ್ಮಿ ಮೆಟ್ಟಿನಹೊಳೆ ಹಾಡನ್ನು ಹಾಡಿದ್ದಾರೆ. ಹಾಡಿನ ಸಾಹಿತ್ಯದ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಪಸಂದಾಗವನೇ(ಕಾಟೇರ) ದರ್ಶನ್ ನಟನೆಯ ‘ಕಾಟೇರ’ ಸಿನಿಮಾ ಡಿಸೆಂಬರ್ 29ಕ್ಕೆ ತೆರೆಗೆ ಬರ್ತಿದೆ. ಈಗಾಗಲೇ ಚಿತ್ರದ 2 ಹಾಡು ರಿಲೀಸ್ ಆಗಿದ್ದು ‘ಪಸಂದಾಗವನೇ’ ಸಾಂಗ್ ಸೂಪರ್ ಹಿಟ್ ಆಗಿದೆ. ಹಾಡಿನಲ್ಲಿ ದರ್ಶನ್ ಹಾಗೂ ಆರಾಧನಾ ಕಾಣಿಸಿಕೊಂಡಿದ್ದಾರೆ. ಸಿಕ್ಕಾಪಟ್ಟೆ ಕಲರ್ಫುಲ್ ಆಗಿ ಸಾಂಗ್ ಸೆರೆಹಿಡಿಯಲಾಗಿದೆ. ಬಿಡುಗಡೆಯಾದ 10 ದಿನಗಳಲ್ಲಿ 12 ಮಿಲಿಯನ್ಗೂ ಅಧಿಕ ವೀವ್ಸ್ ಸಾಧಿಸಿದೆ. ವಿ. ಹರಿಕೃಷ್ಣ ಸಂಗೀತ ಹಾಡಿಗೆ ಚೇತನ್ ಕುಮಾರ್ ಸಾಹಿತ್ಯ ಬರೆದಿದ್ದು ಮಂಗ್ಲಿ ಹಾಡಿದ್ದಾರೆ.
ನದಿಯೇ (ಸಪ್ತಸಾಗರದಾಚೆ ಎಲ್ಲೋ) ರಕ್ಷಿತ್ ಶೆಟ್ಟಿ- ರುಕ್ಮಿಣಿ ವಸಂತ್ ನಟನೆಯ ‘ಸಪ್ತಸಾಗರದಾಚೆ ಎಲ್ಲೋ’ ಸಿನಿಮಾ ಹಿಟ್ ಲಿಸ್ಟ್ ಸೇರಿದೆ. ಚರಣ್ ರಾಜ್ ಸಂಗೀತದಲ್ಲಿ ಚಿತ್ರದ ಆಲ್ಬಮ್ ಹಿಟ್ ಆಗಿದೆ. ಕಪಿಲ್ ಕಪಿಲನ್ ಹಾಡಿರುವ ‘ನದಿಯೇ’ ಸಾಂಗ್ ಸಿನಿರಸಿಕರ ಹಾಟ್ ಫೇವರಿಟ್ ಎನಿಸಿಕೊಂಡಿದೆ. ಧನಂಜಯ್ ರಾಜನ್ ಸಾಹಿತ್ಯ ಹಾಡಿಗೆ ಪ್ಲಸ್ ಆಗಿತ್ತು. ಕೆಲವರು ರಿಪೀಟ್ ಮೂಡ್ನಲ್ಲಿ ಹಾಡು ಕೇಳುತ್ತಲೇ ಇದ್ದಾರೆ.
ಬ್ಯಾಡ್ ಬಾಯ್ಸ್ (ಭೀಮ) ದುನಿಯಾ ವಿಜಯ್ ನಿರ್ದೇಶಿಸಿ ನಟಿಸುತ್ತಿರುವ ‘ಭೀಮ’ ಸಿನಿಮಾ ಭಾರೀ ನಿರೀಕ್ಷೆ ಮೂಡಿದಿದೆ. ಮುಂದಿನ ವರ್ಷ ಸಿನಿಮಾ ತೆರೆಗೆ ಬರಲಿದ್ದು ಈಗಾಗಲೇ ಚಿತ್ರದ 2 ಹಾಡು ಹೊರ ಬಂದಿದೆ. ಅದರಲ್ಲೂ ‘ಸೈಕ್ ಆದೆ’ ಸಾಂಗ್ ಪಡ್ಡೆ ಹುಡುಗರಗೆ ಬಹಳ ಇಷ್ಟವಾಗಿದೆ. ರ್ಯಾಪ್ ಟಚ್ ಇರುವ ಹಾಡನ್ನು ರಾಹುಲ್ ಡಿಟ್ಟೋ, ಎಂಸಿ ಬಿಜ್ಜು ಹಾಡಿದ್ದಾರೆ.
ಶೇಕ್ ಶೇಕ್ ಪುಷ್ಪವತಿ(ಕ್ರಾಂತಿ) ಕಳೆದ ವರ್ಷ ಕೊನೆಗೆ ರಿಲೀಸ್ ಆಗಿದ್ದ ‘ಕ್ರಾಂತಿ’ ಚಿತ್ರದ ‘ಶೇಕ್ ಶೇಕ್ ಪುಷ್ಪವತಿ’ ಈ ವರ್ಷವೂ ಸಖತ್ ಸದ್ದು ಮಾಡಿದ್ದು ಸುಳ್ಳಲ್ಲ. ಇನ್ನು ‘ಕ್ರಾಂತಿ’ ಸಿನಿಮಾ ಈ ವರ್ಷ ಜನವರಿ 26ಕ್ಕೆ ತೆರೆಕಂಡಿತ್ತು. ಯೋಗರಾಜ್ ಭಟ್ರ ಟಿಪಿಕಲ್ ಲಿರಿಕ್ಸ್, ವಿ. ಹರಿಕೃಷ್ಣ ಟ್ಯೂನ್, ಐಶ್ವರ್ಯ ರಂಗರಾಜನ್ ವಾಯ್ಸ್ ಕೇಳುಗರನ್ನು ಕುಣಿಸಿದ್ದು ಸುಳ್ಳಲ್ಲ.