ವಾಷಿಂಗ್ ಟನ್: ಇತ್ತೀಚಿನ ದಶಕಗಳಲ್ಲಿ ಅಮೇರಿಕಾದಲ್ಲಿನ ಅಧ್ಯಕ್ಷೀಯ ಚುನಾವಣೆಯಲ್ಲಿ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿದೆ.
ಮತದಾರರನ್ನು ಸೆಳೆಯಲು ಟ್ರಂಪ್- ಕಮಲಾ ಹ್ಯಾರಿಸ್ ಕೊನೆಯ ಕ್ಷಣದ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ.
ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇರುವಾಗ ಟ್ರಂಪ್ 2020 ರ ನೆನಪುಗಳನ್ನು ಕೆದಕಿದ್ದು, 2020 ರಲ್ಲಿ ನಾನು ಸೊಲೊಪ್ಪಿಕೊಂಡು ಶ್ವೇತ ಭವನವನ್ನು ಬಿಟ್ಟು ಹೊರಬರಬಾರದಿತ್ತು ಎಂದು ಹೇಳಿದ್ದಾರೆ. ಈ ಮೂಲಕ ನ.05 ರಂದು ನಡೆಯುವ ಮತದಾನದಲ್ಲಿ ಒಂದು ವೇಳೆ ತಾವು ಕಮಲಾ ಹ್ಯಾರಿಸ್ ವಿರುದ್ಧ ಪರಾಭವಗೊಂಡರೆ ಈ ಬಾರಿ ಸೋಲೊಪ್ಪಿಕೊಳ್ಳುವುದಿಲ್ಲ ಎಂಬ ಸುಳಿವು ನೀಡಿದ್ದಾರಾ? ಎಂಬ ಪ್ರಶ್ನೆ ಮೂಡಿದೆ.