ದೇವನಹಳ್ಳಿ: ಗ್ರಾಮಗಳಲ್ಲಿ ನಡೆಯುವ ಅಹಿತಕರ ಘಟನೆಯನ್ನು ತಪ್ಪಿಸುವ ಸಲುವಾಗಿ ಕಣ್ಗಾವಲಿಗೆ ಸಿಸಿಟಿ ಕ್ಯಾಮರಾ ಅಳವಡಿಕೆ ಮಾಡಲಿದ್ದೇವೆ, ಸಿಎಸ್ ಆರ್ ಸೇವಾ ನಿಧಿಯ ಮೂಲಕ ಇನ್ನೂ ಒಳ್ಳೆಯ ಕಾರ್ಯಕ್ರಮಗಳನ್ನು ಜಾಲಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಲಿದ್ದೇವೆ ಎಂದು ಜಾಲಿಗೆ ಗ್ರಾಮ ಪಂಚಾಯತಿ ಅಧ್ಯಕ್ಷ ಆನಂದ್ ಕುಮಾರ್.ಎಸ್.ಎಂ ಹೇಳಿದರು.
ದೇವನಹಳ್ಳಿ ತಾಲೂಕಿನ ಬೆಟ್ಟೇನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಂಘದ ಆವರಣದಲ್ಲಿ” ಜಾಲಿಗೆ ಗ್ರಾಮ ಪಂಚಾಯತಿಯ 2023-24ನೇ ಸಾಲಿನ ಮೊದಲನೇ ಹಂತದ ಗ್ರಾಮ ಸಭೆ”ಯು ಅಧ್ಯಕ್ಷ ಆನಂದ್ ಕುಮಾರ್.ಎಸ್.ಎಂ ರವರ ಅಧ್ಯಕ್ಷತೆಯಲ್ಲಿ ನಡೆಸಿ ಮಾತನಾಡಿದರು.
ಬೆಟ್ಟೇನಹಳ್ಳಿ ಗ್ರಾಮದಲ್ಲಿ 26.ಲಕ್ಷ ವೆಚ್ಚದಲ್ಲಿ ಸರ್ಕಾರಿ ಶಾಲೆಯ ಎರಡು ಕೊಠಡಿಗಳನ್ನು ನಿರ್ಮಾಣಕ್ಕೆ ಮತ್ತು 75ಸಾವಿರದ ಶಾಲೆಯ ಪಿಠೋಪಕರಣಗಳಿಗೆ ಜಾಲಿಗೆ ಗ್ರಾಮ ಪಂಚಾಯತಿಯ ಸದಸ್ಯ ಮಹೇಶಬಾಬು ಕೊಡುಗೆಯಾಗಿ ನೀಡಿರುವುದು ಶ್ಲಾಘನೀಯ ಹಾಗಾಗಿ ಗ್ರಾಮದ ಪರವಾಗಿ ಕಿರು ಸನ್ಮಾನದ ಮೂಲಕ ಅಭಿನಂದನೆಗಳನ್ನು ತಿಳಿಸಿದರು.
ಗ್ರಾ.ಪಂ.ಸದಸ್ಯರಾದ ಮಹೇಶಬಾಬು ಮಾತನಾಡಿ ಗ್ರಾಮ ಠಾಣಾ ವ್ಯಾಪ್ತಿಯಲ್ಲಿ ಇ -ಖಾತಾ ಸರಿಯಾಗಿ ತಲುಪಿಲ್ಲ, ಅಂಗನವಾಡಿಗೆ ನಿವೇಶನ ಇನ್ನೂ ಕಲ್ಪಿಸಿಲ್ಲ, ಸರ್ಕಾರಿ ಜಾಗ ಒತ್ತುವರಿ ತೆರುವು ಮಾಡಿಲ್ಲ ಇಂತಹ ಸಮಸ್ಯೆಗಳನ್ನು ನಮ್ಮ ಮೇಲಿನ ಹಂತದ ಜನಪ್ರತಿನಿಧಿಗಳನ್ನು ಪ್ರಶ್ನಿಸುವುದು ಜನರಲ್ಲಿ ಹೆಚ್ಚಾಗಬೇಕು, ಏಕಬಳಕೆಯ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬೇಕು, ಸ್ವಾಇಚ್ಛೆಯಿಂದ ನಮ್ಮ ಸಾರ್ವಜನಿಕ ಆಸ್ತಿಗಳಾದ ರಸ್ತೆ,ಕೆರೆ ಮತ್ತು ಚರಂಡಿ ಸ್ವಚ್ಛತೆ ಕುರಿತು ಗ್ರಾಮದ ಜನರು ಗಮನಹರಿಸಬೇಕು ಎಂದರು.
ಸಭೆಯಲ್ಲಿ ಶೇ.75% ಅಂಕ ಗಳಿಸಿದ ಎಸ್ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ- 3000, ಪಿಯುಸಿ ವಿದ್ಯಾರ್ಥಿಗಳಿಗೆ 5000, ಪದವಿ ವಿದ್ಯಾರ್ಥಿಗಳಿಗೆ-7000 ನಗದು ಬಹುಮಾನ ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ಉಪ ತಹಸೀಲ್ದಾರ್ ಚೈತ್ರಾ, ಗ್ರಾಪಂ ನೂತನ ಉಪಾಧ್ಯಕ್ಷೆ ಭವ್ಯಾ ಕೆ.ಪ್ರಶಾಂತ್, ಸದಸ್ಯರಾದ ಮಹೇಶ್ಬಾಬು, ಶಿವಲಿಂಗಮ್ಮ, ರಾಧಮ್ಮ, ಅಶ್ವಿನಿ, ಪದ್ಮಾವತಿ, ಆನಂದ್ ಸಿ.ಎಂ., ಜಯಮ್ಮ, ಕೆಂಪರಾಜು, ಶೋಭಾ, ಆನಂದ್ ಸಿ.ಎಂ, ಅಪ್ಪಯ್ಯ ಬಿ.ಎಂ, ಮುನಿಯಪ್ಪ, ಮಂಜುಳ, ಜೆ.ಎ.ಸುಬ್ರಮಣ್ಯ, ರಾಧಮ್ಮ, ಸೌಮ್ಯ, ಲಕ್ಷ್ಮಮ್ಮ, ವಿಜಯ ರಾಘವೇಂದ್ರ, ಮುಖಂಡರಾದ ಪಟ್ಟಾಭಿರಾಮ್, ಮಹೇಶ್ ಕುಮಾರ್ ಬಿ.ಆರ್, ಪದ್ಮಾವತಿ ಮತ್ತು ಜಾಲಿಗೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಪ್ರಕಾಶ್.ಹೆಚ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಗ್ರಾಮಸ್ಥರು ಇದ್ದರು.