ಹನೂರು : ತಹಶೀಲ್ದಾರ್ ಹಾಗೂ ಪಟ್ಟಣ ಪಂಚಾಯಿತಿ ಆಡಳಿತಾಧಿಕಾರಿ ಕೆ.ಎನ್ ಚೈತ್ರಾ ಸೋಮವಾರ ಪಟ್ಟಣ ಪಂಚಾಯತಿಯ ಸಭಾಂಗಣದಲ್ಲಿ 2026-27 ನೇ ಸಾಲಿನ ಬಜೆಟ್ ಮಂಡನೆ ಮಾಡಿದರು.ಪಟ್ಟಣ ಪಂಚಾಯತಿ ಆಯವ್ಯಯದಲ್ಲಿನ ಎಲ್ಲಾ ಮೂಲಗಳಿಂದ ಪ್ರಾರಂಭಿಕ ಶುಲ್ಕ 18,07,36,669 ರೂಗಳ ಆದಾಯ ಮತ್ತು 17,28,35,000 ರೂಗಳ ವೆಚ್ಚವನ್ನು ಅಳವಡಿಸಿಕೊಂಡು 79,01,669 ರೂಗಳ ಉಳಿತಾಯ ಬಜೆಟ್ ಮಂಡಿಸಿ
ದರು.ಎಸ್.ಎಫ್.ಸಿ ವೇತನ ಅನುದಾನ, ಪೌರ ಕಾರ್ಮಿಕರ ವೇತನ ಅನುದಾನ, ಎಸ್.ಎಫ್.ಸಿ ವಿದ್ಯುತ್ ಅನುದಾನ, ಎಸ್.ಎಫ್.ಸಿ ಮುಕ್ತ ನಿಧಿ ಅನುದಾನ 15-16 ನೇ ಹಣಕಾಸು ಅನುದಾನ, ಎಸ್.ಎಫ್.ಸಿ ಕುಡಿಯುವ ನೀರಿನ ಅನುದಾನ, ಪೌರಕಾರ್ಮಿಕ ಗೃಹ ಭಾಗ್ಯ ಯೋಜನೆಯ ಅನುದಾನ ಎಸ್.ಎಫ್.ಸಿ ವಿಶೇಷ ಅನುದಾನ, ಘನತ್ಯಾಜ್ಯ ವಸ್ತು ನಿರ್ವಹಣೆ ಅನುದಾನ / ಸ್ವಚ್ಛ ಭಾರತ್ ಅನುದಾನ, ಡೇ ನೆಲ್ಮ್ ಯೋಜನೆಯ ಅನುದಾನ, ಶಾಸಕರ ಅನುದಾನ, ಕಛೇರಿ ಕಟ್ಟಡ ನಿರ್ಮಾಣ ಅನುದಾನ, ಎಸ್. ಎಫ್.ಸಿ ಇತರೆ ಅನುದಾನಗಳು, ಇಂದಿರಾ ಕ್ಯಾಂಟಿನ್ ಅನುದಾನ, ಜನಗಣತಿ ಅನುದಾನ, ಆಸ್ತಿ ತೆರಿಗೆ ಮತ್ತು ದಂಡ, ಉಪಕರ ಸಂಗ್ರಹಣೆ ಶುಲ್ಕಗಳು, ವಾಣಿಜ್ಯ ಮಳಿಗೆ ಬಾಡಿಗೆ ಮತ್ತು ದಂಡ, ವ್ಯಾಪಾರ ಪರವಾನಿಗೆ ಶುಲ್ಕಗಳು, ವಾಹನ ನಿಲುಗಡೆ ಶುಲ್ಕಗಳು, ಕಟ್ಟಡ ಪರವಾನಿಗೆ ಶುಲ್ಕಗಳು, ಖಾತ ನಕಲು ಮತ್ತು ವರ್ಗಾವಣೆ ಶುಲ್ಕ ಘನ ತಾಜ್ಯ ನಿರ್ವಹಣಾ ಶುಲ್ಕಗಳು, ಬ್ಯಾಂಕ್ ಖಾತೆಯಿಂದ ಬಂದ ಬಡ್ಡಿ, ಜಾಹಿರಾತು ತೆರಿಗೆ, ಜಾತ್ರೆ ಶುಲ್ಕಗಳು, ಶೌಚಾಲಯ ಬಾಡಿಗೆ, ಸಕ್ಕಿಂಗ್ ವಾಹನಗಳ ಬಾಡಿಗೆ, ಪ್ರಮಾಣ ಪತ್ರಗಳ ಶುಲ್ಕ, ಮಾಹಿತಿ ಹಕ್ಕು ಶುಲ್ಕ, ಗುತ್ತಿಗೆದಾರರಿಂದ ಮತ್ತು ನೌಕರರಿಂದ ಕಡಿತವಾದ ತೆರಿಗೆ ಮತ್ತು ವಸೂಲಾತಿಗಳು, ಆಸ್ತಿ ತೆರಿಗೆಯಲ್ಲಿ ಸಂಗ್ರಹಿಸಿದ ಉಪಕರಗಳು ಸೇರಿದಂತೆ 18.07 ಕೋಟಿ ಆದಾಯವನ್ನು ನಿರೀಕ್ಷಿಸಲಾಗಿದೆ.ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಎಂ.ಆರ್ ಮಂಜುನಾಥ್ ಮಾತನಾಡಿ ಈಗ ಮಂಡಿಸಿರುವ ಬಜೆಟ್ ಕೇವಲ ಇವತ್ತಿಗೆ ಸೀಮಿತವಾಗಬಾರದು ಸರಿಯಾದ ರೀತಿಯಲ್ಲಿ ಅನುಷ್ಠಾನ ಮಾಡಬೇಕು ಈಗಾಗಲೇ ಕಳೆದ ಬಾರಿ ಮಂಡಿಸಿರುವ ಬಜೆಟ್ ನಲ್ಲಿ ಏನೇನು ಕಾರ್ಯಕ್ರಮಗಳು ಅನುಷ್ಠಾನವಾಗಿದೆ ಅದರ ಮಾಹಿತಿಯನ್ನು ನೀಡಬೇಕು ಎಂದು ಮುಖ್ಯಾಧಿಕಾರಿಗೆ ಸೂಚಿಸಿದರು.ಇದೆ ವೇಳೆ ಮುಖ್ಯಾಧಿಕಾರಿ ರೇಖಾ, ಆರೋಗ್ಯಾ
ಧಿಕಾರಿ ಪ್ರಕಾಶ್, ಸಿಬ್ಬಂದಿಗಳಾದ ಮಹೇಶ್, ಭರತ್, ಪ್ರತಾಪ್, ಮದನ್, ರಮ್ಯ, ಆಶಾ, ಮಹೇಶ್ ಹಾಗೂ ಇನ್ನಿತರರು ಇದ್ದರು.
2026-27 ನೇ ಸಾಲಿನ ಬಜೆಟ್ ಮಂಡನೆ



