ವದೆಹಲಿ: 2050 ರ ವೇಳೆಗೆ ಭಾರತವು ವಿಶ್ವದ ಅತಿದೊಡ್ಡ ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ದೇಶವಾಗಲಿದ್ದು, ಭಾರತವನ್ನು ಹೊರತುಪಡಿಸಿ ಉಳಿದೆಲ್ಲ ದೇಶಗಳಲ್ಲಿ ಹಿಂದೂ ಜನಸಂಖ್ಯೆ ಕಡಿಮೆಯಾಗಲಿದೆ ಎಂದು ವರದಿಯೊಂದು ಹೇಳಿದೆ.
ಅಮೇರಿಕನ್ ಚಿಂತಕರ ಚಾವಡಿ ಪ್ಯೂ ಸಂಶೋಧನಾ ಕೇಂದ್ರ ಈ ವರದಿ ನೀಡಿದ್ದು, ‘ಎಲ್ಲಾ ಧಾರ್ಮಿಕ ಗುಂಪುಗಳಲ್ಲಿ ಮುಸ್ಲಿಮರು ಅತ್ಯಂತ ಕಿರಿಯ ಸರಾಸರಿ ವಯಸ್ಸು (30) ಹೊಂದಿರುವುದರಿಂದ, ಅದು ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ಗುಂಪಾಗಿದೆ.
2050 ರ ವೇಳೆಗೆ ಭಾರತವು ವಿಶ್ವದ ಅತಿದೊಡ್ಡ ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ದೇಶವಾಗಲಿದೆ. ಅಂತೆಯೇ ಭಾರತವನ್ನು ಹೊರತುಪಡಿಸಿ ಉಳಿದೆಲ್ಲ ದೇಶಗಳಲ್ಲಿ ಹಿಂದೂ ಜನಸಂಖ್ಯೆ ಕಡಿಮೆಯಾಗಲಿದೆ ಎಂದು ವರದಿಯಲ್ಲಿ ಹೇಳಿದೆ.
ಮುಂಬರುವ ದಶಕಗಳಲ್ಲಿ ವಿಶ್ವದ ಜನಸಂಖ್ಯೆಯು ಶೇಕಡಾ 35 ರಷ್ಟು ಬೆಳೆಯುವ ನಿರೀಕ್ಷೆಯಿದ್ದರೂ, ಮುಸ್ಲಿಮರ ಸಂಖ್ಯೆ ಶೇಕಡಾ 73 ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಪ್ರಮುಖವಾಗಿ 2050 ರ ಹೊತ್ತಿಗೆ ಮುಸ್ಲಿಮರ ಸಂಖ್ಯೆ 2.8 ಬಿಲಿಯನ್ಗೆ ತಲುಪುತ್ತದೆ. ವಾಸ್ತವವಾಗಿ, ಮುಸ್ಲಿಮರು ಇಡೀ ವಿಶ್ವದ ಜನಸಂಖ್ಯೆಗಿಂತ ವೇಗವಾಗಿ ಬೆಳೆಯುವ ಏಕೈಕ ಪ್ರಮುಖ ಧಾರ್ಮಿಕ ಗುಂಪಾಗಿದೆ.
2050ರ ವೇಳೆಗೆ ಭಾರತವು 31 ಕೋಟಿ ಮುಸ್ಲಿಮರನ್ನು ಹೊಂದಲಿದ್ದು, ಜಾಗತಿಕ ಮುಸ್ಲಿಂ ಜನಸಂಖ್ಯೆಯ 11% ರಷ್ಟಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಹೆಚ್ಚಿನ ಫಲವತ್ತತೆಯ ಪ್ರಮಾಣದಿಂದಾಗಿ, ಭಾರತದಲ್ಲಿ ಮುಸ್ಲಿಂ ಜನಸಂಖ್ಯೆಯು ವೇಗವಾಗಿ ಬೆಳೆಯುವ ನಿರೀಕ್ಷೆಯಿದೆ. 2010 ರಲ್ಲಿ, ಮುಸ್ಲಿಮರ ಒಟ್ಟು ಜನಸಂಖ್ಯೆಯ 14.4% ರಷ್ಟಿತ್ತು. ಆದರೆ 2050ರ ವೇಳೆಗೆ ಇದು 18.4% ಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ.