ಚೆನ್ನೈ ಗ್ರ್ಯಾಂಡ್ಮಾಸ್ಟರ್ಸ್ ಚೆಸ್: ಅರವಿಂದ್ ಮುಡಿಗೆ ಕಿರೀಟ
ಕಡೆಯ ಎರಡು ಸುತ್ತುಗಳಲ್ಲಿ ಅಮೋಘ ರೀತಿ ಪುಟಿದೆದ್ದ ಗ್ರ್ಯಾಂಡ್ ಮಾಸ್ಟರ್ ಅರವಿಂದ ಚಿದಂಬರಮ್ ನಂತರ ಬ್ಲಿಟ್ಜ್ನಲ್ಲೂ ಮಿಂಚಿ, ಚೆನ್ನೈ ಗ್ರ್ಯಾಂಡ್ ಮಾಸ್ಟರ್ಸ್ ಚೆಸ್ ಟೂರ್ನಿಯಲ್ಲಿ ಸೋಮವಾರ ಚಾಂಪಿಯನ್ ಮುಕುಟ ಧರಿಸಿದರು. ಚಾಲೆಂಜರ್ಸ್ ವಿಭಾಗದಲ್ಲಿ ವಿ.ಪ್ರಣವ್ ಅರ್ಹವಾಗಿ ಪ್ರಶಸ್ತಿ ಗೆದ್ದುಕೊಂಡರು.
ಮಾಸ್ಟರ್ಸ್ ವಿಭಾಗದಲ್ಲಿ ಏಳನೇ (ಕೊನೆಯ) ಸುತ್ತಿನ ನಂತರ ಮೂವರು ಅಗ್ರಸ್ಥಾನ ಹಂಚಿಕೊಂಡಿದ್ದರು. ಅರವಿಂದ ಚಿದಂಬರಮ್, ಅಮೆರಿಕದ ಲೆವೊನ್ ಅರೋನಿಯನ್ ಮತ್ತು ಅರ್ಜುನ್ ಇರಿಗೇಶಿ ಅವರು ತಲಾ ೪.೫ ಪಾಯಿಂಟ್ಸ್ ಗಳಿಸಿದ್ದರು.
ಅರವಿಂದ ಉತ್ತಮ ಟೈಬ್ರೇಕ್ ಹೊಂದಿದ್ದು ನೇರವಾಗಿ ಪ್ರಶಸ್ತಿ ಸುತ್ತಿಗೆ ತಲುಪಿದರು. ಹೀಗಾಗಿ ಅರೋನಿಯನ್ ಮತ್ತು ಅರ್ಜುನ್ ನಡುವಣ ಎರಡು ಪಂದ್ಯಗಳ ಬ್ಲಿಟ್ಜ್ ಸ್ಪರ್ಧೆ ನಡೆದವು. ಇದರಲ್ಲಿ ಇಬ್ಬರೂ ತಲಾ ಒಂದು ಗೆದ್ದ ಕಾರಣ ‘ಸಡನ್ ಡೆತ್’ ಅಳವಡಿಸಲಾಯಿತು. ಇದರಲ್ಲಿ ಕಪುö್ಪ ಕಾಯಿಗಳಲ್ಲಿ ಆಡಿ ಡ್ರಾ ಮಾಡಿದ ಅರೋನಿಯನ್ ಗೆದ್ದರು.
ನಂತರ ಪ್ರಶಸ್ತಿಗೆ ನಡೆದ ಹಣಾಹಣಿಯಲ್ಲಿ ಅರವಿಂದ್ ಪ್ಲೇ ಆಫ್ನ ಮೊದಲ ಪಂದ್ಯ ಗೆದ್ದುಕೊಂಡರು. ನಂತರ ಕಪುö್ಪ ಕಾಯಿಗಳಲ್ಲಿ ಆಡಿ ಎರಡನೇ ಪಂದ್ಯ ಡ್ರಾ ಮಾಡಿಕೊಂಡು ಫೈನಲ್ನ ವಿಜೇತರಾದರು.