ಕೆ.ಆರ್.ಪೇಟೆ: ತಾಲ್ಲೂಕಿನ ಶೀಳನೆರೆ ಹೋಬಳಿಯ ನವಿಲುಮಾರನಹಳ್ಳಿ ಗ್ರಾಮದ ಸಮೀಪ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವದ ಜಲಧಾರೆ ಯೋಜನೆಯ 210 ಕೋಟಿ ವೆಚ್ಚದಲ್ಲಿ ಕೆ.ಆರ್.ಪೇಟೆ ತಾಲ್ಲೂಕಿನ 310 ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಯೋಜನೆಯ ನೀರು ಸಂಗ್ರಹಗಾರ ಹಾಗೂ ಪಂಪ ಹೌಸ್ ಘಟಕದ ನಿರ್ಮಾಣ ಕಾಮಗಾರಿಯ ಭೂಮಿ ಪೂಜೆಯನ್ನು ಶಾಸಕ ಹೆಚ್.ಟಿ ಮಂಜು ನೆರವೇರಿಸಿದರು.
ಪೂಜೆ ನೆರವೇರಿಸಿ ಮಾತನಾಡಿದ ಶಾಸಕ ಹೆಚ್.ಟಿ ಮಂಜು ಮಹಾತ್ಮ ಗಾಂಧೀಜಿರವರ ಕನಸಿನ ಗ್ರಾಮಗಳ ಅಭಿವೃದ್ಧಿ ಪೂರಕವಾಗಿ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಜಲ ಜೀವನ್ ಮಿಷನ್ ಯೋಜನೆಯೂ ಒಂದಾಗಿದೆ. ಗ್ರಾಮೀಣ ಭಾಗದಲ್ಲಿ ಶುದ್ಧ ಕುಡಿಯುವ ನೀರಿನ ಸಮಸ್ಯೆಯಿಂದ ಕಾಯಿಲೆಗಳಿಗೆ, ದೈಹಿಕ ಸಮಸ್ಯೆಗಳಿಗೆ ತುತ್ತಾಗುತ್ತಿದ್ದರು.
ಸರ್ಕಾರ ಸಾಕಷ್ಟು ಕಡೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಮಾಡಿದರು ಸಹ ಇನ್ನು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದನ್ನು ಪರಿಗಣಿಸಿ ಕೇಂದ್ರ ಸರ್ಕಾರ ನುರಿತ ತಜ್ಞರ ಸಲಹೆ ಮೇರೆಗೆ ಗ್ರಾಮೀಣ ಭಾಗದ ಪ್ರತಿ ಮನೆಗೆ ನಲ್ಲಿ ಮೂಲಕ ಶುದ್ಧ ನೀರು ಸರಬರಾಜು ಮಾಡುವ ಮೂಲಕ ಪ್ರತಿಯೊಬ್ಬರ ಆರೋಗ್ಯ ಕಾಪಾಡುವ ದೂರ ದೃಷ್ಟಿಯಿಂದ ಕೆಲಸ ಮಾಡುವುದು ನಮ್ಮ ಮೊದಲ ಆದ್ಯತೆಯಾಗಿದೆ,
ಹಾಗಾಗಿ ಕೇಂದ್ರ ಸರ್ಕಾರವು ಕೂಡ ಮಹತ್ವಾಕಾಕ್ಷಿ ಯೋಜನೆಗಳಲ್ಲಿ ಒಂದಾದ ಜಲಧಾರೆ ಇಂತಹ ಜನಸ್ನೇಹಿ ಕಾಮಗಾರಿಯನ್ನು ಗುಣಮಟ್ಟದಿಂದ ಮತ್ತು ವೇಗವಾಗಿ ಕೆಲಸವನ್ನು ಮಾಡಿದರು ಸ್ಥಳೀಯ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಹಾಗಾಗಿ ಸಾರ್ವಜನಿಕರು ಗುಣಮಟ್ಟದ ಕಾಮಗಾರಿಗೆ ಹೆಚ್ಚು ಸೂಚಿಸಿ.ಮುಂದೆ ಬೇಸಿಗೆ ಕಾಲದಲ್ಲಿ ಕುಡಿಯುವ ಹೆಚ್ಚು ಅಭಾವ ಬರಬಹುದು ಹಾಗಾಗಿ ವೇಗವಾಗಿ ಕಾಮಗಾರಿ ಪೂರ್ಣಗೊಳಿಸಬೇಕು. ಗ್ರಾಮದವರ ಸಹಕಾರದೊಂದಿಗೆ ಹಂತ ಹಂತವಾಗಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ನಾನು ಬದ್ದನಾಗಿದ್ದೇನೆ. ಮೊದಲಬಾರಿ ಶಾಸಕನಾಗಿದ್ದೇನೆ. ಹಾಗಾಗಿ ಜನರ ಹಿತಾಸಕ್ತಿಗೆ ಅನುಗುಣವಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಜ್ಯ ಸಹಕಾರ ಮಾರಟ ಮಹಾ ಮಂಡಳಿ ನಿರ್ದೇಶಕ ಶೀಳನೆರೆ ಮೋಹನ್, ಶೀಳನೆರೆ ಗ್ರಾ.ಪಂ ಅಧ್ಯಕ್ಷ ಯುವರಾಜು, ಗ್ರಾ.ಪಂ ಸದಸ್ಯರಾದ ಗಾಯಿತ್ರಿಸಿದ್ದೇಶ್, ರೇಣುಕಮ್ಮ, ಮೋಹನ್, ಶೀಳನೆರೆ ಸಿದ್ದೇಶ್, ಶ್ರೀನಿವಾಸ್, ಸೋಮಣ್ಣ, ಮಾಜಿ ಅಧ್ಯಕ್ಷ ಚೆಟ್ಟೆನಹಳ್ಳಿ ನಾಗರಾಜು, ಹರಳಹಳ್ಳಿ ಗ್ರಾ. ಪಂ ಮಾಜಿ ಅಧ್ಯಕ್ಷ ಬೈರಾಪುರ ಹರೀಶ್, ಪಿಡಿಓ ನವೀನ್ ಕುಮಾರ್,ಮುಖಂಡ ಹರೀಶ್, ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ರಶ್ಮಿ, ಸಹಾಯಕ ಇಂಜಿನಿಯರ್ ಪ್ರವೀಣ್, ಬಿಂದು, ಭೂಮಿ ದಾನಿಗಳಾದ ರಾಜೇಗೌಡ, ಯುವ ಮುಖಂಡರಾದ ಆರ್.ಡಿ ಕುಮಾರ್, ಮಾಜಿ ಸದಸ್ಯೆ ರಮ್ಯ, ಕೃಷ್ಣೆಗೌಡ, ಬೋರೇಗೌಡ, ಶಾಸಕರ ಆಪ್ತ ಸಹಾಯಕ ಅರಳಕುಪ್ಪೆ ಪ್ರತಾಪ್ ಗೌಡ ಸೇರಿದಂತೆ ಇತರರು ಹಾಜರಿದ್ದರು.