ನೆಲಮಂಗಲ: ಮುಂದಿನ ಪೀಳಿಗೆಗೆ ನಮ್ಮ ಸಂಸ್ಕ್ರತಿ ನಮ್ಮ ಪುರಾತನ ಪರಂಪರೆಯನ್ನು, ಪರಿಚಯಿಸಬೇಕಾದ ಗುರುತರ ಹೊಣೆಗಾರಿಕೆ ನಮ್ಮ ಮೇಲಿದೆ ಎಂದು ಶ್ರೀ ಸದ್ಧರ್ಮ ಸಿಂಹಾಸನ ಸಂಸ್ಥಾನ ಹೊನ್ನಮ್ಮಗವಿ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಸೋಂಪುರ ಹೋಬಳಿಯ ಮಠದ ಆವರಣದಲ್ಲಿ ಏಪ್ರಿಲ್ 22 ರಿಂದ 25 ರವರೆಗೆ ನಡೆಯುವ, ಶ್ರೀ ಹೊನ್ನಾದೇವಿ ಆರತಿ(ಮಡೆ) ಜಾತ್ರಾ ಮಹೋತ್ಸವ, ಶ್ರೀ ರಾಚೋಟಿ ವೀರಭದ್ರಸ್ವಾಮಿ ಮಂಟಪೋತ್ಸವ, ವಿವಿಧ ಪ್ರಶಸ್ತಿ ಪ್ರಧಾನ, ಭೃಂಗಿ ಮಠದ ಉದ್ಛಾಟನಾ ಸಮಾರಂಭದ ಪೂರ್ವ ಭಾವಿ ಸಭೆಯ ನೇತೃತ್ವ ವಹಿಸಿ ಮಾತನಾಡಿದರು.
ಶ್ರೀ ಮಠ ಹಲವಾರು ವರ್ಷಗಳಿಂದ ತ್ರಿವಿಧ ದಾಸೋಹದ ಜೊತೆಗೆ, ವಿದ್ಯಾರ್ಥಿಗಳ ವಸತಿ ನಿಲಯ, ಗೋಶಾಲೆ ನಡೆಸಿಕೊಂಡು ಬಂದಿದೆ, ಕಳೆದ ವರ್ಷ 280 ವಿದ್ಯಾರ್ಥಿಗಳ ಮಠದಲ್ಲಿ ಆಶ್ರಯ ಪಡೆದಿದ್ದರೂ, ಮುಂದಿನ ಶೈಕ್ಷಣಿಕ ಸಾಲಿಗೆ 500 ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳುವ ಗುರಿ ಇದೆ, ಏಪ್ರಿಲ್ 23 ರಂದು ಭೃಂಗಿ ಮಠ ಉದ್ಘಾಟನೆ, ಪ್ರಶಸ್ತಿ ಪ್ರಧಾನ ಮತ್ತು ಧಾರ್ಮಿಕ ಚಿಂತನಾ ಸಭೆ ಬೆಳಗ್ಗೆ 10.30 ಕ್ಕೆ ನಡೆಯಲಿದ್ದು, ದಿವ್ಯಸಾನಿಧ್ಯವನ್ನು ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ ವಹಿಸಲಿದ್ದು, ಕೆರೆಗೋಡು ಶ್ರೀ ರಂಗಾಪುರದ ಶ್ರೀ ಗುರು ಪರದೇಶೀಕೇಂದ್ರ ಮಹಾಸ್ವಾಮೀಜಿ ಭಾಗವಹಿಸಲಿದ್ದಾರೆ,
ಆಶೀರ್ವಚನವನ್ಮು, ಬೇಲಿ ಮಠದ ಶ್ರೀ, ಶ್ರೀ ಡಾ.ವಿರೇಶಾನಂದ ಸ್ವಾಮೀಜಿ, ಹಿರೇಮಠದ ಶ್ರೀ, ದೇಗುಲ ಮಠದ ಶ್ರೀ ಮೇಲಣಗವಿ ಮಠದ ಶ್ರೀ ಸೇರಿದಂತೆ 10 ಕ್ಕೂ ಅಧಿಕ ಮಠಾಧೀಶರು, ಕಾರ್ಯಕ್ರಮದ ಉದ್ಘಾಟನೆಯಲ್ಲಿ ಮಾಜಿ ಶಾಸಕ, ಜೆಡಿಯು ಪಕ್ಷದ ರಾಜ್ಯಾಧ್ಯಕ್ಷ ಮಹಿಮಾ.ಜೆ.ಪಟೇಲ್ ಹಾಗೂ ಅಧ್ಯಕ್ಷತೆಯನ್ನು ಸ್ಥಳೀಯ ಶಾಸಕರಾದ ಎನ್.ಶ್ರೀನಿವಾಸ್ ವಹಿಸಲಿದ್ದಾರೆ ಎಂದು ತಿಳಿಸಿದರು.
ಹತ್ತಾರು ಕಾರ್ಯಕ್ರಮ: ಮಠದಿಂದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ವಿಭಾಗವಾರು ಪ್ರಶಸ್ತಿ, ಗುರುಸೇವಾ ಸಂಪನ್ನ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಜರುಗಲಿದೆ, ಏಪ್ರಿಲ್ 24 ಬೆಳಗ್ಗೆ 06 ಗಂಟೆಗೆ ಲಿಂಗ ದೀಕ್ಷಾ ಸಂಸ್ಕಾರ ಮತ್ತು ಶಿವಾನುಭವ ಕಾರ್ಯಕ್ರಮ ನಡೆಯಲಿದ್ದು, ವೀರಭದ್ರಸ್ವಾಮಿಗೆ ಅಕ್ಕಿ ಪೂಜೆ, ಏಪ್ರಿಲ್ 25 ರಂದು ಶ್ರೀ ಹೊನ್ನಾದೇವಿ ಬ್ರಹ್ಮರಥೋತ್ಸವ, ಮುತ್ತಿನ ಪಲ್ಲಕ್ಕಿ ಉತ್ಸವ, ತೆಪ್ಪೋತ್ಸವದೊಂದಿಗೆ ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ ಎಂದು ಶ್ರೀಗಳು ಸಭೆಯಲ್ಲಿ ವಿವರಿಸಿದರು.
ಈ ಪೂರ್ವಭಾವಿ ಸಭೆಯಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಜಗದೀಶ್ ಚೌಧರಿ, ಶಿವಗಂಗೆಗ್ರಾ.ಪಂ.ಅಧ್ಯಕ್ಷ ಪ್ರಭುದೇವ್, ಮಹದೇವಯ್ಯ, ಮೃತ್ಯುಂಜಯ, ಮೋಹನ್ ಕುಮಾರ್, ಮಹೇಶ್, ಕಂಬಾಳು ಉಮೇಶ್, ನಿವೃತ್ತ ಶಿಕ್ಷಕವಿರೂಪಾಕ್ಷಯ್ಯ, ನಾಗಣ್ಣ, ಬಾಣವಾಡಿ ರಮೇಶ್,ಹರೀಶ್, ಬಸವರಾಜು, ದಯಾನಂದ್, ಸಿದ್ದರಾಜು, ಗೆದ್ದಲಹಳ್ಳಿ ನಾಗರಾಜು, ಶಿಕ್ಷಕರಾದ ರವಿಕುಮಾರ್, ವೀರಶೈವ ಮಹಾಸಭಾದ ಮಹಿಳಾ ಪದಾಧಿಕಾರಿಗಳಾದ ಲತಾ, ವೇದಾವತಿ, ಇನ್ನಿತರ ಪದಾಧಿಕಾರಿಗಳು, ಮಹಿಳೆಯರು ಹಾಜರಿದ್ದರು.