ಬೆಂಗಳೂರು: ಶ್ರೀ ನಾಗ ಚಾಮುಂಡೇಶ್ವರಿ ದೇವಸ್ಥಾನ ಟ್ರಸ್ಟ್ (ರಿ) ವತಿಯಿಂದ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ 22ನೇ ವರ್ಷದ ನವಶಕ್ತಿ ಕರಗ ಮಹೋತ್ಸವವನ್ನು ಸರ್ವೆ ನಂ.61, 42, 8ನೇ ಅಡ್ಡರಸ್ತೆ, ಲಕ್ಷ್ಮೀ ಬಡಾವಣೆ, ಪುಟ್ಟೇನಹಳ್ಳಿ, ಜೆ.ಪಿ. ನಗರ 7ನೇ ಹಂತದಲ್ಲಿ ಹಮ್ಮಿಕೊಳ್ಳಲಾಗಿದೆ.
ಶ್ರೀವಿಜಯಾಭ್ಯುದಯ ಶಾಲಿವಾಹನ ಶಕ ವರ್ಷಗಳು 1945 ಕ್ಕೆ ಸರಿಯಾಗಿ ಶ್ರೀ ಶುಭಕೃತು ನಾಮ ಸಂವತ್ಸರದ ಉತ್ತರಾಯಣ ಶಿಶಿರ ಋತು ಮಾಘಮಾಸ ಕೃಷ್ಣಪಕ್ಷ ದಿನಾಂಕ : 29.02.2024 ರಿಂದ 09.03.2024 ರವರೆಗೆ ನಡೆಸುವ 22ನೇ ವರ್ಷದ ನವಶಕ್ತಿ ಕರಗ ಉತ್ಸವವನ್ನು ಭಕ್ತಾದಿಗಳ ಸಹಯೋಗದಿಂದ ನೆರವೇರಿಸಬೇಕೆಂದು ಸಂಕಲ್ಪಿಸಿದ್ದೇವೆ ಆದ್ದರಿಂದ ಭಕ್ತಾದಿಗಳು ಸ್ವಇಚ್ಛೆಯಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ.
ಶ್ರೀ ಅಮ್ಮನವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ8.03.2024 ಶುಕ್ರವಾರ ಮಹಾ ಶಿವರಾತ್ರಿ ಪ್ರಯುಕ್ತ ಬೆಳಗ್ಗೆ 7.00 ಗಂಟೆಗೆ ಶ್ರೀ ಅಮ್ಮನವರಿಗೆ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ, ಮಹಾಮಂಗಳಾರತಿ ಹಾಗೂ ತೀರ್ಥ ಪ್ರಸಾದ ವಿನಿಯೋಗ ಹಾಗೂ ಸಂಜೆ 6:30 ಕ್ಕೆ ವಾದ್ಯಗೋಷ್ಠಿ, ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಗಣ್ಯರಿಗೆ ಸನ್ಮಾನ ಸಮಾರಂಭ ಮಧ್ಯರಾತ್ರಿ 12:00 ಗಂಟೆಗೆ ಕೊಂಡಕ್ಕೆ ಅಗ್ನಿಪ್ರತಿಷ್ಠೆ ಹಾಗೂ 2.30ಕ್ಕೆ ಗಂಟೆಗೆ ಶ್ರೀ ನವಶಕ್ತಿ ಕರಗ ಪ್ರಾರಂಭ ಶ್ರೀ ನವಶಕ್ತಿ ಕರಗ ಹಾಗೂ ಪಲ್ಲಕ್ಕಿ ಉತ್ಸವವು ಪ್ರಾರಂಭ ಲಕ್ಷ್ಮೀ ಬಡಾವಣೆ, ಅರಕೆರೆ,
ಮೈಕೋ ಬಡಾವಣೆ, ಪುಟೇನಹಳ್ಳಿ ಹಾಗೂ ಪಾಳ್ಯದ ರಾಜ ಬೀದಿಗಳಲ್ಲಿ ಸಾಗುವುದು ಕರಗವು ದೇವಸ್ಥಾನದಬಳಿ ಬಂದ ನಂತರ ದಿನಾಂಕ: 9.03.2024 ಶನಿವಾರ ಬೆಳಗ್ಗೆ 5:00 ಗಂಟೆಗೆ ಕೊಂಡ ಹಾಯುವ ಕಾರ್ಯಕ್ರಮ ತದನಂತರ ಶ್ರೀಅಮ್ಮನವರಿಗೆ ಕ್ಷೀರಾಭಿಷೇಕ, ವಿಶೇಷ ಅಲಂಕಾರಮಹಾಮಂಗಳಾರತಿ,
ತೀರ್ಥಪ್ರಸಾದ ವಿನಿಯೋಗ ದಿನಾಂಕ : 9-03-2024 ಸಂಜೆ ಶ್ರೀ ಪ್ರತ್ಯಂಗೀರಾ ಹೋಮ ಏರ್ಪಡಿಸಲಾಗಿದೆ ಪ್ರತಿ ತಿಂಗಳು ಅಮಾವಾಸ್ಯೆ ಪ್ರಯುಕ್ತ ಸಂಜೆಶ್ರೀ ಪ್ರತ್ಯಂಗೀರಾ ಹೋಮ ಏರ್ಪಡಿಸಲಾಗಿದೆ ಎಂದು ಟ್ರಸ್ಟ್ನ ಅಧ್ಯಕ್ಷರಾದ ಟಿ.ನಾರಾಯಣಸ್ವಾಮಿ, ಶರ್ಮ ಪ್ರಧಾನ ಅರ್ಚಕರಾದ ರಾಜಶೇಖರ್ ಶರ್ಮ, ಅರ್ಚಕರಾದ ಮಂಜುಣಾಥ ಶರ್ಮ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ರಾಜೇಶ್ ಎಂ ಸಹಾಯಕ 8553634023ನ್ನು ಸಂಪರ್ಕಿಸಬಹುದು.