ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಆಯ್ಕೆ ಸಂಬಂಧ ಆಯ್ಕೆ ಪ್ರಕ್ರಿಯೆಯಲ್ಲಿ ನನ್ನದು ಯಾವುದೇ ಪಾತ್ರವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡರುವ ಅವರು, ಪಕ್ಷದ ಜಿಲ್ಲಾಧ್ಯಕ್ಷರ ಆಯ್ಕೆ ಸಂಬಂಧ ನಾನು ಯಾವುದೇ ಅಭಿಪ್ರಾಯ ಕೊಟ್ಟಿಲ್ಲ. ಕೇಂದ್ರದಿಂದ ಕ್ಯಾ. ಗಣೇಶ್ ಕಾರ್ಣಿಕ್ ಅವರಿಗೆ ಚುನಾವಣೆ ಜವಾಬ್ದಾರಿ ನೀಡಿದ್ದರು. 13 ಜನ ವೀಕ್ಷಕರ ನೇಮಕ ಆಗಿತ್ತು. ಮೂರು ಜಿಲ್ಲೆಗಳ ಉಸ್ತುವಾರಿ ನೀಡಲಾಗಿತ್ತು. ರಿಟರ್ನಿಂಗ್ ಆಫಿಸರ್ಗಳನ್ನೂ ನೇಮಕ ಆಗಿತ್ತು.
ಜಿಲ್ಲೆ ತಂಡದಿಂದ ಮೂರು ಹೆಸರನ್ನ ಕಳಿಸಿದ್ದು ಹೈಕಮಾಂಡ್ ಅಲ್ಲಿಂದ ಅಂತಿಮ ಮಾಡಿ ಕಳಿಸಿದೆ. ಚುನಾವಣಾ ಪ್ರಕ್ರಿಯೆಯಲ್ಲಿ ವಿಜಯೇಂದ್ರ ಪಾತ್ರ ಶೂನ್ಯ ಎಂದು ಹೇಳಿದ್ದಾರೆರಾಜ್ಯದಲ್ಲಿ ನನ್ನ ಅಭಿಪ್ರಾಯ ಏನೂ ಇಲ್ಲ ಎಂದಿರುವ ಸಂಸದ ಡಾ. ಕೆ. ಸುಧಾಕರ್ ಅವರ ಆರೋಪಕ್ಕೆ ಪ್ರತಿಕ್ರಿಯಿಸಿ, ನಾನು ಸುಧಾಕರ್ ಅವರನ್ನೂ ದೂಷಿಸಲ್ಲ. ಚುನಾವಣಾ ಪ್ರಕ್ರಿಯೆಯಲ್ಲಿ ಗೊಂದಲ ಇದೆ.
ಯಾರಿಗೂ ಚುನಾವಣೆ ಬಗ್ಗೆ ಸ್ಪಷ್ಟತೆ ಇಲ್ಲ. ಡಾ.ಸುಧಾಕರ್ ಅವರ ಆಕ್ರೋಶಭರಿತ ಮಾತನ್ನ ನೋಡಿದ್ದೇನೆ. ನಮ್ಮನ್ನ ಸಮಾಧಿ ಮಾಡಲು ಹೊರಟಿದ್ದಾರೆ ಅಂತ ಹೇಳಿದ್ದಾರೆ. ಈ ರೀತಿ ಆಕ್ರೋಶ ಮಾತು ಸರಿಯಲ್ಲ. ಚಿಕ್ಕಬಳ್ಳಾಪುರದಲ್ಲಿ ಈಗ ಆಯ್ಕೆಯಾಗಿರೋ ವ್ಯಕ್ತಿ ಕೂಡ ಬಿಜೆಪಿಯವನೇ. ಅವರ ಸಂಬಂಧಿಕ ಕೂಡ ಹೌದು. ನಾನು ತಿದ್ದುಕೊಳ್ಳಬೇಕು ಎಂದು ಅವರು ಮತ್ತು ಇತರರು ಹೇಳಿದ್ದಾರೆ.
ನಾನು ಖಂಡಿತ ತಿದ್ದುಕೊಳ್ತೇನೆ.ಸುಧಾಕರ್ ಅವರು ತಾಳ್ಮೆ ಮುಗೀತು ಇನ್ನು ಯುದ್ಧ ಎಂದಿದ್ದಾರೆ, ಆ ರೀತಿ ಮಾತಾಡಬಾರದು ನಾನು ಸುಧಾಕರ್ ಅವರ ಜೊತೆ ಮತ್ತು ಇತರರ ಜೊತೆ ಮಾತಾಡ್ತೀನಿ. ನಾನು ಪಕ್ಷ ಸಂಘಟನೆ ಮಾತ್ರ ಮಾಡ್ತಿದ್ದೇನೆ. ನನ್ನ ಮೇಲೆ ತಪ್ಪು ಹೊರಿಸೋದು ಬೇಡ ಸುಧಾಕರ್ ಅವರು ಅನ್ಯತಾ ಭಾವಿಸಬಾರದು ಈ ರೀತಿ ಮಾತಾಡೋದು ಸರಿಯಲ್ಲ ಎಂದಿದ್ದಾರೆ.