ಬೆಂಗಳೂರು: ಬಹು ನಿರೀಕ್ಷಿತ 14 ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ 2013 ಮಾರ್ಚ್ 23 ರಂದು ಉದ್ಘಾಟನೆಯಾಗಲಿದೆ. ಬೆಂಗಳೂರಿನ ಒರಾಯನ್‍ಮಾಲ್‍ನಲ್ಲಿ 11 ಸ್ಟೀನ್‍ಗಳಲ್ಲಿ ಮಾರ್ಚ್24 ರಿಂದ 30 ರವರೆಗೆ ಸಾರ್ವಜನಿಕ ಪ್ರದರ್ಶನ ನಡೆಯಲಿದೆ. ಒರಾಯನ್ ಮಾಲ್ ಅಲ್ಲದೆ, ಕನ್ನಡ ಕಲಾವಿದರ ಸಂಘ ಮತ್ತು ಸುಚಿತ್ರಾ ಫಿಲಂ ಸೊಸೈಟಿಯಲ್ಲೂ ಪ್ರದರ್ಶನ ನಡೆಯಲಿದೆ.
ಮಾರ್ಚ್ 23 ರಂದು ಸಂಜೆ ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಚಲನ ಚಿತ್ರೋತ್ಸವವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉದ್ಘಾಟನೆ ಮಾಡುತ್ತಾರೆ. ಚಿತ್ರರಂಗದ ಗಣ್ಯರು ಉಪಸ್ಥಿತರಿರುತ್ತಾರೆ. ಮಾರ್ಚ್ 30 ರಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಮುಕ್ತಾಯ ಸಮಾರಂಭ ನಡೆಯಲಿದೆ. ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲಟ್ ಅವರು ಅಧ್ಯಕ್ಷತೆ ವಹಿಸುತ್ತಾರೆ. ಅಂದು ವಿಷಿಯನ್, ಭಾರತೀಯ ಹಾಗೂ ಕನ್ನಡ ಚಲನಚಿತ್ರಗಳ ಸ್ಪರ್ಧಾ ವಿಭಾಗದಲ್ಲಿ ವಿಜೇತರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.
14 ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ 50 ದೇಶಗಳ 200 ಅತ್ಯುತ್ತಮ ಚಲನಚಿತ್ರಗಳು ಪ್ರದರ್ಶನಗಳಲ್ಲಿವೆ.ಆಮೆರಿಕ, ಬ್ರಿಟನ್, ಜರ್ಮನಿ, ಫ್ರಾನ್ಸ್, ಕೊರಿಯಾ, ಉಕ್ರೇನ್, ಹಾಂಕಾಂಗ್, ಬೆಲ್ಲಿಯಂ, ನೆದರ್‍ಲೆಂಡ್, ಫಿನ್‍ಲೆಂಡ್, ಕ್ರೋಷಿಯಾ, ಇರಾನ್, ಚೀನಾ, ಸ್ವಿರ್ಜಲೆಂಡ್, ಪ್ಯಾಲೆಸ್ಟನ್, ಅರ್ಜಂಟೈನಾ, ಸಿಂಗಾಪೂರ್, ಡೆನ್‍ಮಾರ್ಕ್, ಗ್ರೀಸ್, ರಷ್ಯಾ, ಫಿಲಿಫೈನ್ಸ್, ಲೆಬನಾನ್, ಪೋಲೆಂಡ್, ರೊಮಾನಿಯಾ, ಕಾಂಬೋಡಿಯಾ, ಕೆನಡಾ, ಜಪಾನ್, ಸೆನಗಲ್, ಸ್ಪೇನ್, ಸೈಪ್ರಸ್, ಇಂಡೋನೇಶಿಯಾ, ಇಟಲಿ ಮೊದಲಾದ ದೇಶಗಳ ಅತ್ಯುತ್ತಮ ಚಲನಚಿತ್ರಗಳು ‘ಬೆಂಗಳೂರಿನಲ್ಲಿ ಜಗತ್ತು ಶೀರ್ಷಿಕೆಯಡಿ ಈ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿದೆ.
ಈ ಚಿತ್ರೋತ್ಸವದಲ್ಲಿ ಏಷಿಯನ್,ಇಂಡಿಯನ್ ಹಾಗೂ ಕನ್ನಡ ಚಲನಚಿತ್ರಗಳ ಸ್ಪರ್ಧಾ ವಿಭಾಗವಿರುತ್ತದೆ. ಈ ಮೂರು ವಿಭಾಗಗಳಲ್ಲಿ ತಲಾ ಮೂರು ಅತ್ಯುತ್ತಮ ಚಲನಚಿತ್ರಗಳಿಗೆ ಪ್ರಶಸ್ತಿ ನೀಡಲಾಗುತ್ತದೆ. ಚಲನಚಿತ್ರೋತ್ಸವ ನಡೆಯುವ ದಿನಗಳಲ್ಲಿ ಪ್ರತೀದಿನ ಚಲನಚಿತ್ರ ಮಾಧ್ಯಮ ಮತ್ತು ಉದ್ಯಮಕ್ಕೆ ಸಂಬಂಧಪಟ್ಟಂತೆ ತಜ್ಞರಿಂದ ಸಂವಾದ, ಉಪನ್ಯಾಸ, ಮಾಸ್ಟರ್ ಕ್ಲಾಸ್ ಮೊದಲಾದ ಕಾರ್ಯಕ್ರಮಗಳಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಚಲನಚಿತ್ರೋತ್ಸವ ಜಾಲತಾಣದಲ್ಲಿ ಪ್ರತಿನಿಧಿಗಳ ನೊಂದಣಿ ಕಾರ್ಯ ಆರಂಭವಾಗಿದೆ. ಆಸಕ್ತರು ಚಿತ್ರೋತ್ಸವ ಜಾಲತಾಣಕ್ಕೆ ಹೋಗಿ biffes.in ನೀತಿ ನಿಯಮಗಳನ್ನು ಅನುಸರಿಸಿ ಪ್ರತಿನಿಧಿಶುಲ್ಕ ಪಾವತಿಸಿ ನೊಂದಾಯಿಸಿಕೊಳ್ಳಬಹುದು. 18 ವರ್ಷ ಮೇಲ್ಪಟ್ಟವರು ಪ್ರತಿನಿಧಿಗಳಾಗಲು ಅರ್ಹತೆ ಪಡೆದಿರುತ್ತಾರೆ.
ಚಿತ್ರೋತ್ಸವ ಪ್ರತಿನಿಧಿಶುಲ್ಕ ಸಾರ್ವಜನಿಕರಿಗೆ 800 ರೂ. ಚಿತ್ರೋದ್ಯಮದ ಸದಸ್ಯರು, ವಿದ್ಯಾರ್ಥಿಗಳು, ಚಿತ್ರ ಸಮಾಜಗಳ ಸದಸ್ಯರಿಗೆ 400ರೂ. ಆನ್‍ಲೈನ್‍ನಲ್ಲಿ ರಿಜಿಸ್ಟ್ರೇಷನ್ ಮಾಡಿಕೊಂಡ ಪ್ರತಿನಿಧಿಗಳಿಗೆ ಮರು ದಿನ ಕರ್ನಾಟಕ ಚಲನಚಿತ್ರ ಅಕಾಡೆಮಿ ಕರ್ನಾಟಕ ಚಲಚಿತ್ರ ವಾಣಿಜ್ಯ ಮಂಡಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಬನಶಂಕರಿ ಸುಚಿತ್ರ ಸಿನಿಮಾ ಅಕಾಡೆಮಿಯಲ್ಲಿ ಪ್ರತಿನಿಧಿ ಕಾರ್ಡ್ ದೊರೆಯಲಿದ್ದು, ಆಯ್ಕೆ ಮಾಡಿಕೊಂಡ ಸ್ಥಳದಲ್ಲಿ ಕಾರ್ಡ್ ದೊರೆಯಲಿದೆ.
Leave a Review