ಹೈದರಾಬಾದ್: ಸರ್ಕಾರಿ ಬಸ್ ಮೇಲೆ ಜಲ್ಲಿತುಂಬಿದ್ದಟಿಪ್ಪರ್ ಪಲ್ಟಿಯಾದ ಪರಿಣಾಮ ಕನಿಷ್ಟ ೨೦ ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದು, ಹಲವರುಗಂಭೀರಗಾಯಗೊAಡಿರುವಘಟನೆ ಹೈದರಾಬಾದ್-ಬಿಜಾಪುರರಾಷ್ಟಿçÃಯ ಹೆದ್ದಾರಿಯಲ್ಲಿ ನಡೆದಿದೆ. ರಂಗಾರೆಡ್ಡಿಜಿಲ್ಲೆಯಚೆವೆಲ್ಲಾದ ಮಿರ್ಜಾಗುಡಗ್ರಾಮದ ಬಳಿ ದುರಂತ ಸಂಭವಿಸಿದೆ. ಬಸ್ನಲ್ಲಿ ಸುಮಾರು ೪೦ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು.ಟಿಪ್ಪರ್ ಪಲ್ಟಿಯಾದ ಪರಿಣಾಮಜಲ್ಲಿಕಲ್ಲಿನ ಕೆಳಗೆ ಪ್ರಯಾಣಿಕರು ಸಿಲುಕಿಕೊಂಡಿದ್ದರು. ಘಟನೆಯಲ್ಲಿ ೨೦ ಮಂದಿ ಮೃತಪಟ್ಟಿದ್ದಾರೆ.
ಗಾಯಾಳುಗಳನ್ನು ತಕ್ಷಣಚಿಕಿತ್ಸೆಗಾಗಿಚೆವೆಲ್ಲಾ ಸರ್ಕಾರಿಆಸ್ಪತ್ರೆಗೆದಾಖಲಿಸಲಾಗಿದೆ.ಅಪಘಾತ ಸಂಬAಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಟಿಪ್ಪರ್ ಚಾಲಕನ ಅತಿವೇಗದ ಚಾಲನೆಯಿಂದಘಟನೆ ಸಂಭವಿಸಿದೆ. ಅಪಘಾತದ ಬಗ್ಗೆ ತೆಲಂಗಾಣ ಮುಖ್ಯಮಂತ್ರಿ ಎ ರೇವಂತ್ರೆಡ್ಡಿ ಬೇಸರ ವ್ಯಕ್ತಪಡಿಸಿದ್ದು, ಗಾಯಾಳುಗಳು ಮತ್ತು ಮೃತ ಪ್ರಯಾಣಿಕರ ಕುಟುಂಬಗಳಿಗೆ ಸಾಧ್ಯವಿರುವಎಲ್ಲ ಸಹಾಯವನ್ನು ನೀಡಬೇಕೆಂದು ಸೂಚಿಸಿದ್ದಾರೆ. ಅಪಘಾತದ ವೇಳೆ ಬಸ್ನಲ್ಲಿ ೪೦ ಮಂದಿ ಪ್ರಯಾಣಿಸುತ್ತಿದ್ದರು. ಸ್ಥಳಕ್ಕಾಗಮಿಸಿದ ಪೊಲೀಸರು ಜೆಸಿಬಿ ಸಹಾಯದಿಂದರಕ್ಷಣಾಕಾರ್ಯ ಆರಂಭಿಸಿದ್ದಾರೆ.ಈ ಅಪಘಾತದಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಮತ್ತು ನೌಕರರುಎಂದು ಪೊಲೀಸರು ಹೇಳುತ್ತಾರೆ.ಪ್ರತಿದಿನ ಬೆಳಿಗ್ಗೆ ಹೈದರಾಬಾದ್ಗೆ ಹೋಗುತ್ತಾರೆ.ಭಾನುವಾರರಜೆಇದ್ದಕಾರಣ ಕೆಲವರುತಮ್ಮ ಮನೆಗಳಿಗೆ ತೆರಳಿ ವಾಪಸ್ ಪ್ರಯಾಣ ಬೆಳೆಸಿದ್ದರು.ಈ ಅವಘಡದಿಂದಾಗಿ ಹೈದರಾಬಾದ್-ಬಿಜಾಪುರರಸ್ತೆಯಲ್ಲಿ ಭಾರಿ ಸಂಚಾರಅಸ್ತವ್ಯಸ್ತವಾಗಿದೆ.



