ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆ 25 ಜನ ಹಿರಿಯ ಐಪಿಎಸ್ ಅಧಿಕಾರಿಗಳನ್ನು ನೆನ್ನೆ ರಾತ್ರಿ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.ಕೇಂದ್ರ ವಲಯದ ಐಜಿಪಿ ರವಿಕಾಂತ್ ಗೌಡರವರ ಜಾಗಕ್ಕೆ ಗುಪ್ತಚಾರ ಇಲಾಖೆಯ ಐಜಿಪಿ ಲಾಬುರಾಮ್ರವರನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ.
ರವಿಕಾಂತೇಗೌಡರಿಗೆ ಪೊಲೀಸ್ ಮಹಾ ನಿರ್ದೇಶಕರ ಕಚೇರಿಯ ಹೆಡ್ ಕ್ವಾರ್ಟರ್ಸ್ ಒನ್ ವಿಭಾಗಕೆ ವರ್ಗಾಯಿಸಲಾಗಿದೆ.ಉಳಿದಂತೆ ದಾವಣಗೆರೆ ಐಜಿಪಿ ತ್ಯಾಗರಾಜನ್ ರವರನ್ನು ಇಂಟರ್ನಲ್ ಸೆಕ್ಯೂರಿಟಿ ವಿಭಾಗಕ್ಕೆ, ಶಶಿಕುಮಾರ್ ಕ್ರೀಡಾ ಇಲಾಖೆ ಕಮಿಷನರ್ ಅವರನ್ನು ಹುಬ್ಬಳ್ಳಿ ಧಾರವಾಡ ಕಮಿಷನರ್ ಆಗಿ, ರಮೇಶ್ ಮೈಸೂರು ನಗರ ಕಮಿಷನರ್ ರವರನ್ನು ದಾವಣಗೆರೆ ಡಿ ಐ ಜಿ ಪಿ ಯಾಗಿ, ಬೆಂಗಳೂರು ನಗರ ಆಗ್ನೇಯ ವಿಭಾಗದ ಡಿಸಿಪಿ ಬಾಬಾ ರವರನ್ನು ಬೆಂಗಳೂರು ಗ್ರಾಮಾಂತರ ಎಸ್ ಪಿ ಆಗಿ,
ಬೆಂಗಳೂರು ಗ್ರಾಮಾಂತರ ಎಸ್ ಪಿ ಮಲ್ಲಿಕಾರ್ಜುನ ಬಾಲದಂಡಿರವರನ್ನು ಮಂಡ್ಯ ಎಸ್ಪಿ ಆಗಿ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಸಿ ಐ ಡಿ ಎಸ್ ಪಿ ಸರಾ ಫಾತಿಮಾರನು ಅಗ್ನೇಯ ವಿಭಾಗ ಡಿ ಸಿ ಪಿ ಯಾಗಿ, ಕೋಲಾರ ಎಸ್ಪಿ ನಾರಾಯಣ್ರವರನ್ನು ಉತ್ತರಕನ್ನಡ ಎಸ್ಪಿ ಆಗಿ, ಬಿಎಂಟಿಎಫ್ ಎಸ್ ಪಿ ಶೋಭಾರಾಣಿ ರವರನ್ನು ಬಳ್ಳಾರಿ ಜಿಲ್ಲಾ ಎಸ್ ಪಿ ಆಗಿ, ವಿಷ್ಣುವರ್ಧನ ಉತ್ತರ ಕನ್ನಡದಿಂದ ಮೈಸೂರು ಎಸ್ಪಿ ಆಗಿ, ಸುಮನ್ ಡಿ ಪೆನ್ನಿಕರವರನ್ನು ಬಿಎಂಟಿಎಫ್ ಎಸ್ ಪಿ ಆಗಿ, ರಿಶ್ಯಂತ್ ವಯರ್ಲೆಸ್ ಎಸ್ಪಿಆಗಿ, ಚನ್ನಬಸವಣ್ಣ ಲಂಗೋಟಿ ರವರನ್ನು ಡಿಸಿಪಿಯಾಗಿ, ಅರುಣ್ ಗಿರಿ ರವರನ್ನು ಸಿಐಡಿ ಎಸ್ಐಟಿ ಎಸ್ಪಿ ಯಾಗಿ, ನಾಗೇಶ್ ರವರನ್ನು ಸಿಎಆರ್ ಹೆಡ್ ಕ್ವಾರ್ಟರ್ಸ್ ಡಿಸಿಪಿಯಾಗಿ, ಪದ್ಮಿನಿ ರವರನ್ನು ಬೆಂಗಳೂರು ಡಿಸಿಪಿ ಅಡ್ಮಿನ್ ಆಗಿ, ಯತೀಶ್ ರವರನ್ನು ಡಿ ಕೆ ಎಸ್ ಪಿ ಯಾಗಿ, ಕವಿತಾ ರವರನ್ನು ಚಾಮರಾಜನಗರ ಎಸ್ಪಿ ಆಗಿ, ನಿಖಿಲ್ ರವರನ್ನು ಕೋಲಾರ ಎಸ್ಪಿ ಆಗಿ, ಕೌಶಿಕ್ ರವರನ್ನು ಚಿಕ್ಕಬಳ್ಳಾಪುರ ಎ ಎಸ್ ಪಿ ಮತ್ತು ಮಹಾಲಿಂಗ ನಡಗಾವಿ ರವರನ್ನು ಹುಬ್ಬಳ್ಳಿ ಧಾರವಾಡ ಡಿಸಿಪಿಯಾಗಿ ವರ್ಗಾವಣೆ ಮಾಡಲಾಗಿದೆ.