ಬೀಜಿಂಗ್: ಕೋವಿಡ್ ವೈರಾಣು ಜಗತ್ತನ್ನು ಕಾಡಿದ 5 ವರ್ಷಗಳ ನಂತರ ಈಗ ಚೀನಾದಲ್ಲಿ ಮತ್ತೊಂದು ನಿಗೂಢ ವೈರಾಣು ಎದುರಾಗಿದ್ದು ಆತಂಕ ಹೆಚ್ಚಿಸಿದೆ.
ಹ್ಯೂಮನ್ ಮೆಟಾಪ್ನ್ಯೂಮೊವೈರಸ್ (human metapneumovirus or HMPV) ಈ ಬಾರಿ ಚೀನಾದಲ್ಲಿ ಕಾಣಿಸಿಕೊಂಡಿರುವ ಹೊಸ ವೈರಾಣು ಆಗಿದ್ದು, ನೆರೆಯ ರಾಷ್ಟ್ರ ಮತ್ತೊಮ್ಮೆ ಹೊಸ ವೈರಾಣುವಿನಿಂದ ಪಾರಾಗಲು ಸ್ಕ್ರೀನಿಂಗ್, ಪತ್ತೆ ಮತ್ತು ಪ್ರತ್ಯೇಕತೆಯ ಪ್ರೋಟೋಕಾಲ್ಗಳ ಮೊರೆ ಹೋಗಿದೆ.