ಯಲಹಂಕ: ದಿನಾಂಕ 21-1-2024 ಭಾನುವಾರ ದಂದು ದಕ್ಷಿಣ ಕನ್ನಡಿಗರ ಸಾಂಸ್ಕೃತಿಕ ಸಂಘದ 27ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ, ಯಲಹಂಕ ಉಪನಗರ 5ನೇ ಹಂತದ, ಶ್ರೀ ಶ್ರೀ ಶ್ರೀ ಡಾ.ಶಿವಕುಮಾರ ಸ್ವಾಮೀಜಿ ಸಭಾಂಗಣ (ನಿಸರ್ಗ ಕ್ರೀಡಾಂಗಣ) ದಲ್ಲಿ ಜರುಗಿತು. ಉದ್ಯಮಿಗಳಾದ ಗೋವಿಂದೂರು ವೆಂಕಪ್ಪ ಹೆಗಡೆ ದೀಪ ಬೆಳಗುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಸಮಾರಂಭದಲ್ಲಿ ಉದ್ಯಮಿಗಳಾದ ಗೋವಿಂದೂರು ವೆಂಕಪ್ಪ ಹೆಗಡೆ ಉದ್ಘಾಟಕ ರಾಗಿ ಆಗಮಿಸಿ, ನಗರದ ನಿಟ್ಟೆ ಮೀನಾಕ್ಷಿ ಇಂಜಿ ನಿಯರಿಂಗ್ ಕಾಲೇಜಿನ ಪ್ರಧ್ಯಾಪಕರು, ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕಾರ್ಯಕಾರಿ ಪರಿಷತ್ತಿನ ಸದಸ್ಯರಾದ ಡಾ.ಕರುಣಾಕರ ರೈ.ಬಿ ಮುಖ್ಯ ಅತಿಥಿಗಳಾಗಿ, ದ.ಕ.ಸಾ.ಸಂಘದ ಅಧ್ಯಕ್ಷರಾದ ಕೃಷ್ಣಕುಮಾರ್ ಹೆಗಡೆ ಬಡಗಬೆಟ್ಟು ಅಧ್ಯಕ್ಷತೆ ವಹಿಸಿದ್ದು, ಇಸ್ರೋ ವಿಜ್ಞಾನಿ,ಯು. ವೇಣುಗೋಪಾಲ್, ನ್ಯೂಸ್ 18 ಕನ್ನಡದ ನಿರೂಪಕಿ ಕುಮಾರಿ ನವಿತಾ ಜೈನ್ ವಿಶೇಷ ಸನ್ಮಾನಿತರಾಗಿ ಆಗಮಿಸಿದ್ದರು.
ಉಪಾಧ್ಯಕ್ಷರಾದ ಉದಯ ಹೆಗಡೆ,ಪ್ರಧಾನ ಕಾರ್ಯದರ್ಶಿ ರಾಜೇಶ್ ಪುತ್ರನ್, ಮುಂ ತಾದ ಪದಾಧಿಕಾರಿಗಳು ವೇದಿಕೆ ಅಲಂಕರಿದ್ದರು.
ಸಂಘದ ಪದಾಧಿಕಾರಿಗಳು ವೇದಿಕೆ ಗಣ್ಯರನ್ನ ಹಾಗೂ ಇಸ್ರೋ ವಿಜ್ಞಾನಿ ವೇಣುಗೋಪಾಲ್, ಟಿವಿ ನಿರೂಪಕಿ ಕುಮಾರಿ ನವಿತಾ ಜೈನ್ ರನ್ನು ಸನ್ಮಾನಿಸಿ ಗೌರವಿಸಿದರು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿ ಪ್ರೇಕ್ಷಕರನ್ನು ರಂಜಿಸಲಾಯಿತು. ಹೆಚ್ಚು ಅಂಕಗಳನ್ನು ಪಡೆದ ಪ್ರತಿಭಾನ್ವಿತ ಮಕ್ಕಳನ್ನು ಗುರುತಿಸಿ ಅಭಿನಂದಿಸಿ ಪ್ರೋತ್ಸಾಹಧನ ನೀಡಲಾಯಿತು.
ಈ ಸಂದರ್ಭದಲ್ಲಿ, ಸಂಘದ ಪದಾದಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಮತ್ತು ಸಾಮಾನ್ಯ ಸದಸ್ಯರು ಹಾಗೂ ಅವರ ಮಕ್ಕಳುಗಳು, ಪ್ರತಿಭಾನ್ವಿತ ವಿಧ್ಯಾರ್ಥಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಸಭಿಕರನ್ನು ರಂಜಿಸಿದ ಪ್ರತಿಭೆಗಳು ಪಾಲ್ಗೊಂಡಿದ್ದರು.