ಗೌರಿಬಿದನೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಮಿತ್ರ ಪಕ್ಷ ಜೆಡಿಎಸ್ ಅಭ್ಯಥಿಗಳು ಆಯ್ಕೆ ಆಗುವುದು ಖಚಿತ ಎಂದು ಯಲಹಂಕ ಬಿಜೆಪಿ ಶಾಸಕ ವಿಶ್ವನಾಥ್ ತಿಳಿಸಿದರು.
ಭಾನುವಾರ ಬಿಜೆಪಿ ಪಕ್ಷದಿಂದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ವಿಜಯ ಸಂಕಲ್ಪ ಯಾತ್ರೆಯ ಕಾರ್ ರ್ಯಾಲಿಯಲ್ಲಿ ಭಾಗವಹಿಸಿ ನಗರದ ಶನಿಮಹಾತ್ಮನ ದೇವಾಲಯದಲ್ಲಿ ಸುದ್ದಿ ಗಾರರೊಂದಿಗೆ ಮಾತನಾಡಿದರು.ಮುಂಜಾನೆ 9 ಗಂಟೆಗೆ ಯಲಹಂಕದಿಂದ ಸುಮಾರು 500 ಕಾರ್ ಗಳಲ್ಲಿ ಕಾರ್ಯಕರ್ತರು ಭಾಗವಹಿಸಿದ್ದಾರೆ.
ಈ ಬಾರಿ ಟಿಕೆಟ್ ಹೈಕಮಾಂಡು ಯಾರಿಗೆ ನೀಡಿದರೂ ಬಿಜೆಪಿ ಕಾರ್ಯಕರ್ತರುಗಳು ಅವರ ಗೆಲುವಿಗೆ ಶ್ರಮಿಸುವುದಾಗಿ ತಿಳಿಸಿದರು.ಮುಂಬರುವ ದಿನಗಳಲ್ಲಿ ಮನೆಮನೆಗೂ ಬೇಠೀ ನೀಡಿ ಕೇಂದ್ರ ಸರ್ಕಾರಗಳ ಯೋಜೆನೆಗಳನ್ನು ಜನಗಳಿಗೆ ತಿಳಿಸಿ,ರಾಜ್ಯ ಸರ್ಕಾರದ ವೈಲ್ಯಗಳನ್ನು ತಿಳಿಸುವ ಕಾರ್ಯಕ್ರಮ ಹಮ್ಮಿಕೊಳ್ಳ ಲಾಗುವುದು.
ಈ ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್ ಗಾಗಿ ಅನೇಕ ಮಂದಿ ಅಕಾಂಕ್ಷಿಗಳಿದ್ದಾರೆ,ಹೈಕಮಾಂಡು ಯಾರಿಗೆ ಟಿಕೆಟ್ ನೀಡಿದರೂ ನಾವೆಲ್ಲರೂ ಕೂಡಿ ಗೆಲುವುಗಾಗಿ ಶ್ರಮಿಸುತ್ತೇವೆ.ಈ ಬಾರಿ ಜೆಡಿಎಸ್ ನೊಂದಿಗೆ ಮೈತ್ರಿ ಮಾಡಿಕೊಂಡಿದ್ದು ಕೆಲವು ಕ್ಷೇತ್ರಗಳಲ್ಲಿ ಜೆಡಿಎಸ್ ಪಕ್ಷದಲ್ಲಿ ಸಹಾ ಪ್ರಭಾವಿ ನಾಯಕರಿದ್ದು ಎರಡು ಪಕ್ಷಗಳಿಗೆ ಗೆಲುವು ನಿಶ್ಚಿತ ಎಂದರು.
ಇವರ ಪುತ್ರ ಅಲೋಕ್ ವಿಶ್ವನಾಥ್ ಮಾತನಾಡಿ ನಾನು ಸಹಾ ಟಿಕೆಟ್ ಆಕಾಂಕ್ಷಿ, ಆದರೇ ಟಿಕೆಟ್ ಯಾರಿಗೆ ನೀಡಿದರೂ ನಾವೆಲ್ಲರೂ ಒಟ್ಟಿಗೆ ಬಿಜೆಪಿ ಅಭ್ಯರ್ಥಿಯ ಗೆಲುವಿಗಾಗಿ ಶ್ರಮಿಸುತ್ತೇವೆ ಎಂದರು.ಕಾರ್ಯಕರ್ತರಿಗೆ ಕೈಗೆ ಸಿಗುವ ಅಭ್ಯರ್ಥಿ ಯಾಗಬೇಕು ಎಂದರು. ಮುಂದಿನ ದಿನಗಳಲ್ಲಿ ಉತ್ತಮ ಆಡಳಿತ ನಡೆಸಲು ಬಿಜೆಪಿ ಗೆಲ್ಲಬೇಕಾಗಿದೆ ಎಂದರು.
ಇಂದಿನ ಕಾರ್ಯಕ್ರಮದಲ್ಲಿ ಮತ್ತೊಮ್ಮೆ ಮೋದಿ ಎಂದು ಕಾರ್ಯಕರ್ತರು ಘೋಷಣೆಗಳನ್ನು ಕೂಗಿದರು. ಇಂದಿನ ಸಂಕಲ್ಪ ಕಾರ್ಯಕ್ರಮದಲ್ಲಿ ಡಾ ಶಶಿಧರ್, ನಾರಾಯಣಸ್ವಾಮಿ ರಮೇಶ್ ರಾವ್ ಶೇಲ್ಕೆ, ಭರತ್ ರೆಡ್ಡಿ, ಜಯಣ್ಣ, ಮೃತ್ಯುಂಜಯ, ಮಾರ್ಕೆಟ್ ಮೋಹನ್, ಭವ್ಯ ರಂಗನಾಥ್, ಹರೀಶ್, ಮುನಿಲಕ್ಷಮ್ಮ, ಮುಂತಾದವರು ಭಾಗವಹಿಸಿದ್ದರು.