ತಿ.ನರಸೀಪುರ : ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಂಸದರ ಪ್ರದೇಶಾಭಿವೃದ್ಧಿ ಅನುದಾನದಿಂದ ನೆರವು ಪಡೆದು ಮುಸುವಿನಕೊಪ್ಪಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಮುಂದಿನ ರ್ಷದೊಳಗೆ ನೂತನ ಕಟ್ಟಡವನ್ನು ನರ್ಮಾಣ ಮಾಡಲಾಗುವುದು ಎಂದು ಅಧ್ಯಕ್ಷ ಎಂ.ಶಿವರಾಮು ಇಂಗಿತ ವ್ಯಕ್ತಪಡಿಸಿದರು .
ತಾಲೂಕಿನ ಮುಸುವಿನಕೊಪ್ಪಲು ಗ್ರಾಮದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ೨೦೨೪ – ೨೦೨೫ ನೇ ಸಾಲಿನ ರ್ವ ಸದಸ್ಯರ ವರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು ಸಹಕಾರ ಸಂಘಕ್ಕೆ ಗ್ರಾಮದಲ್ಲಿ ಈಗಾಗಲೇ ನಿವೇಶನವನ್ನು ಕಾಯ್ದಿರಿಸಿ, ಮುತ್ತಲವಾಡಿ ಗ್ರಾ.ಪಂ ಯಲ್ಲಿ ಇ. ಸ್ವತ್ತು ಮಾಡಿಸಲಾಗಿಲಾಗಿದೆ. ಕಟ್ಟಡ ನರ್ಮಾಣಕ್ಕೆ ಯೋಜನೆ ರೂಪಿಸಿ, ಅನುದಾನ ನೀಡುವಂತೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹಾಗೂ ಸಂಸದ ಸುನೀಲ್ ಬೋಸ್ ಮನವಿ ಸಲ್ಲಿಸಿದ್ದೇವೆ ಎಂದರು.
ಕಳೆದ ಏಳು ರ್ಷಗಳ ಹಿಂದೆ ಆರಂಭಿಸಿದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಂತ ಹಂತವಾಗಿ ಅಭಿವೃದ್ಧಿ ಹೊಂದುತ್ತಿದ್ದು, ಮತ್ತಷ್ಟು ರ್ಥಿಕ ಸಬಲತೆಯನ್ನು ಸಾಧಿಸಬೇಕಿದೆ. ಸಂಘದಿಂದ ಇದುವರೆವಿಗೂ ಈ ಭಾಗದ ರೈತರಿಗೆ ೩.೩೪ ಕೋಟಿ ಸಾಲವನ್ನು ವಿತರಿಸಿದ್ದೇವೆ. ಸಹಕಾರಿ ಸಂಘದ ನರ್ವಹಣೆಗೆ ಈ ಸಾಲದ ಪ್ರಮಾಣ ಸಾಲದು. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಹೆಚ್ಚಿನ ರೈತರಿಗೆ ಸದಸ್ಯತ್ವ ನೀಡುವ ಮೂಲಕ ನರ್ದೇಶಕರೆಲ್ಲರೂ ಸೇರಿ ಸಂಘವನ್ನು ಬಲಿಷ್ಠವಾಗಿ ಕಟ್ಟುತ್ತೇವೆ ಎಂದು ಎಂ.ಶಿವರಾಮು ತಿಳಿಸಿದರು.
ವರ್ಷಿಕ ವರದಿಯನ್ನು ಮಂಡಿಸಿದ ಮುಖ್ಯ ಕರ್ಯನರ್ವಾಹಕ ಎನ್.ರಾಜು ೨೦೨೪ – ೨೦೨೫ ನೇ ಸಾಲಿನ ಜಮರ್ಚು ಮಂಡಿಸಿದರು.
ಸಂಘದ ನರ್ದೇಶಕ ಕೆಬ್ಬೆಹುಂಡಿ ಶಿವಕುಮಾರ್ ಮಾತನಾಡಿ ಸಂಘದ ಶ್ರೇಯಾಭಿವೃದ್ಧಿಗೆ ಅಧ್ಯಕ್ಷರ ಜೊತೆ ಸದಾ ಇರುತ್ತೇವೆ. ಸಂಘಕ್ಕೆ ನೂತನ ಕಟ್ಟಡ ಅವಶ್ಯಕತೆಯಿದೆ ನೂತನ ಕಟ್ಟಡವಾದರೆ ಸಂಘಕ್ಕೆ ರ್ಕಾರದ ವಿವಿಧ ಯೋಜನೆಗಳು ಬರೋದರಿಂದ ಸಂಘವು ಇನ್ನೂ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿ ಹೊಂದುತ್ತದೆ ಅಧ್ಯಕ್ಷರಾದ ಶಿವರಾಂ ರವರ ಜೊತೆ ಕೈಜೋಡಿಸಿ ಸಂಘದ ಅಭಿವೃದ್ಧಿಗೆ ನಾವೆಲ್ಲರೂ ಶ್ರಮಿಸೋಣ ಎಂದರು.
ಜಿಲ್ಲಾ ಬ್ಯಾಂಕ್ ಪ್ರತಿನಿಧಿ ಎನ್.ಎಸ್.ಶೇಖರ್ ಮಾತನಾಡಿ ಸಂಘದ ಸಹಕಾರಿ ರೈತ ಬಂಧುಗಳು ದಿನದಿಂದ ಪಡೆದ ಸಾಲವನ್ನು ನಿಗದಿತ ವೇಳೆಗೆ ಅನುಗುಣವಾಗಿ ಸರ್ಪಕವಾಗಿ ಮರುಪಾವತಿ ಮಾಡಿ ಸುಸ್ತಿದಾರಗದೆ ಸಂಘದ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದರು .
ಈ ಸಂರ್ಭದಲ್ಲಿ ಸಂಘದ ನರ್ದೇಶಕರಾದ ಎಂ.ಚಂದ್ರಪ್ಪ, ಪುಟ್ಟಮಾದಯ್ಯ, ಸಿ.ಶಿವಣ್ಣ, ಚಿಕ್ಕಮಾದನಾಯಕ, ಎನ್.ಮಹೇಶ್, ಆರ್. ಶಿವಕುಮಾರಸ್ವಾಮಿ, ನಿಂಗರಾಜು, ಶಾಂತಮ್ಮ, ಕಮಲಮ್ಮ, ಕಚೇರಿ ಸಿಬ್ಬಂದಿ ವಿ.ಬಿ.ನರ್ಮಲ, ಮುಖಂಡರಾದ ಸಿ.ನಾಗರಾಜು, ಕಾಳಪ್ಪ, ಸಿ.ರವಿಶಂಕರ್, ಹೊರಳಹಳ್ಳಿ ಮಹದೇವಯ್ಯ ಹಾಗೂ ಇತರರು ಇದ್ದರು.