ರಾಮನಗರ : ರೈತರ ಪಹಣಿಯಲ್ಲಿ ನಮೂದಾಗಿರುವ ನೈಸ್ ರಸ್ತೆ ಸ್ವಾಧೀನವನ್ನು ರದ್ದು ಮಾಡುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿರುವುದಾಗಿ ಶಾಸಕ ಹೆಚ್.ಎ.ಇಕ್ಬಾಲ್ ಹುಸೇನ್ ತಿಳಿಸಿದರು.
ನಗರದ ತಾಲ್ಲೂಕು ಕಚೇರಿಯಲ್ಲಿ ಶಾಸಕ ಹೆಚ್.ಎ.ಇಕ್ಬಾಲ್ ಹುಸೇನ್ ಅಧ್ಯಕ್ಷತೆಯಲ್ಲಿ ಗುರುವಾರ ಬಗರ್ ಹುಕ್ಕುಂ ಸಾಗುವಳಿ ಸಮಿತಿಯ ಸಭೆ ನಂತರ ಅವರು ಮಾತನಾಡಿದರು.
ಹಲವು ರ್ಷಗಳಿಂದ ಕಸಬಾ, ಕೈಲಾಂಚ ಹೋಬಳಿಗಳ ಭಾಗದ ರೈತರು ನಮೂನೆ ೫೦, ೫೩ ಮತ್ತು ೫೭ ಅಡಿ ಸಾಗುವಳಿ ಕೋರಿ ರೈತರು ರ್ಜಿ ಸಲ್ಲಿಸಿದ್ದು, ಅವರಿಗೆ ಭೂಮಿ ಮಂಜೂರಾತಿ ಮಾಡಲು ಅಧಿಕಾರಿಗಳೊಂದಿಗೆ ಹಲವು ಸಭೆ ನಡೆಸಿದ್ದು ಕ್ರಮ ವಹಿಸಲಾಗುತ್ತಿದೆ ಎಂದರು.
ಬಹಳ ರ್ಷಗಳ ಹಿಂದೆಯೆ ರೈತರು ರ್ಜಿ ಸಲ್ಲಿಸಿ ದ್ದಾರೆ. ಪುರಸಭೆ ಇದ್ದಾಗ ಯಾವ ಕಾನೂನು ಇರಲಿಲ್ಲ. ಹಿಂದಿನ ಕಾನೂನು ಜಾರಿ ಅಥವಾ ಹೊಸ ಕಾನೂನು ಜಾರಿ ಮಾಡುವ ಬಗ್ಗೆ ಸಚಿವರ ಜೊತೆ ಮಾತನಾಡಿ ದ್ದೇನೆ. ನೀವು ರೈತರು ಸಲ್ಲಿಸಿರುವ ಸಂಖ್ಯೆಯನ್ನು ನಿಖರವಾದ ಮಾಹಿತಿ ನೀಡಿ, ಎಂದು ರಾಜಸ್ವ ನಿರೀಕ್ಷಕರು ಮತ್ತು ವೃತ್ತ ಕಂದಾಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಸಬಾ ಹೋಬಳಿ ಕಗ್ಗಲಹಳ್ಳಿ ಮತ್ತು ಹಾಗಲಹಳ್ಳಿ ಗ್ರಾಮ ಸೇರಿದಂತೆ ಕೆಲವು ರೈತರ ರ್ಜಿಗಳು ಸಾಗುವಳಿ ಮಂಜೂರಾತಿಗೆ ರ್ಹವಾಗಿಲ್ಲ ಎಂದು ಅಧಿಜಾರಿಗಳು ಪುನರ್ ಪರಿಶೀಲನೆ ನರ್ಣಯ ಮಾಡಿ ದ್ದಾರೆ. ರೈತರಿಗೆ ಸಾಗುವಳಿ ನೀಡುವಲ್ಲಿ ಹಿಂದೆ ಸೇವೆ ಸಲ್ಲಿಸಿದ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರತಿ ತಿಂಗಳ ೧೫ ಮತ್ತು ೩೦ ರಂದು ಬೌಗೋಳಿಕವಾಗಿ ಸ್ಥಳ ಪರಿಶೀಲನೆಗೆ ಅಧಿಕಾರಿಗಳು, ಸಮಿತಿ ಸದಸ್ಯರೊಂದಿಗೆ ತೆರಳಬೇಕು. ನಗರಸಭೆ ವ್ಯಾಪ್ತಿ ಯಿಂದ ೫ ಕಿ.ಮೀಗಿಂತ ಹೆಚ್ಚು ದೂರದಲ್ಲಿರುವ ಗ್ರಾಮಗಳಿಗೆ ವೃತ್ತವನ್ನು ಪರಿಗಣಿಸಿದರೆ ಹೇಗೆ, ವಿಭೂತಿಕೆರೆ ೫ ಕಿ.ಮೀ ವ್ಯಾಪ್ತಿಗೆ ಬರಬಹುದು ಆದರೆ ಉಪ ಗ್ರಾಮಗಳಾಗಿರುವ ಚಕ್ಕೆರೆದೊಡ್ಡಿ, ಆಲೆಮರದ ದೊಡ್ಡಿ ಗ್ರಾಮಗಳು ರ್ವೆ ನಂಬರ್ ಗಳು ೫ ಕಿ.ಮೀಟರ್ ಗಿಂತ ದೂರವಿದೆ. ನಮೂನೆ ೫೭ ರ್ಜಿ ಸಲ್ಲಿಸಿರುವ ರೈತರಿಗೆ ಅನುಕೂಲ ಮಾಡಿಕೊಡಲು ಕಂದಾಯ ಸಚಿವರ ಜೊತೆ ರ್ಚೆ ಮಾಡಿದ್ದು, ಸಕಾರಾತ್ಮಕವಾದ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ ಎಂದರು.
ಸಭೆಯಲ್ಲಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್, ತಹಸೀಲ್ದಾರ್ ತೇಜಸ್ವಿನಿ, ಬಗರ್ ಹುಕ್ಕುಂ ಸಮಿತಿ ಸದಸ್ಯರಾದ ರವಿ, ತಿಮ್ಮಯ್ಯ ಸೇರಿದಂತೆ ಕಂದಾಯ ಇಲಾಖಾ ಅಧಿಕಾರಿಗಳು ಭಾಗವಹಿಸಿದ್ದರು.