ತಿ.ನರಸೀಪುರ : ರೈತರ ಕೃಷಿ ಚಟುವಟಿಕೆಗಳಿಗೆ ಸಕಾಲದಲ್ಲಿ ಸಾಲ ಸೌಲಭ್ಯ ಕಲ್ಪಿಸಿ, ವಸೂಲಾತಿಯಲ್ಲಿಯೂ ಉತ್ತಮ ನರ್ವಹಣೆ ಮಾಡಿರುವುದರಿಂದ ಕುರುಬೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅತ್ಯುತ್ತಮ ಸಹಕಾರ ಸಂಘ ಎಂಬ ಬಿರುದನ್ನು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಹಾಗೂ ತಾಲೂಕು ಮಟ್ಟದ ಸಹಕಾರ ಸಪ್ತಾಹದಲ್ಲಿ ಪಡೆದಿದ್ದೇವೆ ಎಂದು ಅಧ್ಯಕ್ಷ ಗುರುಬಸಪ್ಪ ಸಂತಸ ಹಂಚಿಕೊಂಡರು.
ತಾಲೂಕಿನ ಕುರುಬೂರು ಗ್ರಾಮದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಮಂಗಳವಾರ ಅಯೋಜಿಸಿದ್ದ ೨೦೨೪-೨೫ನೇ ಸಾಲಿನ ರ್ವ ಸದಸ್ಯರ ವರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಯಾವುದೇ ಒಂದು ಸಹಕಾರ ಸಂಘ ಉತ್ತಮವಾಗಿ ಕರ್ಯನರ್ವಹಿಸಬೇಕಾದರೆ ಅಲ್ಲಿನ ಸಹಕಾರಿ ಬಂಧುಗಳು, ಆಡಳಿತ ಮಂಡಳಿ ನರ್ದೇಶಕರು ಮತ್ತು ಮುಖ್ಯ ಕರ್ಯನರ್ವಾಕರ ಸಹಕಾರ ಕಾರಣವಾಗಿರುತ್ತದೆ. ನಮ್ಮ ಸಹಕಾರಿ ಸಂಘವೂ ಕೂಡ ಉತ್ತಮ ಸಂಘವೆಂಬ ಗೌರವಕ್ಕೆ ಭಾಜನರಾಗಲು ಕಾರಣರಾದ ರೈತರಿಗೆ ಗೌರವವನ್ನು ರ್ಪಿಸುತ್ತೇವೆ ಎಂದರು.
ರೈತರು ತಾವು ಪಡೆದ ಬೆಳೆ ಸಾಲವನ್ನು ನಿಗದಿತ ಸಮಯಕ್ಕೆ ಸರಿಯಾಗಿ ಪಾವತಿ ಮಾಡಿದ್ದರಿಂದಲೇ ನಮ್ಮ ಸಂಘವು ೮ ಲಕ್ಷದ ೯೦ ಸಾವಿರ ರೂಗಳ ನಿವ್ವಳ ಲಾಭ ಲಾಭಗಳಿಸಿದೆ. ಒಟ್ಟು ೬ ಕೋಟಿ, ೬೪ ಲಕ್ಷದ ೭೫ ಸಾವಿರ ಸಾಲವನ್ನು ಈಗಾಗಲೇ ನೀಡಲಾಗಿದೆ. ಜಿಲ್ಲಾ ಸಹಕಾರಿ ಬ್ಯಾಂಕ್ ನಿಂದಲೂ ಮಹಿಳೆಯರಿಗೆ ೧ ಕೋಟಿ ೯೮ ಲಕ್ಷ ೫೦ ಸಾವಿರ ಹಾಗೂ ಸ್ವಂತ ಬಂಡವಾಳ ದಿಂದ ೮೪ ಲಕ್ಷ ರೂಪಾಯಿ ಸಾಲ ನೀಡಿದ್ದು ಎಲ್ಲರೂ ಉತ್ತಮ ರೀತಿಯಲ್ಲಿ ಪಾವತಿ ಮಾಡುತ್ತಿದ್ದಾರೆ ಎಂದು ಗುರುಬಸಪ್ಪ ತಿಳಿಸಿದರು.
ಸಂಘದ ಉಪಾಧ್ಯಕ್ಷ ಕು.ಶಿ.ಭೃಂಗೇಶ್, ನರ್ದೇಶಕರಾದ ಚಿನ್ನಸ್ವಾಮಿ, ಎಂ.ರವಿ, ಕೆ.ಜಿ. ವೀರಣ್ಣ, ಶಿವಣ್ಣ, ಬಸವರಾಜು, ನಂಜುಂಡಯ್ಯ, ಶಿವರುದ್ರಮ್ಮ, ಭವ್ಯ, ಸೋಮಶೇಖರ್, ಜಿಲ್ಲಾ ಬ್ಯಾಂಕ್ ಪ್ರತಿನಿಧಿ ಎನ್.ಎಸ್.ಶೇಖರ್, ಮುಖ್ಯ ಕರ್ಯನರ್ವಾಹಕ ಕೆ.ಸಿ.ಶ್ರೀನಿವಾಸ್ ಮರ್ತಿ, ಕಂಪ್ಯೂಟರ್ ಆಪರೇಟರ್ ಪಿ.ಅರುಣಕುಮಾರಿ, ಮುಖಂಡರಾದ ಕೆ.ಬಿ.ಬಸವರಾಜು, ಕೆ.ಬಿ. ಮಹದೇವ ಪ್ರಸಾದ್, ಗುರುಮರ್ತಿ, ವೀರೇಶ್, ಜಗಪತಿ, ಕನ್ನಹಳ್ಳಿ ಮಹದೇವ, ಕೆ.ಎಂ.ಶಿವಕುಮಾರ್, ಎಸ್. ಎಸ್.ಎಸ್.ಶಾಂತಮರ್ತಿ, ಕೆ.ಆರ್.ಚಿಕ್ಕಸ್ವಾಮಿ, ಮಣಿಕಂಠ, ಕನ್ನಹಳ್ಳಿ ಪಾಪಣ್ಣ, ಹಾಗೂ ಸಂಘದ ವ್ಯಾಪ್ತಿಯ ಸೇರುದಾರ ರೈತ ಸದಸ್ಯರು ಸೇರಿದಂತೆ ಇದ್ದರು.